ಪತ್ರಿಕಾಗೋಷ್ಟಿಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಆರೋಪ
ಶಿವಮೊಗ್ಗ : ರಾಜ್ಯ ಸರ್ಕಾರ ಲ್ಯಾಂಡ್ ಜಿಹಾದ್ ಮಾಡಲು ಹೊರಟಿದೆ. ಜಿಲ್ಲೆಯಲ್ಲಿ ರೈತರಿಗೆ ಭೂಮಿ ಕೊಡುವಲ್ಲಿ ಇಂಡೀಕರಣ ಮಾಡುವುದನ್ನು ಬಿಟ್ಟು ವಕ್ಫ್ ಆಸ್ತಿ ವಿಚಾರದಲ್ಲಿ ಆಸಕ್ತಿ ತೋರುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಆರೋಪಿಸಿದರು.
ಮಂಗಳವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಸರ್ಕಾರಿ ಭೂಮಿಯನ್ನು ಇಂಡೀಕರಣ ಮಾಡಿ ಜನರಿಗೆ ಭೂಮಿ ಕೊಡಲು ಆಗುತ್ತಿಲ್ಲ. ರೈತರು, ಮಠ, ಮಂದಿರಗಳ ಆಸ್ತಿಯನ್ನು ವಕ್ಫ್‍ಗೆ ಸೇರಿಸುವ ಆಸಕ್ತಿ ಯಾಕೆ?, ಒಂದು ಸಮುದಾಯವನ್ನು ಓಲೈಸಲು ರಾಜ್ಯದ ಕಾಂಗ್ರೇಸ್ ಸರ್ಕಾರ ಲ್ಯಾಂಡ್ ಜಿಹಾದ್ ನಡೆಸುತ್ತಿದೆ. ಬೇಕಾಬಿಟ್ಡಿ ಆಸ್ತಿಗಳ ಸ್ವಾಧೀನ ಪಡಿಸಿಕೊಳ್ಳು ಯತ್ನಿಸುತ್ತಿರುವ ರಾಜ್ಯ ಸರ್ಕಾರ ಹಿಂದೂ ಗಳ ಭೂಮಿಯನ್ನ ಅಲ್ಲದೆ ಮುಸ್ಲಿಂ ಸಮುದಾಯದವರ ಭೂಮಿಯನ್ನು ವಶಪಡಿಸಿಕೊಳ್ಳುತ್ತಿದ್ದು, ಧರ್ಮ ಧರ್ಮಗಳ ನಡುವಿನ ವಿವಾದವನ್ನಾಗಿ ಸೃಷ್ಟಿಸಲು ಯತ್ನಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಕೇಂದ್ರ ಸರ್ಕಾರ ವಕ್ಫ್ ಕಾಯ್ದೆಗೆ ತಿದ್ದುಪಡಿಗೆ ಚಿಂತನೆ ನಡೆಸಿ, ಜಂಟೀ ಸಂಸದೀಯಮಂಡಳಿ ರಚನೆ ಮಾಡಿದ್ದರಿಂದ ಗಾಬರಿಯಾಗಿರುವ ವಿಪಕ್ಷಗಳು ಮನಬಂದಂತೆ ವರ್ತಿಸುತ್ತಿವೆ. ಜಂಟೀ ಸಂಸದೀಯಮಂಡಳಿ ಸಭೆಗೆ ಹಾಜರಾಗದೆ ಯಾವ್ಯಾವ ರೀತಿ ಘಟನಾವಳಿಗಳು ನಡೆಯುತ್ತಿವೆ ಎಂಬುದು ಗೊತ್ತಾಗುತ್ತಿದೆ. ಯಾರನ್ನೋ ಓಲೈಸಲು ಈ ವರ್ತನೆ ರಾಜ್ಯ ಸರ್ಕಾರಕ್ಕೆ ಸರಿಯಲ್ಲ ಎಂದರು.
ರಾಜ್ಯದಲ್ಲಿ ವಕ್ಫ್ ನ್ಯಾಯಾಲಯದಲ್ಲಿ ವಕ್ಫ್ ಆಸ್ತಿಯ ಅನಧಿಕೃತ ಒತ್ತುವರಿಯ 3720 ಪ್ರಕರಣಗಳ 319 ಎಕರೆ ಭೂಮಿಯ ಪ್ರಕರಣಗಳು ದಾಖಲಾಗಿವೆ. 1400 ಕ್ಕಿಂತ ಹೆಚ್ಚಿನ ಪ್ರಕರಣಗಳು ತೀರ್ಪಿಗೆ ಕಾದಿವೆ. ವ್ಯವಸ್ಥಿತವಾಗಿ ರಾಜ್ಯದಲ್ಲಿ ತರಾತುರಿಯಲ್ಲಿ ಉದ್ದೇಶಪೂರ್ವಕವಾಗಿ ವಕ್ಫ್ ಆಸ್ತಿ ಖಾತೆ ಏರಿಸಲು ಅಧಿಕೃತವಾಗಿ ಸರ್ಕಾರ ಕೆಲಸ ಮಾಡುತ್ತಿದೆ ಎಂದ ಸಂಸದ ಬಿ.ವೈ ರಾಘವೇಂದ್ರ ಅವರು ಬಿಜೆಪಿ ಇದರ ವಿರುದ್ದ ಹೋರಾಟ ಮುಂದುವರೆಸಲಿದೆ. ತಕ್ಷಣವೇ ರೈತರ, ಮಠಮಂದಿರಗಳ ಭೂಮಿಯನ್ನು ವಕ್ಫ್ ಖಾತೆಗೆ ಸೇರಿಸುವ ಕೆಲಸವನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.
ರೈತರಿಗೆ ವಿಮೆ ಪರಿಹಾರ ಸಿಗಲಿದೆ :
ಶಿವಮೊಗ್ಗ : ಬೆಳೆ ವಿಮೆ ಯೋಜನೆಯಡಿಯಲ್ಲಿ ಜಿಲ್ಲೆಯ ರೈತರಿಗೆ ಸುಮಾರು ರೂ.435 ಕೋಟಿ ಬಿಡುಗಡೆಯಾಗಲಿದ್ದು, 50,383 ರೈತರಿಗೆ ಎಕರೆಗೆ 25 ಸಾವಿರ ರೂ.ಗಳಾದರೂ ವಿಮೆ ಪರಿಹಾರ ಸಿಗಲಿದೆ. 2023-24ರ ಬೆಳೆ ವಿಮೆಗಾಗಿ ಜಿಲ್ಲೆಯಲ್ಲಿ ಸುಮಾರು 50,383 ರೈತರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಶಿವಮೊಗ್ಗ ಅಗ್ರಿಕಲ್ಚರ್ ಇನ್ಶುರೆನ್ಸ್ ಕಂಪನಿಗೆ ಇದರ ಟೆಂಡರ್ ನೀಡಲಾಗಿತ್ತು. ಕಳೆದ ವರ್ಷ ಬರಗಾಲ ಬಂದಿತ್ತು. ಸುಮಾರು 87 ಸಾವಿರ ಎಕರೆ ಜಮೀನಿನಲ್ಲಿ ಬೆಳೆಯೇ ಇರಲಿಲ್ಲ. ರೂ.445 ಕೋಟಿ ಪರಿಹಾರ ನೀಡಬೇಕಿತ್ತು. ಇದರಲ್ಲಿ ರೈತರು ಸುಮಾರು ರೂ.22.50 ಕೋಟಿ ವಿಮೆ ಕಟ್ಟಿದ್ದಾರೆ. ಜಿಲ್ಲೆಯಲ್ಲಿ ಅಡಿಕೆ ಬೆಳೆಗೆ ಹೆಚ್ಚು ನಷ್ಟ ಉಂಟಾಗಿದೆ. ಇದರ ಜೊತೆಗೆ ಶುಂಠಿ, ಮಾವು, ಮೆಣಸು ಕೂಡ ಸೇರಿದೆ. ಆದರೆ, ಸುಮಾರು 48619 ಅಡಿಕೆ ಬೆಳೆಗಾರರು ವಿಮೆಗಾಗಿ ಅರ್ಜಿ ಹಾಕಿದ್ದಾರೆ. ಸುಮಾರು 84 ಸಾವಿರ ಎಕರೆ ಪ್ರದೇಶದಲ್ಲಿ ಅಡಿಕೆ ಬೆಳೆ ನಷ್ಟವಾಗಿದೆ. 445 ಕೋಟಿ ರೂ.ಗಳಲ್ಲಿ 435 ಕೋಟಿ ರೂ. ಅಡಿಕೆ ಬೆಳೆಗೆ ಪರಿಹಾರ ಸಿಗಲಿದೆ. ಇನ್ನು 8-10 ದಿನಗಳಲ್ಲಿ ರೈತರ ಖಾತೆಗೆ ಹಣ ಜಮಾ ಆಗುತ್ತದೆ ಎಂದು ಮಾಹಿತಿ ನೀಡಿದರು.
ಅಬಕಾರಿ ಇಲಾಖೆಯ ಅಧಿಕಾರಿಗಳ ವರ್ಗಾವಣೆ :
ಅಬಕಾರಿ ಇಲಾಖೆಯ ಅಧಿಕಾರಿಗಳ ವರ್ಗಾವಣೆಯಲ್ಲಿ ಮುಖ್ಯಮಂತ್ರಿಗಳು ಮತ್ತು ಅಬಕಾರಿ ಸಚಿವರ ನಡುವೆ ಪೈಪೆÇೀಟಿ ನಡೆದಿದ್ದು, ನೂರಾರು ಕೋಟಿಯ ಅವ್ಯವಹಾರ ಬಯಲಿಗೆ ಬಂದಿದೆ. ಅಬಕಾರಿ ಇಲಾಖೆಯಲ್ಲಿ ಭ್ರμÁ್ಟಚಾರದ ಬಗ್ಗೆ ಈಗಾಗಲೆ ಮಧ್ಯ ಮಾರಾಟಗಾರರ ಸಂಘವೇ ರಾಜ್ಯಪಾಲರಿಗೆ, ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಲಿಖಿತ ದೂರು ನೀಡಿದೆ. ಅಬಕಾರಿ ಇಲಾಖೆ ಅಧಿಕಾರಿಗಳ ವರ್ಗಾವಣೆಯ ವಿಚಾರದಲ್ಲಿ ಅಬಕಾರಿ ಸಚಿವ ಅರ್.ಬಿ.ತಿಮ್ಮಾಪುರ್ ಅವರ ಮಕ್ಕಳು ಹಸ್ತಕ್ಷೇಪ ಮಾಡುತ್ತಿದ್ದು, ಮುಖ್ಯಮಂತ್ರಿಗಳು ಈ ಪಟ್ಟಿಯನ್ನು ತಡೆ ಹಿಡಿದಿದ್ದಾರೆ. ಇದರಿಂದ ಕೋಟ್ಯಾಂತರ ರೂಪಾಯಿಗಳ ಹಣದ ಅವ್ಯವಹಾರ ಬಯಲಿಗೆ ಬಂದಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ ಸರ್ಕಾರಿ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದ್ದು, ಸರ್ಕಾರ ಭ್ರμÁ್ಟಚಾರದಲ್ಲಿ ತೊಡಗಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ, ಡಾ. ಧನಂಜಯ ಸರ್ಜಿ, ಬಿಜೆಪಿ ಜಿಲ್ಲಾಧ್ಯಕ್ಷ ಮೇಘರಾಜ್, ಜಿಲ್ಲಾ ಪ್ರಧಾನಕಾರ್ಯದರ್ಶಿ ಶಿವರಾಜು, ಪದಾಧಿಕಾರಿಗಳಾದ ಹರಿಕೃಷ್ಣ, ವಿನ್ಸೆಂಟ್, ಗಣೇಶ್ ಬಿಳಕಿ, ಹರೀಶ್ ಮತ್ತಿತರರು ಉಪಸ್ಥಿತರಿದ್ದರು.