Saturday, January 18, 2025
Google search engine
Homeಇ-ಪತ್ರಿಕೆಪಾಲಿಕೆ ಮುಂಭಾಗ ಕನ್ನಡ ಧ್ವಜ ಸ್ತಂಭ ನಿರ್ಮಿಸಿ

ಪಾಲಿಕೆ ಮುಂಭಾಗ ಕನ್ನಡ ಧ್ವಜ ಸ್ತಂಭ ನಿರ್ಮಿಸಿ


ಪಾಲಿಕೆ ಆಡಳಿತಕ್ಕೆ ಕನ್ನಡಪರ ಹೋರಾಟಗಾರರ ಆಗ್ರಹ

ಶಿವಮೊಗ್ಗ: ನಗರ ಪಾಲಿಕೆ ಆವರಣದಲ್ಲಿ ಶಾಶ್ವತ ಕನ್ನಡ ಧ್ವಜ ಸ್ತಂಭವನ್ನು ಸ್ಥಾಪಿಸಬೇಕು ಎಂದು ಕನ್ನಡಪರ ಹೋರಾಟಗಾರರು ಇಂದು ಆಯುಕ್ತರಿಗೆ ಮನವಿ ಸಲ್ಲಿಸಿದರು.

ಎಲ್ಲಾ ಸರ್ಕಾರಿ ಕಚೇರಿಗಳ ಮೇಲೆ ಕನ್ನಡ ಧ್ವಜ ಹಾರಿಸಬೇಕೆಂದು ಸರ್ಕಾರವೇ ಆದೇಶ ಹೊರಡಿಸಿದೆ. ಆದರೆ, ಪಾಲಿಕೆಯಲ್ಲಿ ಕನ್ನಡ ಧ್ವಜವನ್ನು ಒಂದು ಕೋಲಿನ ಮೂಲಕ ಹಾಕಿರುವುದು ಅಗೌರವ ತರುವಂತಾಗಿದೆ. ಕನ್ನಡ ಧ್ವಜ ವರ್ಷಪೂರ್ತಿ ಹಾರಾಡಬೇಕು. ಅದಕ್ಕಾಗಿ ಶಾಶ್ವತವಾದ ಧ್ವಜ ಸ್ತಂಭ ನರ‍್ಮಿಸಬೇಕು ಎಂದು ಒತ್ತಾಯಿಸಿದರು.

ಪಾಲಿಕೆಯವರು ಧ್ವಜ ಸ್ತಂಭ ನಿರ್ಮಿಸದಿದ್ದರೆ ಕನ್ನಡ ಪರ ಹೋರಾಟಗಾರರೇ ಈ ಕೆಲಸ ಮಾಡಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಪ್ರಮುಖರಾದ ಮಧುಸೂದನ್ ಎಸ್.ಎಂ., ಎಂ. ರಾಮಪ್ರಸಾದ್, ನೂರುಲ್ಲಾ, ನಯಾಜ್, ರಫೀ, ಶರತ್, ಮೊದಲಾದವರಿದ್ದರು.

RELATED ARTICLES
- Advertisment -
Google search engine

Most Popular

Recent Comments