ಮಂಗಳೂರು: ‘ಗುಡ್ಡೆದ ಭೂತ’ದ ಖ್ಯಾತಿಯ ಸದಾನಂದ ಸುವರ್ಣ ಇಂದು (ಜುಲೈ 16) ನಿಧನರಾಗಿದ್ದಾರೆ.
ಅವರಿಗೆ 93 ವರ್ಷ ವಯಸ್ಸಾಗಿತ್ತು. ಇಂದು ವಯೋಸಹ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಮೂಲತಃ ಮೂಲ್ಕಿಯವರಾದ ಸದಾನಂದ ಸುವರ್ಣ ನಿರ್ದೇಶನದ ಜೊತೆಗೆ ಸಿನಿಮಾ ನಿರ್ಮಾಣದಲ್ಲಿಯೂ ತೊಡಗಿಕೊಂಡಿದ್ದರು. ಜೊತೆಗೆ ರಂಗಭೂಮಿಯಲ್ಲಿಯೂ ಹಲವು ನೆನಪುಳಿವ ನಾಟಕಗಳನ್ನು ನಿರ್ದೇಶಿಸಿದ್ದಾರೆ.
ಬಾಲಿವುಡ್ ನಟ ನಸಿರುದ್ಧೀನ್ ಶಾ ನಟಿಸಿದ್ದ ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ಮನೆ’ ಮತ್ತು ಕಾಸರವಳ್ಳಿ ನಿರ್ದೇಶನದ ಚಾರುಹಾಸನ್ ನಟನೆಯ ‘ತಬರನ ಕತೆ’ ಗೆ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದರು.
ಪ್ರಕಾಶ್ ರೈ ನಟನಾಗಿ ಪ್ರಸಿದ್ದಿ ಪಡೆಯಲು ಮತ್ತು ಕನ್ನಡ ಟಿವಿ ಜಗತ್ತಿನ ಎವರ್ಗ್ರೀನ್ ಧಾರಾವಾಹಿಗಳಲ್ಲಿ ಒಂದಾದ ‘ಗುಡ್ಡದ ಭೂತ’ವನ್ನು ನಿರ್ದೇಶಿಸಿದ್ದು ಇವರ ಹೆಗ್ಗುರುತಾಗಿದೆ.
ರಂಗಭೂಮಿಯಲ್ಲಿಯೂ ಸಹ ಸದಾನಂದ ಸುವರ್ಣ ಸಕ್ರಿಯರಾಗಿದ್ದರು. ಸದಾನಂದ ಸುವರ್ಣ ನಿರ್ಮಾಣ ಮಾಡಿದ್ದ ‘ಘಟಶ್ರಾದ್ಧ’ ಸಿನಿಮಾಕ್ಕೆ ಕೇಂದ್ರ ಸರ್ಕಾರವು ಸುವರ್ಣ ಕಮಲ ನೀಡಿತ್ತು. ಕಳೆದ ಸುಮಾರು ಹತ್ತು ವರ್ಷದಿಂದ ಅವರು ಮಂಗಳೂರಿನಲ್ಲಿಯೇ ನೆಲೆಸಿದ್ದರು.