ಹರಿಹರ : ನಗರದ ತುಂಗಭದ್ರಾ ನದಿಗೆ ಮಹಿಳೆಯರು ದಕ್ಷಿಣಾಯಣ ಪುಣ್ಯಕಾಲದ ಹಿನ್ನೆಲೆಯಲ್ಲಿ ಭಗೀರಥಿ ಪೂಜೆ ಸಲ್ಲಿಸುವ ಮೂಲಕ ತಮ್ಮ ಭಕ್ತಿಯನ್ನು ಮೆರೆದರು.
ಪ್ರತಿವರ್ಷದ ಪದ್ದತಿಯಂತೆ ದಕ್ಷಿಣಾಯಣ ಪುಣ್ಯಕಾಲದ ವೇಳೆ ದಕ್ಷಿಣ ಭಾರತದ ನದಿಗಳು ಉಕ್ಕಿ ಹರಿಯುವ ಆಷಾಢ ಮಾಸದಲ್ಲಿ ಹೊಸದಾಗಿ ಹೊಳೆ ಬರುವ ಸಂದರ್ಭದಲ್ಲಿ ಮಹಿಳೆಯರು ನದಿಗೆ ತೆರಳಿ ಭಗೀರಥಿ ಪೂಜೆಯನ್ನು ಸಲ್ಲಿಸುವುದು ವಾಡಿಕೆಯಾಗಿದೆ. ಮಂಗಳವಾರ ನಗರದ ಹತ್ತಿರವಿರುವ ರಾಘವೇಂದ್ರಸ್ವಾಮಿ ಮಠದ ಹಿಂಭಾಗದಲ್ಲಿನ ತುಂಗಾಭದ್ರಾ ನದಿಯ ತೀರದಲ್ಲಿ ವಿಶೇಷ ಪೂಜೆ ಸಲ್ಲಿಸಿ,ಮುತ್ತೈದೆಯರಿಗೆ ಉಡಿ ತುಂಬಿಸಿ, ಬಾಗೀನ ಅರ್ಪಿಸಿ ಸಂಭ್ರಮ ಪಡುವ ಮೂಲಕ ಆಚರಣೆ ಮಾಡಿದರು.
ಇಂದಿನಿಂದ ಉತ್ತರ ದಿಕ್ಕಿನತ್ತ ಸಾಗಿರುವ ಸೂರ್ಯ ತನ್ನ ಪಥ ವನ್ನು ಬದಲಿಸಿ ದಕ್ಷಿಣದತ್ತ ಸಾಗುತ್ತಾನೆ. ಹಾಗಾಗಿ ಈ ಸಮಯದಲ್ಲಿ ದಕ್ಷಿಣಾಯಣ ಕಾಲ ಆರಂಭವಾಗುತ್ತದೆ ಆದ್ದರಿಂದ ದಕ್ಷಿಣ ಭಾರತ ದಲ್ಲಿ ನದಿಗಳೆಲ್ಲಾ ತುಂಬಿ ಹರಿಯುತ್ತವೆ. ಅದರಂತೆ ಉತ್ತರಾಯಣ ಪುಣ್ಯಕಾಲ ಅಂದರೆ ಮಕರ ಸಂಕ್ರಾಂತಿಯ ದಿನದಂದು ಉತ್ತರ ಭಾರತದ ನದಿಗಳೆಲ್ಲಾ ತುಂಬಿ ಹರಿಯುತ್ತವೆ ಎಂದು ನಂಬಲಾಗಿದೆ. ಪ್ರತಿವರ್ಷ ಜುಲೈ ತಿಂಗಳ 16 ಅಥವಾ 17ರಂದು ದಕ್ಷಿಣಾಯಣ ಪುಣ್ಯಕಾಲ ಆರಂಭವಾಗಿ ಜನವರಿ 14ರ ವರೆಗೆ ಇರುತ್ತದೆ. ಈ ವರ್ಷ ಜುಲೈ 16 ಮಂಗಳವಾರದಂದು ದಕ್ಷಿಣಾಯಣ ಪುಣ್ಯಕಾಲ ಆರಂಭವಾಗುವುದು.ದಾವಣಗೆರೆ ಸೇರಿದಂತೆ ಹಾವೇರಿ, ವಿಜಯ ನಗರ ಮುಂತಾದ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಜನರು ನದಿಯ ಎರಡೂ ಬದಿಯ ದಂಡೆಗಳಲ್ಲಿ ಸೇರಿ ತುಂಗಭದ್ರಾ ನದಿಗೆ ಬಾಗೀನ ಅರ್ಪಿಸಿ, ಭಗೀರಥಿ ಪೂಜೆಯನ್ನು ನೆರವೇರಿಸಿದರು.
ನಂತರದಲ್ಲಿ ತಾವುಗಳು ಡಬ್ಬಿ, ಬುಟ್ಟಿಗಳಲ್ಲಿ ತಂದಿದ್ದ ವಿಶೇಷ ಭಕ್ಷ, ಭೋಜ್ಯಗಳನ್ನು,ತಿಂಡಿ ತಿನಿಸುಗಳನ್ನು ಸೇವಿಸುವ ಮೂಲಕ ಹರ್ಷದಿಂದ ತಮ್ಮ ತಮ್ಮ ಮನೆಗಳಿಗೆ, ಊರುಗಳಿಗೆ ತೆರಳಿದರು.