ದಾವಣಗೆರೆ: ಕನ್ನಡಪ್ರಭ ಪತ್ರಿಕೆ ಹಿರಿಯ ವರದಿಗಾರ ನಾಗರಾಜ್ ಎಸ್. ಬಡದಾಳ್ ಅವರು 29 ಮತಗಳ ಅಂತರದಿಂದ ಗೆದ್ದು ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕೂಟದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಾಗರಾಜ್ ಎಸ್. ಬಡದಾಳ್ ಅವರು 74 ಮತಗಳನ್ನು ಪಡೆದಿದ್ದರೆ, ಸುವರ್ಣ ನ್ಯೂಸ್ ಹಿರಿಯ ವರದಿಗಾರ ಡಾ. ವರದರಾಜ್ ಅವರಿಗೆ 45 ಮತಗಳು ಬಂದಿವೆ. ಮತ್ತೊರ್ವ ಸ್ಪರ್ಧಿ ದಾವಣಗೆರೆ ಕನ್ನಡಿಗ ಪತ್ರಿಕೆಯ ಸಂಪಾದಕ ರವಿಯವರಿಗೆ ಅವರಿಗೆ 36 ಮತಗಳು ಬಂದಿವೆ. ಉಳಿದ ಒಂದು ಮತ ತಿರಸ್ಕೃತಗೊಂಡಿದೆ.
ವರದಿಗಾರರ ಕೂಟದಲ್ಲಿ ಒಟ್ಟು 164 ಮತಗಳು ಇದ್ದು, ಈ ಪೈಕಿ 156 ಮತಗಳು ಚಲಾವಣೆಯಾಗಿದ್ದವು. ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಸ್ಥಾನದ
ಚುನಾವಣೆಗೆ ಕೂಟದ ಕಚೇರಿಯಲ್ಲಿ ಬೆಳಿಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ ನಡೆಯಿತು. ಮಧ್ಯಾಹ್ನ 2 ಗಂಟೆಗೆ ಮತಗಳ ಎಣಿಕೆ ಮಾಡಿ ಫಲಿತಾಂಶ ಪ್ರಕಟಿಸಲಾಯಿತು. ಚುನಾವಣಾಧಿಕಾರಿಯಾಗಿ ಹಿರಿಯ ಪತ್ರಕರ್ತರಾದ ಮಲ್ಲಿಕಾರ್ಜುನ್ ಕಬ್ಬೂರ್ ಹಾಗೂ ಸಹ ಚುನಾವಣಾಧಿಕಾರಿಯಾಗಿ ಡಿ. ರಂಗನಾಥ್ ರಾವ್ ಅವರು ಕಾರ್ಯನಿರ್ವಹಿಸಿದರು.
ಕಣದಲ್ಲಿ ಹೆಚ್.ಎಂ.ಪಿ. ಕುಮಾರ್, ಮಧುನಾಗರಾಜ ಎನ್.ಎಸ್., ನಾಗರಾಜ ಎಸ್. ಬಡದಾಳ್, ರವಿ. ಆರ್, ಡಾ. ಸಿ. ವರದರಾಜ್ ಅವರು ಕಣದಲ್ಲಿ ಇದ್ದರು. ಆದ್ರೆ, ಹೆಚ್. ಎಂ. ಪಿ. ಕುಮಾರ್ ಹಾಗೂ ಮಧು ನಾಗರಾಜ್ ಸ್ಪರ್ಧೆಗೆ ಉತ್ಸಾಹ ತೋರಲಿಲ್ಲ. ಹಾಗಾಗಿ, ಮೂವರ ಮಧ್ಯೆ ಪೈಪೋಟಿ ನಡೆಯಿತು. ನಾಗರಾಜ್ ಎಸ್.ಬಡದಾಳ್ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ವರದಿಗಾರರ ಕೂಟದಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು.