ಭದ್ರಾವತಿ: ರಾಜ್ಯದಲ್ಲಿ ರಸ್ತೆ, ರೈಲ್ವೆ, ವಿಮಾನಯಾನದ ಅಭಿವೃದ್ದಿ ಕಾಮಗಾರಿಗಳಿಗೆ ಹೆಚ್ಚಿನ ಆಧ್ಯತೆ ನೀಡುವ ಮೂಲಕ ಯುವಕರ ಭವಿಷ್ಯ ಕಟ್ಟುವ ಕೆಲಸ ಕೇಂದ್ರದ ಬಿಜೆಪಿ ಸರ್ಕಾರದಿಂದ ನಡೆಯುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಅವರು ನಗರದ ರೈಲ್ವೇ ನಿಲ್ದಾಣಧಲ್ಲಿ ಶಿವಮೊಗ್ಗ -ಚನೈ ಮಾರ್ಗದ ರೈಲು ಸಂಚಾರಕ್ಕೆ ಭದ್ರಾವತಿಯಲ್ಲಿ ಚಾಲನೆ ನೀಡಿ ಮಾತನಾಡಿದರು.
ಉನ್ನತ ಶಿಕ್ಷಣ ಪಡೆದುಕೊಳ್ಳುವ ಮಕ್ಕಳು ಉದ್ಯೋಗಕ್ಕಾಗಿ ಒಂದೆಡೆಯಿಂದ ಇನ್ನೊಂದೆಡೆಗೆ ಸುಲಭವಾಗಿ ಹಾಗೂ ಸರಳವಾಗಿ ಸಂಚರಿಸಲು ಅನುಕೂಲವಾಗುವ ದೃಷ್ಟಿಯಿಂದ ಸಾರಿಗೆ ವ್ಯವಸ್ಥೇಗೆ ಹೆಚಚಿನ ಅನುಕೂಲ ಆಗುವ ದೃಷ್ಟಿಯಿಂದ ಸಂಚಾರ ಮಾರ್ಗಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದರು.
ಬೀರೂರು ಶಿವಮೊಗ್ಗ ಮಾರ್ಗದ ರೈಲ್ವೆ ಹಳಿಗಳ ಡಬ್ಲಿಂಗ್ ಕಾರ್ಯಗಳು ಶೀಘ್ರದಲ್ಲೆ ಪೂರ್ಣಗೊಳ್ಳಲಿದ್ದು ಮಲೆನಾಡಿನ ಶಿವಮೊಗ್ಗ ರೈಲ್ವೆ ನಿಲ್ದಾಣ ಜಂಕ್ಷನ್ ಆಗಿ ಪರಿವರ್ತನೆಗೊಳ್ಳಲಿದೆ. ಅರಸೀಕರೆಯಿಂದ ಭದ್ರಾವತಿವರೆಗೂ ರಸ್ತೆ ಅಭಿವೃದ್ದಿ ಕಾರ್ಯಗಳು ಕೆಲವು ಕಾರಣಗಳಿಂದಾಗಿ ತಡವಾಗುತ್ತಿದ್ದು ರಾಜ್ಯ ಸರ್ಕಾರ ಶೀಘ್ರದಲ್ಲಿಯೆ ಸಮಸ್ಯೆ ಬಗೆಹರಿಸಿಕೊಡುವುದನ್ನು ಕಾಯಲಾಗುತ್ತಿದೆ. ಹಾಗೂ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಇರುವ ಲ್ಯಾಂಡಿಂಗ್ ಸಮಸ್ಯೆಯನ್ನು ಸಹ ಬಗೆಹರಿಸಲಾಗುವುದು ಎಂದರು.
ಕೇಂದ್ರ ಉಕ್ಕು ಸಚಿವರಾದ ಎಚ್.ಡಿ.ಕುಮಾರಸ್ವಾಮಿಯವರು ಈಗಾಗಲೆ ವಿಐಎಸ್‌ಎಲ್ ಕಾರ್ಖಾನೆಗೆ ಭೇಟಿ ನೀಟಿ ಅಭಿವೃದ್ದಿ ಮಾಡುವ ಎಲ್ಲಾ ಚಿಂತನೆಗಳನ್ನು ಮಾಡಿದ್ದಾರೆ. ರಮಣದುರ್ಗ ದಿಂದ ಕಬ್ಬಿಣದ ಅದಿರು ನೇರವಾಗಿ ಕಾರ್ಖಾನೆಗೆ ಬರುವಂತೆ ಮಾಡಲು ಅಗತ್ಯ ಚಿಂತನೆ ನಡೆಸಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಚಿಕ್ಕಜಾಜೂರಿನಿಂದ ಶಿವಮೊಗ್ಗದ ಕಡೆಗೆ ಹಳಿಯನ್ನು ಲಿಂಕ್ ಮಾಡಿದರೆ ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆಗೆ ನೇರವಾಗಿ ಅದಿರು ಸರಬರಾಜಾಗುತ್ತದೆ ಎಂದರು.
ಮೈಸೂರು ವಿಭಾಗದ ರೈಲ್ವೆ ಅಧಿಕಾರಿ ಆರ್.ಪಿ.ಶಾಸ್ತ್ರಿ ಮಾತನಾಡಿ, ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ರೈಲ್ವೆ ಸ್ಟೇಷನ್‌ಗಳನ್ನು ಉನ್ನತೀಕರಿಸುವ “ಅಮೃತ್ ಸ್ಟೇಷನ್” ಯೋಜನೆಯಡಿ ಶಿವಮೊಗ್ಗ ಸಾಗರ ತಾಳಗುಪ್ಪ ಸ್ಟೇಷನ್‌ಗಳು ಆಯ್ಕೆಯಾಗಿದ್ದು ಸಂಸದ ಬಿ.ವೈ.ರಾಘವೇಂದ್ರ ಅವರ ಬೇಡಿಕೆಯ ಸಲುವಾಗಿ ಭದ್ರಾವತಿ ಸ್ಟೇಷನ್ ಸಹ ಅಭಿವೃದ್ದಿಯ ಪಟ್ಟಿಯಲ್ಲಿ ಸೇರಿಸಿಕೊಳ್ಳಲಾಗಿದೆ. ಯಾವ ನಿಲ್ದಾಣ ಕ್ಕೆ ಯಾವ ಸೌಲಭ್ಯ ಅಗತ್ಯವಿರುತ್ತದೆಯೋ ಅದನ್ನು ಅನುಧಾನ ಬಿಡುಗಡೆಯಾದ ಕೂಡಲೆ ಕಾಮಗಾರಿ ಆರಂಭಿಸಲಾಗುವುದು. ಪ್ರಸ್ತುತ ಶಿವಮೊಗ್ಗ- ಚನೈ ಮಾರ್ಗದ ರೈಲು ವಾರಕ್ಕೊಮ್ಮೆ ಸಂಚರಿಸುತ್ತಿದ್ದು ಪ್ರಯಾಣಿಕರ ಸಂಖ್ಯೆಯ ಅನುಸಾರ ವಾರಕ್ಕೆ ೨ ಬಾರಿ ಸಂಚರಿಸಲು ಅನುವು ಮಾಡಿಕೊಡಲಾಗುವುದು ಎಂದರು.
ಸಂಸದ ಬಿ.ವೈ.ರಾಘವೇಂದ್ರ ಅವರನ್ನು ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಅಭಿನಂಧಿಸಿದರು.
ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ಡಿ.ಎಸ್.ಅರುಣ್, ಬಿಜೆಪಿ ಮಂಡಲದ ಅಧ್ಯಕ್ಷ ಜಿ.ಧರ್ಮಪ್ರಸಾದ್, ಮಂಗೋಟೆರುದ್ರೇಶ್, ಜಿ.ಆನಂದಕುಮಾರ್, ಮಂಜುನಾಥ್ ಕದಿರೇಶ್, ತೀರ್ಥಯ್ಯ, ಕೂಡ್ಲಿಗೆರೆ ಹಾಲೇಶ್, ಚನ್ನೇಶ್, ಜೆಡಿಎಸ್ ಮುಖಂಡೆ ಶಾರದಾ ಅಪ್ಪಾಜಿ, ಕರುಣಾ ಮೂರ್ತಿ, ರೈಲ್ವೆ ಅಧಿಕಾರಿಗಳಾದ ವಿನಾಯಕ್‌ನಾಯಕ್, ಗಿರೀಶ್, ಲೋಹಿತೇಶ್ವರ್, ಸೇರಿದಂತೆ ಹಲವರಿದ್ದರು. ತಮಿಳು ಯುವಕ ಸಂಘದಿಂದ ಸಭೆಯಲ್ಲಿ ಭಾಗವಹಿಸಿದ್ದವರಿಗೆ ಲಘು ಉಪಹಾರದ ವ್ಯವಸ್ಥೆ ಮಾಡಿದ್ದರು.
೧೪ ಬಿಡಿವಿಟಿ ೧ ಭದ್ರಾವತಿ ರೈಲ್ವೆ ನಿಲ್ದಾಣದಲ್ಲಿ ಶಿವಮೊಗ್ಗ -ಚನೈ ಮಾರ್ಗದ ರೈಲು ಸಂಚಾರಕ್ಕೆ ಬಿ.ವೈ.ರಾಘವೇಂದ್ರ ಚಾಲನೆ ನೀಡಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು.
೧೪ ಬಿಡಿವಿಟಿ ೨ ಭದ್ರಾವತಿ ರೈಲ್ವೆ ನಿಲ್ದಾಣದಕ್ಕೆ ಸಿಂಗಾರಗೊಂಡು ಬಂದ ಶಿವಮೊಗ್ಗ -ಚನೈ ರೈಲು