ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ವ್ಯಂಗ
ಶಿವಮೊಗ್ಗ : ದುರ್ಯೋಧನ ದುಶ್ಯಾಸರನ್ನು ರಕ್ಷಣೆ ಮಾಡಲು ದೃತರಾಷ್ಟ್ರ ಬರುತ್ತಿದ್ದಾನೆ ಎಂದು ಬಿಜೆಪಿ ಯವರ ಜನಾಕ್ರೋಶ ಹೋರಾಟಕ್ಕೆ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ವ್ಯಂಗವಾಡಿದ್ದಾರೆ.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿ ಬಿಜೆಪಿ ನಾಯಕರು ನಿಜವಾದ ಹೋರಾಟ ಮಾಡುತ್ತಿಲ್ಲ ಇದು ಒಂದು ಕುಟುಂಬದ ಹೋರಾಟವಾಗಿದೆ ಯಡಿಯೂರಪ್ಪ ಕುಟುಂಬಂದವರೆಲ್ಲರು ಇಂದು ಹೋರಾಟ ಮಾಡುತ್ತಿದ್ದಾರೆ ಹಾಗಾಗಿ ಶಿವಮೊಗ್ಗಕ್ಕೆ ಕುಟುಂಬದ ಯಾತ್ರೆಯ ಆಗಮನವಾಗಲಿದೆ ಎಂದು ಟೀಕಿಸಿದರು.
ಯಡಿಯೂರಪ್ಪ ನವರು ಇಂದು ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದಾರೆ.ದುರ್ಯೋಧನ ದುಶ್ಯಾಸನ ರಕ್ಷಣೆಗೆ ಭೀಷ್ಮ ಎಂದು ಬಿಂಬಿಸಿ ಕೊಳ್ಳುವ ಧೃತರಾಷ್ಟ್ರ ಬಂದಂತೆ ಕಾಣಿಸುತ್ತಿದೆ ಎಂದರು.
ಹೋರಾಟ ಮಾಡುವವರು ಪ್ರಾಮಾಣಿಕರಾಗಿರಬೇಕು ಆಪ್ರಾಮಾಣಿಕರಾಗಿರಬಾರದು ಇದು ಅಪ್ರಮಾಣಿಕರ ಹೋರಾಟ ವಾಗಿದೆ ಎಂದರು.ಬೆಲೆ ಏರಿಕೆ ಹಾಗೂ ಹಾಲಿನ ದರ ಏರಿಕೆ ವಿರುದ್ದ ಹೋರಾಟ ಮಾಡುತ್ತಿದ್ದಾರೆ ಬೆಲೆ ಏರಿಕೆಗಳು ಯಾವ ರೀತಿ ಏರಿಕೆಯಾಗುತ್ತಿದೆ ಎಂಬ ವಿವರಗಳನ್ನು ಹೇಳಬೇಕು ಬಿಜಿಪಿ ಬೆಲೆಯನ್ನು ಏರಿಕೆಯೇ ಮಾಡಿಲ್ಲವೇ ಹಾಗದ್ರೆ ಸಿಮೆಂಟ್ ,ಪೆಟ್ರೋಲ್, ಗೊಬ್ಬರ,ಕಬ್ಬಿಣ, ಬೆಲೆ ಏರಿಕೆ ಯಾರು ಮಾಡಿದ್ದು..ಇದಕ್ಕೆ ಇವರ ಆಕ್ರೋಶ ಇಲ್ಲವೇ ಎಂದರು.
ಕಾರ್ಯಕರ್ತರನ್ನು ಯಾಕೆ ಬೆಳಸಲಿಲ್ಲ. ನಿಮ್ಮಮಕ್ಕಳನ್ನು ತಂದು ಶಿಕಾರಿಪುರದಲ್ಲಿ ಹಾಕಿದ್ದು ಏಕೆ ಇದು ಪಕ್ಷ ಸಂಘಟನೆಯೋ ಕುಟುಂಬ ಸಂಘಟನೆಯೋ ಎಂದು ಪ್ರಶ್ನೆ ಮಾಡಿದರು.ಬೇರೆ ಕಡೆಗಳಲ್ಲಿ ಪಕ್ಷಸಂಘಟನೆ ಮಾಡಿದ ಬಿಎಸ್ ಯಡಿಯೂರಪ್ಪ ಶಿಕಾರಿಪುರದಲ್ಲಿ ಯಾಕೆ ಮಾಡಲಿಲ್ಲ ಎಂದರೆ ತಮ್ಮ ಮಕ್ಕಳನ್ನು ಅಲ್ಲಿ ಬೆಳೆಸಬೇಕಿತ್ತು. ಹಾಗಾಗಿ ಬೇರೆ ಯಾರಿಗೂ ಅಲ್ಲಿ ಬೆಳೆಯಲು ಯಡಿಯೂರಪ್ಪನವರು ಅವಕಾಶ ಕೊಡಲೇ ಇಲ್ಲ. ಈ ಬಗ್ಗೆಯೂ ಅವರು ಹೇಳಲಿ ಎಂದರು.

ಬಿಜೆಪಿಯವರು ಜನಾಕ್ರೋಶ ಹೋರಾಟ ಮಾಡುವುದಲ್ಲ, ಅವರು ಆತ್ಮಾಲೋಕನ ಮಾಡಿಕೊಳ್ಳುವ ಕಾಲವಿದು. ಅವರ ಗುಂಪಿನಲ್ಲಿ ಭ್ರಷ್ಟಚಾರಿಗಳೇ ಹೆಚ್ಚಿದ್ದಾರೆ. ಈಗಾಗಿ ಅವರಿಗೆ ಕಾಂಗ್ರೆಸ್‍ನ್ನು ಟೀಕಿಸುವ, ಹೋರಾಟ ಮಾಡುವ ಯಾವ ನೈತಿಕತೆಯೂ ಇಲ್ಲ. 20 ಕೋಟಿ ಚೆಕ್ ಯಾವುದು ಎಂದು ಸಾಗರ ರಸ್ತೆಯಲ್ಲಿ ತಿರುಗಿ ನೋಡಿದರೆ ತಿಳಿಯುತ್ತದೆ. ಮಗನ ಕುರ್ಚಿ ಉಳಿಸಲು ಈ ಅಶ್ವಮೇಧ ಯಾಗ ಮಾಡುತ್ತಿದ್ದಾರೆ. ಅದರ ರಕ್ಷಣೆಗೂ ಯಡಿಯೂರಪ್ಪನವರೇ ಬರಬೇಕಾದದ್ದು ವಿಪರ್ಯಾಸ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ಕೆಪಿಸಿಸಿ ಸದಸ್ಯ ವೈ,ಹೆಚ್.ನಾಗರಾಜ್ ಪ್ರಮುಖರಾದ ಕಲೀಂ ಪಾಶ, ದೀರರಾಜ್ ಹೊನ್ನಾವಿಲೆ, ಶಿವಾನಂದ್, ಶಾಮ್‍ಸುಂದರ್, ಶಿವಣ್ಣ, ನಯಾಜ್ ಅಹಮದ್, ವಿಜಯಲಕ್ಷ್ಮೀ ಪಾಟೀಲ್, ಕೃಷ್ಣಪ್ಪ, ಲಕ್ಷ್ಮಣ್, ಇಮ್ತಿಯಾಜ್ ಮುಂತಾದವರು ಇದ್ದರು.