ರಾಜ್ಯಕ್ಕೆ ರಘುನಾಥ್, ಜಿಲ್ಲೆಗೆ ರಘುರಾಮ್ ಅವರನ್ನು ಗೆಲ್ಲಿಸಿ | ಕೆ.ಬಿ.ಪ್ರಸನ್ನ ಕುಮಾರ್

ಶಿವಮೊಗ್ಗ : ಕರ್ನಾಟಕ ಬ್ರಾಹ್ಮಣ ಮಹಾಸಭಾದ (ರಿ) ಬೆಂಗಳೂರು, ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಜಿಲ್ಲಾ ಪ್ರತಿನಿಧಿ ಸ್ಥಾನಕ್ಕೆ ಏ.13 ರಂದು ಬೆಳಗ್ಗೆ 8.00 ರಿಂದ ಸಂಜೆ 4.00 ಗಂಟೆಯವರೆಗೆ ನಗರದ ಕೋಟೆ ರಸ್ತೆಯ ವಾಸವಿ ವಿದ್ಯಾಲಯದಲ್ಲಿ ಚುನಾವಣೆ ನಡೆಯುತ್ತಿದ್ದು, ರಾಜ್ಯಕ್ಕೆ ರಘುನಾಥ್ ಹಾಗೂ ಜಿಲ್ಲೆಗೆ ರಘುರಾಮ್ ಅವರನ್ನು ಗೆಲ್ಲಿಸಿಕೊಡಬೇಕೆಂದು ಎಂದು ಮಾಜಿ ಶಾಸಕರು ಹಾಗೂ ಬ್ರಾಹ್ಮಣ ಸಮಾಜದ ಮುಖಂಡರು ಆದ ಕೆ.ಬಿ.ಪ್ರಸನ್ನ ಕುಮಾರ್ ಕೋರಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಪ್ರತಿನಿಧಿ ಸ್ಥಾನದ ಅಭ್ಯರ್ಥಿ ರಘುರಾಮ್ ರವರು ಸರಳ ಮತ್ತು ಸುಸಂಸ್ಕøತ ಪರಿವಾರದ ವಾತಾವರಣದಲ್ಲಿ ಬೆಳೆದು ಬಂದವರು. ಬ್ರಾಹ್ಮಣ ಸಮಾಜ ಕೊಟ್ಟ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದವರು. ಸಮಾಜದ ಚಟುವಟಿಕೆಯಲ್ಲಿ, ಹತ್ತು ಹಲವಾರು ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅವರನ್ನು ಜಿಲ್ಲೆಯಿಂದ ರಾಜ್ಯಕ್ಕೆ ಕಳುಹಿಸಿಕೊಡಬೇಕಿದೆ. ಇದಕ್ಕೆ ಪೂರಕ ವಾತಾವರಣವೂ ಇದೆ. ಹೆಚ್ಚಿನ ವಿಶ್ವಾಸವೂ ಇದೆ. ಹೆಚ್ಚಿನ ಕೆಲಸವನ್ನು ಮಾಡಲು ತಯಾರಾಗಿರುವ ಜಿಲ್ಲೆಗೆ ರಘುರಾಮ್, ರಾಜ್ಯಕ್ಕೆ ರಘುನಾಥ್ ಅವರನ್ನು ಗೆಲ್ಲಿಸಬೇಕು ಎಂದರು.
ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ದತ್ತಾತ್ರಿ ಮಾತನಾಡಿ, ನಾವೆಲ್ಲರೂ ಕೂಡಾ ರಾಜ್ಯ ಅಭ್ಯರ್ಥಿ ಮನೆಮನೆಗೆ ಭೀತಿ ನೀಡುವ ಕೆಲಸ ಮಾಡಿದ್ದೇವೆ. ಜಿಲ್ಲೆಯ ಬೇರೆ ಬೇರೆ ಭಾಗದಲ್ಲಿ ಸುಮಾರು 20 ರಿಂದ 25 ಜನ ಇರುವ ನಮ್ಮ ತಂಡ ಮನೆ ಮನೆಗೆ ಹೋಗಿ ಅಭ್ಯರ್ಥಿ ಪರ ಕಾರ್ಯನಿರ್ವಹಿಸಿದೆ. ಅನೇಕ ಯೋಜನೆಗಳನ್ನು ನಿರ್ವಹಿಸುವ ದೊಡ್ಡ ಕಲ್ಪನೆಯನ್ನು ಇಟ್ಟುಕೊಂಡಿದ್ದಾರೆ. ಬೆಂಗಳೂರಿನಲ್ಲಿ ಹೆಚ್ಚು ಮತದಾರರು ಇದ್ದಾರೆ. ರಘುನಾಥ್ ಪರವಾಗಿ ಬೆಂಗಳೂರಿನಲ್ಲಿ ಹೆಚ್ಚು ಮತಗಳು ಇವೆ. ಎಲ್ಲಾ ಜಿಲ್ಲೆಯಲ್ಲಿಯೂ ಜಿಲ್ಲಾ ಪ್ರತಿನಿಧಿ ಮತ್ತು ರಾಜ್ಯ ಪ್ರತಿನಿಧಿ ಪರವಾಗಿ ಮತ ಯಾಚಿಸಿದ್ದಾರೆ. ರಘುನಾಥ್ ಮತ್ತು ರಘುರಾಮ್ ಇಬ್ಬರಿಗೂ ಹೆಚ್ಚಿನ ಮತಗಳನ್ನು ನೀಡುವ ಮೂಲಕ ಗೆಲ್ಲಿಸಬೇಕು ಎಂದು ಕೋರಿದರು.
ಜಿಲ್ಲಾ ಪ್ರತಿನಿಧಿ ಸ್ಥಾನದ ಅಭ್ಯರ್ಥಿ ರಘುರಾಮ್ –
ಸಾಮಾನ್ಯ ಬ್ರಾಹ್ಮಣ ಕುಟುಂಬದಿಂದ ಬಂದಂತಹವನು ನಾನು.ಜಿಲ್ಲೆಯ ಸಮಾಜ ನಮಂ ಜೊತೆ ಕೈಜೋಡಿಸಿದೆ. ಪೂರಕ ವಾತಾವರಣ ಇದೆ. ನನ್ನನ್ನು ಹೆಚ್ಚಿನ ಬಹುಮತದಿಂದ ಗೆಲ್ಲಿಸಿಕೊಡಬೇಕು.
ಪತ್ರಿಕಾಗೋಷ್ಟಿಯಲ್ಲಿ ಎಂ.ಶಂಕರ್, ಉಮಾಶಂಕರ್ ಉಪಾಧ್ಯ, ಪ್ರಕಾಶ್ ಭಟ್, ವಕೀಲರಾದ ರವಿಶಂಕರ್, ರಾಘವೇಂದ್ರ ಉಡುಪ, ಪ್ರಕಾಶ್, ಛಾಯಾಪತಿ, ಸ್ವಾಮಿ, ಚಂದ್ರಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.