
ಕೆಯುಡಬ್ಲ್ಯೂಜೆ ಜಿಲ್ಲಾ ಶಾಖೆ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿಯಲ್ಲಿ ಶಾಸಕಿ ಬಲ್ಕಿಷ್ ಬಾನು ಪ್ರತಿಪಾದನೆ
ಶಿವಮೊಗ್ಗ : ಅಂಬೇಡ್ಕರವರು ತಮ್ಮ ರಚನೆಯ ಸಂವಿಧಾನದ ಮೂಲಕ ಈ ನೆಲದ ಪ್ರತಿಯೊಬ್ಬರಿಗೂ ಗೌರವಯುತವಾಗಿ ಬದುಕುವ ಹಕ್ಕನ್ನು ಕಲ್ಪಿಸಿಕೊಟ್ಟಿದ್ದಾರೆ ಎಂದು ಶಾಸಕಿ ಬಲ್ಕಿಶ್ ಬಾನು ಪ್ರತಿಪಾದಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆವತಿಯಿಂದ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಅಂಬೇಡ್ಕರ್‌ರವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಅಂಬೇಡ್ಕರ್ ಅವರು ಇರಲಿಲ್ಲವೆಂದಿ ದ್ದರೆ ಜಂಗಲ್ ರಾಜ್ ಆಗುತ್ತಿತ್ತು. ಪ್ರಪಂಚದಲ್ಲಿ ಉತ್ತಮ ಸಂವಿಧಾನ ನಮ್ಮ ದೇಶದ್ದಾಗಿದೆ. ಸಂವಿಧಾನ ಬದಕುವ ಹಕ್ಕು ನೀಡಿದೆ ಎಂದರು.
ಸಂವಿಧಾನದ ಮೂಲಕ ಸ್ವಾತಂತ್ರ್ಯದ ನಂತರ ದೇಶ ಹೇಗೆ ಸಾಗಬೇಕು ಎಂಬುದರ ಸ್ಪಷ್ಟ ದಾರಿಯನ್ನು ತೋರಿರುವ ಅವರು, ಧರ್ಮಾತೀತವಾಗಿ, ಜಾತ್ಯಾತೀತವಾಗಿ ಸಮಾಜವನ್ನು ಹೇಗೆ ಕರೆದುಕೊಂಡು ಹೋಗಬೇಕು ಎಂಬುದನ್ನು ಅಂಬೇಡ್ಕರ್ ನಿರೂಪಿ ಸಿದ್ದಾರೆ ಎಂದ ಅವರು, ಅಂಬೇಡ್ಕರವರನ್ನು ಅರ್ಥ ಮಾಡಿಕೊ ಳ್ಳುವ ಮೂಲಕ ಸಂವಿಧಾನವನ್ನು ಅರಿತುಕೊಳ್ಳಬೇಕು ಎಂದರು.
ಸಂವಿಧಾನ ನಮಗೆ ದೊರೆತಿರುವ ಅತೀ ಶ್ರೇಷ್ಟವಾದ ಮಹಾನ್ ಗ್ರಂಥ. ಇದನ್ನು ಪ್ರತಿಯೊಬ್ಬರೂ ಓದಿಕೊಳ್ಳುವ ಮೂಲಕ ಪರಿಪೂರ್ಣರಾಗಬೇಕು ಎಂದು ಆಶಿಸಿದ ಅವರು. ಈ ಸಂವಿಧಾನದ ಆಧಾರದ ಮೇಲೆಯೇ ನಾವು ಸಮಾಜವನ್ನು, ದೇಶವನ್ನು ಕಟ್ಟಬೇಕು. ಹೀಗಾದಾಗ ಮಾತ್ರ, ಸಮಾಜ-ದೇಶ ಬಲಿಷ್ಟವಾಗಲು ಸಾಧ್ಯ ಎಂದರು.
ನಂತರ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಕೆ. ವಿ. ಶಿವಕುಮಾರ್ ಮಾತನಾಡಿ, ಅಂಬೇಡ್ಕರ್ ಅವರು ಸುದೀರ್ಘ ಅಧ್ಯಯನದ ಮೂಲಕ ಸಂವಿಧಾನ ರಚಿಸಿದ್ದಾರೆ. ಆದರೆ, ನಾಗರೀಕ ಸಮಾಜದಲ್ಲಿ ಅವರ ಸಂವಿಧಾನ ಅರಿಯದೆ ಮುಂದೆ ಸಾಗುತ್ತಿರುವುದು ದುರದುಷ್ಟಕರ ಎಂದರು.
ನಮ್ಮ ಆಡಳಿತ ವ್ಯವಸ್ಥೆಯಲ್ಲಿ ರಾಜಕೀಯ ನಾಯಕರು, ಅಪಕಾರಿಗಳು ನಮ್ಮನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ನಾವು ಕಷ್ಟಪಟ್ಟು ದುಡಿದು ಕಟ್ಟಿದ ತೆರಿಗೆ ಏನಾಗುತ್ತಿದೆ ಎಂಬ ಸುಳಿವನ್ನು ಈ ವ್ಯವಸ್ಥೆಯಲ್ಲಿನ ನಾಯಕರು ಬಿಟ್ಟುಕೊಡುತ್ತಿಲ್ಲ. ಇದು ಅನುಮಾನಕ್ಕೆ ಕಾರಣವಾಗಿದೆ ಎಂದ ಅವರು, ನಮ್ಮನಮ್ಮಲ್ಲಿ ಜಾತಿ-ಧರ್ಮಗಳ ಅಫೀಮು ತುಂಬಿ ಪರಸ್ಪರ ಕಾದಾಡುವಂತೆ ಮಾಡುತ್ತಿರುವುದು ಸಂವಿಧಾನ ಮಾಡಿರುವ ಅವಮಾನ ಎಂದು ಅಸಮಾಧಾನ ಹೊರಹಾಕಿದರು.
ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಾಮಾಜಿಕ, ರಾಜಕೀಯ ವಿಚಾರಧಾರೆ ಗಳಿಂದ ಮಾತ್ರ ಭಾರತವನ್ನು ಬಲಿಷ್ಠಗೊಳಿಸಲು ಸಾಧ್ಯ ಎಂದ ಅವರು, ಭಾರತಕ್ಕೆ ಕೇವಲ ರಾಜಕೀಯ ಸ್ವಾತಂತ್ರ್ಯ ಸಿಕ್ಕರೆ ಸಾಲದು, ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯ ಸಿಕ್ಕಾಗ ಮಾತ್ರ ಅರ್ಥಪೂರ್ಣವಾಗುತ್ತದೆ ಎಂಬ ನ್ಯಾಯ ಸಮತೆಯ ದೃಷ್ಟಿಯ ನ್ನು ಕೊಟ್ಟವರು ಅಂಬೇಡ್ಕರ್ ಎಂದರು.
ಕಾರ್ಯಕ್ರಮದಲ್ಲಿ ಸಂಘದ ಹಿರಿಯ ಉಪಾಧ್ಯಕ್ಷರಾದ ವೈದ್ಯನಾಥ್ ಹೆಚ್. ಯು. (ವೈದ್ಯ), ಕಾರ್ಯದರ್ಶಿ ಸೋಮನಾಥ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪತ್ರಕರ್ತರು ಅಂಬೇಡ್ಕರವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

“ದೇಶದ ದಲಿತ ದಮನಿತರ ಧ್ವನಿಯಾಗಿ ಸಾಮಾಜಿಕ ಚಳುವಳಿ ನಡೆಸಿದ ಅಂಬೇಡ್ಕರ್ ಜನರ ಜಾಗೃತಿಗೆ ಪತ್ರಕರ್ತರಾಗಿ ಹೋರಾಡಿದವರು. ಮೂಕನಾಯಕ, ಪ್ರಬುದ್ಧ ಭಾರತ, ಬಹಿಷ್ಕೃತ ಭಾರತ, ಜನತಾ ಪತ್ರಿಕೆಗಳನ್ನು ನಡೆಸಿದವರು. ಅಂಬೇಡ್ಕರ ಭಾರತ ಕಂಡ ಅಪ್ರತಿಮ ಪತ್ರಕರ್ತ ರರಾಗಿದ್ದಾರೆ. ಅವರು ಬರೆದ ಸಮಬಾಳು ಸಮಪಾಲು ತತ್ವದ ಸಂವಿಧಾನವನ್ನು ಇನ್ನಷ್ಟು ಬಲಗೊಳಿಸುವ ಮೂಲಕ ದೇಶವನ್ನು ಮುನ್ನೆಡೆಸಬೇಕಾಗಿದೆ. ಇದುವೇ ಅಂಬೇಡ್ಕರ್ ಎಂಬ ಧೀಮಂತ ನಾಯಕನಿಗೆ ನಾವು ಸಲ್ಲಿಸುವ ನಿಜವಾದ ಗೌರವ.“
- ಕೆ.ವಿ.ಶಿವಕುಮಾರ್,
ಅಧ್ಯಕ್ಷರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಶಿವಮೊಗ್ಗ ಜಿಲ್ಲಾ ಶಾಖೆ