ಶಿವಮೊಗ್ಗ : ಮಹಿಳೆಯಿಂದ ಮಹಿಳೆಯರಿಗಾಗಿ ಸ್ಥಾಪನೆಗೊಂಡ ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್ 25 ವರ್ಷ ಪೂರೈಸುತ್ತಿದ್ದು, 25 ಕಾರ್ಯಕ್ರಮಗಳನ್ನು ನಡೆಸುವ ಆಶಯ ಹೊಂದಿದೆ. ಅದರಲ್ಲಿ ಕನ್ನಡ ಕವಿಗಳ ಕಾವ್ಯ ಲಹರಿ ‘ಕಾವ್ಯ ಸಂಗೀತ’ ಎಂಬ ವಿಶಿಷ್ಟ ಪ್ರಯೋಗ ಮತ್ತು ಚಿಂತನೆಯ ಗಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್‍ನ ಸ್ಥಾಪಕ ಅಧ್ಯಕ್ಷೆ ಶಾಂತಾ ಎಸ್.ಶೆಟ್ಟಿ ಹೇಳಿದರು.
ಬುಧವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಜು.21 ರ ಭಾನುವಾರ ಸಂಜೆ 5.30 ಕ್ಕೆ ಕರ್ನಾಟಕ ಸಂಘದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್.ಸುಂದರ ರಾಜ್ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ಉದ್ಘಾಟಿಸಲಿದ್ದಾರೆ ಎಂದರು.
ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್ ಸ್ಥಾಪಕರಾದ ಶಾಂತಾ ಎಸ್.ಶೆಟ್ಟಿ, ಸಾತ್ವಿಕ ಸಾಂಸ್ಕøತಿಕ ಪ್ರತಿಷ್ಟಾನದ ಗಾಯಕ ವಿದ್ವಾನ್ ಶಂಕರ ಶ್ಯಾನಭೋಗ ಮತ್ತು ಟ್ರಸ್ಟಿ ಜಗದೀಶ್ ಚಂದ್ರ ಕಾಮತ್ ಉಪಸ್ಥಿತರಿರುವರು ಎಂದು ತಿಳಿಸಿದರು.
ಸಾತ್ವಿಕ ಸಾಂಸ್ಕೃತಿಕ ಪ್ರತಿಷ್ಟಾನ, ಕರ್ನಾಟಕ ಸಂಘವು ಈ ಕಾರ್ಯಕ್ರಮ ಆಯೋಜನೆಗೆ ಸಹಕಾರ ನೀಡಿರುತ್ತಾರೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್.ಸುಂದರ್ ರಾಜ್, ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್‍ನ ಶೋಭಾ ಸತೀಶ್, ಜಿ.ವಿಜಯಕುಮಾರ್, ವಿನಯ್ ಶಿವಮೊಗ್ಗ, ಇ.ವಿಶ್ವಾಸ್ ಉಪಸ್ಥಿತರಿದ್ದರು.