ಶಿವಮೊಗ್ಗ: ಎಂಪಿಎಂ ಪುನಶ್ಚೇತನಕ್ಕೆ ವಿಧಾನಪರಿಷತ್ ಸದಸ್ಯೆ ಬಲ್ಕೀಶ್ ಭಾನು ವಿಧಾನ ಪರಿಷತ್‌ನಲ್ಲಿ ಆಗ್ರಹ ಪಡಿಸಿದ್ದಾರೆ.
ಪರಿಷತ್‌ನ ಕಾಲಾಪದಲ್ಲಿ ಎಂಪಿಎಂಗೆ ಗುತ್ತಿಗೆ ನೀಡಿದ ನೆಡುತೋಪುಗಳಲ್ಲಿ ಬೆಳೆದಿರುವ ಆಕೇಶಿಯ, ನೀಲಗೀರಿ ಮತ್ತಿತರ ಪರಿಸರಕ್ಕೆ ಮಾರಕವಾದ ಮರಗಳನ್ನು ತೆರವುಗೊಳಿಸಲು ನೈಸರ್ಗಿಕ ಮರಗಳನ್ನು ಬೆಳೆಸಲು ಏನು ಕ್ರಮ ಕೈಗೊಳ್ಳಲಾಗಿದೆ ಎಂಬ ಬಲ್ಕೀಶ್ ಭಾನುರವರ ಪ್ರಶ್ನೆಗೆ ಎಂಬಿ ಪಾಟೀಲ್ ಉತ್ತರ ನೀಡಿ ನೆಡುತೋಪಿನಲ್ಲಿ ನೀಲಗಿರಿ ನೆಡಲು ಅನುಮತಿ ಇಲ್ಲ. ಆದರೆ ತೆರವುಗೊಳಿಸಲು ಕೋರ್ಟ್ ತಡೆಯಾಜ್ಞೆ ಇದೆ. ಆಗಾಗಿ ನಿರ್ಮೂಲನೆ ಸಾಧ್ಯವಿಲ್ಲ ಎಂದರು.
ಎಂಪಿಎಂ ಪುನರಾಂಭಕ್ಕೆ ಪ್ರಯತ್ನ ನಡೆದಿದೆ. ಅರ್ಹ ಕಂಪನಿಗಳು ಮುಂದೆ ಬಾರದ ಕಾರಣ ಖಾಸಗಿ ಗುತ್ತಿಗೆಗೆ ಆಧಾರದಲ್ಲಿ ನೀಡುವ ಪ್ರಕ್ರಿಯೆಗಳು ನೆನೆಗುದಿಗೆ ಬಿದ್ದಿವೆ. ನೀಲಗಿರಿ ಬೆಳೆಯಲು ಹೊಣೆಗಾರಿಕೆಯಿಲ್ಲದ ಕಾರ್ಯಚಟುವಟಿಕೆಗಳ ಷರತ್‌ಗಳನ್ನು ಕೆಲ ಕಂಪನಿಗಳು ವಿಧಿಸಿದ್ದ ಕಾರಣ ಸರ್ಕಾರ ಒಪ್ಪಲಿಲ್ಲ ಎಂದಿದ್ದಾರೆ.