ಹೆರಿಗೆಯಾದ ನಂತರ ಕೆಲ ಮಹಿಳೆಯರಲ್ಲಿ ತೀವ್ರ ರೀತಿಯ ಮಾನಸಿಕ ಖಿನ್ನತೆ ಉಂಟಾಗುತ್ತದೆ. ತನ್ನ ನಿತ್ಯದ ಚಟುವಟಿಕೆಗಳ ಮೇಲೆಯೂ ಆಸಕ್ತಿ ಕಳೆದುಕೊಳ್ಳುತ್ತಾಳೆ. ತೀವ್ರವಾದ ಕೋಪ, ಅತೀವ ದುಃಖ, ಎಲ್ಲರ ಮಾತಿ ಗೊಂದು ಅಪಾರ್ಥ ಕಲ್ಪಿಸಿಕೊಳ್ಳುವುದು, ಹೀಗೆ ಋಣಾತ್ಮಕ ನಡವಳಿಕೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಇಷ್ಟೇ ಅಲ್ಲದೆ ತಾನು ಹೆತ್ತ ಮಗುವಿನ ಮೇಲೆಯೂ ಗಮನ ಹರಿಸದ ಪರಿಸ್ಥಿತಿಗೆ ತಲುಪುತ್ತಾಳೆ. ಬಾಣಂತಿಯರಲಿ ಉಂಟಾಗುವ ಈ ರೀತಿಯ ಖಿನ್ನತೆಯನ್ನು ಬಾಣಂತಿ ಸನ್ನಿ (puereperal psychossis) ಅಂತ ಕರೆಯುತ್ತಾರೆ.
ಸನ್ನಿಯು ಅನುವಂಶೀಯವೆನ್ನುವುದು ಒಂದು ಅಂಶವಾದರೆ ಮತ್ತೊಂದು ಕಾರಣ ಎಂದರೆ ಹೆರಿಗೆ ಸಮಯದಲ್ಲಿ ಉಂಟಾಗುವ ತೀವ್ರವಾದ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು. ಹೀಗಾಗಿ ಬಾಣಂತಿಯಲ್ಲಾಗುವ ಮಾನಸಿಕ ಅಸಮತೋಲನ ಅಥವಾ ನಡವಳಿಕೆಯಲ್ಲಿ ಬದಲಾವಣೆಗಳನ್ನು ನಿರ್ಲಕ್ಷಿಸದೆ ಸೂಕ್ತ ಚಿಕಿತ್ಸೆ ಅಗತ್ಯ ಇಲ್ಲವಾದಲ್ಲಿ ಇದು ತೀವ್ರ ಮಾನಸಿಕ ಅಸ್ವಸ್ಥತೆಗೆ ಎಡೆ ಮಾಡಿಕೊಡಬಹುದು.
ಸನ್ನಿಯ ಸಾಮಾನ್ಯ ಲಕ್ಷಣಗಳು:
೮ ಖಿನ್ನತೆ ಹೆರಿಗೆ ನಂತರದ ೮ನೇ ಅಥವಾ ೧೦ನೇ ದಿನದಲ್ಲಿ ಕಾಣಿಸಿಕೊಳ್ಳುತ್ತದೆ.
೮ ಮಂಕಾಗಿರುವುದು ಅಥವಾ ಚಟುವಟಿಕೆ ಇಲ್ಲದಿರುವುದು
೮ ಅರ್ಥವಿಲ್ಲದೆ ನಗುವುದು, ಅಳುವುದು, ಕೋಪ ಮತ್ತು ಭಯಪಟ್ಟುಕೊಳ್ಳುವುದು
೮ ಭ್ರಮೆಯಲ್ಲಿರುವುದು
೮ ಶಿಶುವಿನ ಕಡೆ ನಿರ್ಲಕ್ಷ್ಯ
೮ ಇದ್ದಕ್ಕಿದ್ದ ಹಾಗೆ ವಿಚಿತ್ರ ನಡುವಳಿಕೆ
೮ ಸ್ವಚ್ಚತೆ ಬಗ್ಗೆ ನಿರ್ಲಕ್ಷ್ಯ
೮ ಹಿಂಸಾಚಾರ ಮತ್ತು ಆತ್ಮ ಹತ್ಯೆ ಪ್ರಯತ್ನ
೮ ತೀವ್ರವಾದ ಗೊಂದಲ
ಕಾರಣವಾದ ಅಂಶಗಳು:
೧.ಚೊಚ್ಚಲ ಹೆರಿಗೆ
೨.ಇಷ್ಟವಾಗದ ಗರ್ಭಧಾರಣೆ
೩.ಕುಟುಂಬದವರಲ್ಲಿ ಮಾನಸಿಕ ಖಾಯಿಲೆಯಿದ್ದರೆ
೪. ಗರ್ಭಾವಸ್ಥೆಯಲ್ಲಿ ಆರೋಗ್ಯದ ಕೊರತೆ ಇದ್ದಿದ್ದರೆ
೫.ಗರ್ಭಧಾರಣೆಯ ಅಂತಿಮ ಅವಧಿಯಲ್ಲಿ ನಂಜೇರುವುದು, ರಕ್ತದೊತ್ತಡ ಏರುವುದು, ಫಿಟ್ಸ್
೬.ಹೆರಿಗೆಯಲ್ಲಿ ತೀವ್ರ ಕಷ್ಟ ಮತ್ತು ಮಾನಸಿಕ ಒತ್ತಡ ಅನುಭವಿಸಿದಾಗ
೭.ಬಾಣಂತಿಯಲ್ಲಿ ವಿಪರೀತ ರಕ್ತ ಸ್ರಾವ
೮.ಬಾಣಂತಿ ಸೋಂಕು ತಗುಲಿ ಜ್ವರ ಕಾಣಿಸಿಕೊಂಡರೆ
೯. ಅನಾರೋಗ್ಯ ಪೀಡಿತ ಮಗುವಿನ ಜನನ
ಸನ್ನಿಗೆ ಪರಿಹಾರ:
೧. ಬಾಣಂತಿ ಸನ್ನಿ ಕಾಣಿಸಿದ ಕೂಡಲೇ ಸಾಮಾನ್ಯ ವೈದ್ಯರು ಅಥವಾ ಮನೋವೈದ್ಯರಿಗೆ ತೋರಿಸಿ
೨. ಸೂಕ್ತವಾದ ಚಿಕಿತ್ಸೆ ನೀಡಿ.
೩. ವಿಪರೀತಕ್ಕೆ ತಲುಪಿದ್ದರೆ ವಿದ್ಯುತ್ ಕಂಪನ ಚಿಕಿತ್ಸೆ(ಇಅಖಿ) ನೀಡಬೇಕಾಗುತ್ತದೆ
೪. ರಕ್ತಹೀನತೆಯನ್ನು ಗುಣಪಡಿಸಬೇಕು.
೫.ಮಗುವಿನ ಲಾಲನೆ ಪಾಲನೆಯಲ್ಲಿ ಹೆಚ್ಚಿನ ಗಮನ ನೀಡುವಂತೆ ಪ್ರೋತ್ಸಾಹ ನೀಡಬೇಕು.
೬. ಈ ಸಮಯದಲ್ಲಿ ಮನೆಯವರು ಅವರ ಹತ್ತಿರ ಹೆಚ್ಚು ವಿಶ್ವಾಸದಿಂದ ನಡೆದುಕೊಳ್ಳಬೇಕು.