ಲೇಖನ :ಸೌಮ್ಯ ಗಿರೀಶ್
ದಿನಿ ಸಿನಿ ಕ್ರಿಯೇಷನ್ಸ್ ಮೂಲಕ ಇಂದು ಚಿರಪರಿಚಿತರಾಗಿರುವವರು ನಮ್ಮ ಶಿವಮೊಗ್ಗದ ಹೆಮ್ಮೆಯ ಹುಡುಗ ದಿನೇಶ್. ಶ್ರಮವಹಿಸಿ ದುಡಿಯುತ್ತಾ, ತಮ್ಮದೊಂದು ಗುರುತು ಮೂಡಿಸಿಕೊಂಡ ದಿನೇಶ್, ಪ್ರತಿಭೆಯುಳ್ಳವರು ಮತ್ತು ಶ್ರಮಜೀವಿಗಳು ಎಂದರೆ ಸದಾ ಮಿಡಿಯುತ್ತಾರೆ. ಸಿನಿಮಾ ಪ್ರಚಾರಕನಾಗಿ ಉದ್ಯಮ ಪ್ರಾರಂಭಿಸಿದ ದಿನೇಶ್ ಹಣಕ್ಕಿಂತ ಹೆಸರಿಗಾಗಿ ಕೆಲಸ ಮಾಡಿದ್ದೇ ಹೆಚ್ಚು. ತುತ್ತು ಅನ್ನಕ್ಕೂ ಪರದಾಡಿದ ದಿನೇಶ್ ಹಲವರಿಗೆ ತುತ್ತಿನ ಹಾದಿ ಕಲ್ಪಿಸಿಕೊಟ್ಟಿರುವ ಯಶೋಗಾಥೆ ಇಲ್ಲಿದೆ.
ಅರಿಯದ ತಪ್ಪಿಗೆ ಆಸರೆ ಕಳೆದುಕೊಂಡಾಗ
ಶಿವಮೊಗ್ಗದ ನಿದಿಗೆ ಹೋಬಳಿಯ ವೀರಭದ್ರ ಕಾಲೋನಿಯ ಗ್ರಾಮದಲ್ಲಿ ತನ್ನ ಗೆಳೆಯರೊಂದಿಗೆ ಆಡಿ ಬೆಳೆಯುತ್ತಿದ್ದ ವಯಸ್ಸು, ಹಸಿವೆ ಎಂದರೆ ಅಮ್ಮ ಕಮಲಮ್ಮ ತುತ್ತು ನೀಡುತ್ತಿದ್ದ ವಯಸ್ಸದು. ತಂದೆ ವೀರಭದ್ರಪ್ಪ ಮಾಡಿದ ಕೆಲವು ಹಣಕಾಸಿನ ವ್ಯವಹಾರಕ್ಕೆ ಬಲಿಯಾಯ್ತು ಏನೂ ಅರಿಯದ ದಿನೇಶ್ ಬಾಲ್ಯ. ಕೈತುತ್ತು ತಿನ್ನಬೇಕಿದ್ದ ವಯಸ್ಸಿನಲ್ಲಿ ತುತ್ತು ಅನ್ನದ ಬೇಟೆಗಾಗಿ ಬೆಂಗಳೂರೆಂಬ ಮಾಯಾನಗರಿಗೆ ದೂಡಲಾಯಿತು. ಒಂದೆಡೆ ಆಸರೆ ಕಳೆದಕೊಂಡೆ ಎಂಬ ದುಃಖ, ಏನು ಮಾಡಬೇಕೋ ಗೊತ್ತಿಲ್ಲದ ವಯಸ್ಸು. ತನ್ನದಲ್ಲದ ತಪ್ಪಿಗೆ ತನ್ನ ಆಸರೆ, ಬಾಲ್ಯ ಕಳೆದು ಕೊಂಡಿದ್ದರಿಂದ ಮನಸ್ಸಿನಲ್ಲಿ ಅದೇ ನೋ ಸಿಟ್ಟು ಮೂಡಿ ಅದು ಹಲವಾರು ವರ್ಷ ಗಳು ಇವರ ಕಣ್ಣೀ ರಿಗೂ ಕಾರಣ ವಾಗಿತ್ತು.
ಆ ಪುಟ್ಟ ಕೈಗಳಲ್ಲಿ ಬೆವರ ಹನಿ
ಬರಿಗೈಯಲ್ಲಿ ಬೆಂಗ ಳೂರಿಗೆ ಬಂದವರ ಆಸರೆ ಯಾಗುವ ಹೊಟೇಲ್‌ಗಳು ದಿನೇಶ್‌ಗೂ ತುತ್ತು ಚೀಲಕ್ಕೊಂದು ದಾರಿಯಾಯಿತು. ಬುಗರಿ, ಗೋಲಿ, ಚಿನ್ನಿ ದಾಂಡು ಹಿಡಿ ಯಬೇಕಿದ್ದ ಆ ಪುಟ್ಟ ಕೈಗಳು ಎಂಜಲು ತಟ್ಟೆ, ಲೋಟಗಳನ್ನು ಹಿಡಿದಿದ್ದು ಮಾತ್ರ ವಿಪರ್ಯಾಸ. ಹೀಗೆ ಹೊತ್ತು ಕಳೆಯುತ್ತಿದ್ದ ದಿನೇಶ್ ಪ್ರೌಢಾವಸ್ಥೆಗೆ ಬರುವ ಹೊತ್ತಿಗೆ ಈ ಹುಡುಗನ ಶ್ರಮವನ್ನು ಗುರುತಿಸಿದ್ದ ಇಂದುಮತಿಯವರು ಸ್ವಂತ ಚಾಟ್ಸ್ ಕೌಂಟರ್‌ಗೆ ಬಂಡವಾಳವಿತ್ತು, ದಾರಿ ತೋರಿದ ಅಮ್ಮನಂತಾದರು. ತನ್ನದೊಂದು ಉದ್ಯಮ ಪ್ರಾರಂಭವಾಯಿತು, ಆದರೆ ಮನಸ್ಸಿನಲ್ಲಿ ಒಂದೆಡೆ ಚಿತ್ರರಂಗದ ಹುಚ್ಚು ಅಲೆ ಎದ್ದಿತ್ತು. ಜೊತೆಗೆ ಮಾಡುತ್ತಿದ್ದ ಕೆಲಸದಲ್ಲಿ ಏನೋ ತೃಪ್ತಿ ಇಲ್ಲದ ಭಾವ. ಬೇರೇನೋ ಸಾಧಿಸಬೇಕು ಎಂಬ ಇವರ ಹಪಾಹಪಿಕೆಗೆ ಉತ್ತರವಾಗಿದ್ದು ಕುಂದಾಪುರದ ರವಿಯ ವರು. ಇವರ ಸಿನಿ ಪಯಣದ ಮೊದಲ ಹೆಜ್ಜೆಯಾಗಿ ಸಿನಿ ಪತ್ರಿಕೆ ಚಿತ್ತಾರಕ್ಕೆ ದಾರಿ ತೋರಿದರು ರವಿ.
ಸಾವಿರ ಕನಸು ಹೊತ್ತಿದ್ದ ‘ಆಫೀಸ್ ಬಾಯ್’
ಹೆಸರಿಗೆ ಚಿತ್ತಾರ ಸಿನಿ ಪತ್ರಿಕೆ ಯಲ್ಲಿ ಆಫೀಸ್ ಬಾಯ್, ಆದರೆ ಈ ಹುಡುಗ ಕಾಣುತ್ತಿದ್ದ ಕನಸುಗಳು ಮಾತ್ರ ಬಹಳ ದೊಡ್ಡದು. ಅದಕ್ಕೆ ಜ್ವಲಂತ ಸಾಕ್ಷಿ ನಾನು ಎನ್ನುವ ಹೆಮ್ಮೆ ನನ್ನದು. “ನಾನು ಒಂದು ದಿನ ಸಿನಿಮಾ ಮಾಡ್ತೀನಿ ನೋಡ್ತಾ ಇರಿ. ನೀವು ಫ್ರೀ ಇದ್ದೀರಾ, ನಾನೊಂದು ಕಥೆ ಹೇಳ್ತೀನಿ” ಎನ್ನುತ್ತ ನನ್ನನ್ನು ಮಾತಿಗೆ ಎಳೆಯುತ್ತಿದ್ದ ಈ ಹುಡುಗ ಕಟ್ಟಿದ್ದ ಕನಸುಗಳ ಅರಮನೆ ಕೇಳುವ ವರಿಗೆ ಭಾವ ನಾ ಲೋಕವಾದರೂ ಅವನು ಮಾತ್ರ ಅದನ್ನು ನನಸಾಗಿ ಸುವ ತಪಸ್ಸು ಮಾಡುತ್ತಿದ್ದ. ಕೆಲಸದ ಹಂತದಲ್ಲಿ ಹಲವಾರು ಮೂಕ ವೇದನೆಗಳನ್ನು ಅನುಭವಿಸುತ್ತಲೇ ಬಂದ ದಿನೇಶ್ ತನ್ನ ಸಿನಿ ಸಂಪರ್ಕವನ್ನು ಬೆಳೆಸಿಕೊಳ್ಳುತ್ತಾ ಹೋದರು.
ದಿನಿ ಸಿನಿ ಕ್ರಿಯೇಷನ್ಸ್
ನಾನೇನಾದರೂ ಸಾಧಿಸಬೇಕು ಎಂದರೆ ಸ್ವತಂತ್ರವಾಗಿ ಕೆಲಸ ಮಾಡಬೇಕು ಎಂದು ಅರಿತ ದಿನೇಶ್ ಚಿತ್ತಾರದಿಂದ ಹೊರ ನಡೆದೇ ಬಿಟ್ಟರು. ಒಂದು ಸಿನಿಮಾ ತಯಾರಾದರೆ ಸಾಲದು ಅದನ್ನು ಜನರಿಗೆ ತಲುಪಿಸಲು ಪ್ರಚಾರ ಅತಿ ಮುಖ್ಯ. ಇದನ್ನು ಅರಿತಿದ್ದ ದಿನೇಶ್ ಸಿನಿ ಪ್ರಚಾರಕ್ಕೆಂದೇ ಒಂದು ಸ್ವಂತ ಸಂಸ್ಥೆಯನ್ನು ಹುಟ್ಟುಹಾಕಿದರು. ಅದೇ ‘ದಿನಿ ಸಿನಿ ಕ್ರಿಯೇಷನ್ಸ್’. ಅಲೆಮಾರಿ, ದಿಲ್‌ವಾಲ, ಆಟೋ ರಾಜ, ಹುಚ್ಚುಡುಗರು, ಶ್ರಾವಣಿ ಸುಬ್ರಮಣ್ಯ, ಹೀಗೆ ಹತ್ತು ಹಲವು ಸಿನಿಮಾಗಳಿಗೆ ವಿಭಿನ್ನ ರೀತಿಯ ಪ್ರಚಾರ ಮಾಡು ತ್ತಾ ತನ್ನದೇ ಛಾಪು ಮೂಡಿಸಿದ ದಿನಿ ಸಿನಿ ಕ್ರಿಯೇಷನ್ಸ್ ಇಂದು ಕಿಚ್ಚ ಸುದೀಪ್ ಮತ್ತು ಶಿವಣ್ಣ ಅಭಿನಯದ ‘ದಿ ವಿಲನ್’ ಚಿತ್ರದ ಪ್ರಚಾರದ ಹೊಣೆಯನ್ನು ಹೊತ್ತಿರು ವುದೇ ದಿನೇಶ್‌ರ ಯಶಸ್ಸಿಗೆ ಸಾಕ್ಷಿ.
ಪ್ರಚಾರ ಕಲೆಗೆ ಸಂದ ಗೌರವ ಫಲಪುಷ್ಪ ಪ್ರದರ್ಶನ
ಹೀಗೊಂದು ದಿನ ಪ್ರತಿಷ್ಠಿತ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡಿದ ದಿನೇಶ್ ಅದಕ್ಕೊಂದು ಹೊಸ ಭಾಷ್ಯ ಬರೆಯುವ ಯೋಚನೆಯನ್ನು ತೋಟ ಗಾರಿಕಾ ಇಲಾಖೆ ಮುಂದೆ ಇಟ್ಟದ್ದೇ ತಡ ಇವರ ಹೊಸ ಯೋಜನೆಗಳಿಗೆ ತಲೆದೂಗಿ ಫಲಪುಷ್ಪ ಪ್ರದರ್ಶನದ ಪ್ರಚಾರದ ಉಸ್ತುವಾರಿ ವಹಿಸಿಕೊಟ್ಟಿತ್ತು. ಸಿನಿರಂಗದ ತಾರೆ ಗಳನ್ನೆಲ್ಲಾ ಫಲಪುಷ್ಪ ಪ್ರದರ್ಶನಕ್ಕೆ ಕರೆತಂದು ಹಿರಿಮೆ ಹೆಚ್ಚಿಸಿದ ಇವರನ್ನು ಫಲಪುಷ್ಪ ಪ್ರದರ್ಶನದ ಅಧಿಕೃತ ಪ್ರಚಾರ ಏಜೆನ್ಸಿಯೆಂದು ಗೌರವಿಸಿದ ತೋಟಗಾರಿಕಾ ಇಲಾಖೆ, ಮಂಗಳೂರು ಮತ್ತು ಮೈಸೂರು ಫಲಪುಷ್ಪದ ಜವಾಬ್ದಾರಿಯನ್ನೂ ಇವರಿಗೆ ಕೊಟ್ಟಿತು.
ಖ್ಯಾತನಾಮರ ಮನೆ ಮಾತಾದ ದಿನಿ
ಇವರ ಪ್ರಚಾರ ಕಲೆ ಇವರ ಪರಿಚಯಗಳ ಪರಿಧಿಯನ್ನು ಉತ್ತುಂಗಕ್ಕೆ ಮುಟ್ಟಿಸಿತು. ಪ್ರಖ್ಯಾತ ಬ್ರಾಂಡ್‌ಗಳಾದ ಬಿಗ್‌ಬಜಾರ, ಪ್ಯಾಂಟ್‌ಲೂನ್ಸ್, ಮೋರ್, ಡೈರಿ ಡೇ, ಗೋ ಗ್ಯಾಸ್ ನಿಂದ ಹಿಡಿದು ಖ್ಯಾತ ಉದ್ಯಮಿಗಳಾದ ಖೋಡೇಸ್, ಇನ್‌ಫೋಸಿಸ್ ಸುಧಾಮೂರ್ತಿಯ ವರವರೆಗೆ ಹಾಗೂ ಸಿನಿಮಾ ನಿರ್ದೇ ಶಕರು- ನಿರ್ಮಾ ಪಕರು, ನಾಯಕರ ವಲಯದಲ್ಲಿ ಇಂದು ದಿನೇಶ್ ಚಿರಪರಿ ಚಿತ ಹೆಸರು. ಇವರ ಆಶಾಭಾವನೆಯಿಂದಲೇ ಹೆಸರು ಮಾಡಿ ಇಂದು ಮೈಸೂರು ಮಹಾರಾಜರಾದ ಯದು ವೀರ್ ಮತ್ತು ರಾಜಮಾತೆ ಪ್ರಮೋದಾದೇವಿಯವರವರೆಗೆ ಎಲ್ಲರ ಒಡನಾಟ ಹೊಂದಿದ್ದಾರೆ.
3 ಪೆಗ್ ಎಂಬ ಹೊಸ ಇತಿಹಾಸ
ಪ್ರತಿಭೆಗಳನ್ನು ಸದಾ ಬೆನ್ನು ತಟ್ಟುವ ಇವರ ಕಣ್ಣಿಗೆ ಬಿದ್ದ ಪ್ರತಿಭೆ ಚಂದನ್ ಶೆಟ್ಟಿ, ‘ಹಾಳಾಗೋದೆ’ ಕೇಳಿದ ಕೂಡಲೇ ಇದಕ್ಕೊಂದು ವಿಡಿಯೋ ರೂಪ ಕೊಡಬೇಕು, ಕನ್ನಡಕ್ಕೆ ರ‍್ಯಾಪ್ ಬರಬೇಕು ಎಂದು ನಿರ್ಧರಿಸಿದ ದಿನೇಶ್ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತೇಬಿಟ್ಟರು. ನಂತರ ನಡೆದದ್ದೆಲ್ಲಾ ಇತಿಹಾಸವೇ ಸರಿ. ಲಕ್ಷಾಂತರ ಜನರು ಯೂಟ್ಯೂಬ್ ನಲ್ಲಿ ವೀಕ್ಷಿಸಿ ಸಿಕ್ಕ ಜಯ ‘3 ಪೆಗ್’ ಎಂಬ ಮತ್ತೊಂದು ಇತಿಹಾಸಕ್ಕೆ ನಾಂದಿ ಹಾಡಿತ್ತು. ಹಾಳಾ ಗೋದೆ ೩ ಮಿಲಿಯನ್ ವೀಕ್ಷಣೆ ಕಂಡರೆ ‘3 ಪೆಗ್’ ಬರೋ ಬ್ಬರಿ ೯ ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಪಡೆ ಯಿತು. ಇದೀಗ ಮುಂದಿನ ಹೆಜ್ಜೆಯಾಗಿ ‘ಚಾಕಲೇಟ್ ಗರ್ಲ್’ ಬಿಡುಗಡೆಗೆ ತಯಾರಿಯಾಗಿದೆ.
ದುಡ್ಡಿರುವವರು ಮಾತ್ರ ನಿರ್ಮಾಪಕರಲ್ಲ
ಇವರು ನಿರ್ಮಾಪಕರು ಎಂದ ಮಾತ್ರಕ್ಕೆ ದಿನಿ, ಲಕ್ಷಗಟ್ಟಲೆ ದುಡ್ಡು ಮಾಡಿ, ರ‍್ಯಾಪ್ ಆಲ್ಬಂಗಳ ಮೇಲೆ ದುಡ್ಡು ಸುರಿದಿದ್ದಾರೆ ಎಂಬ ತಪ್ಪು ಕಲ್ಪನೆ ಇರಬಹುದು. ಆದರೆ ಅದು ಅಕ್ಷರಶಃ ಸುಳ್ಳು. ನಿರ್ಮಾಣಕ್ಕೊಂದು ಹೊಸ ಭಾಷ್ಯ ಬರೆದ ದಿನೇಶ್, ತಮ್ಮ ಪ್ರಚಾರ ಕಲೆಯಿಂದ ಪರಿಚಿತರಾದ ಉದ್ಯಮಿಗಳ ಕದ ತಟ್ಟಿ, ಅವರಿಂದ ಪ್ರಾಯೋಜಕತ್ವ ಪಡೆದು ಈ ಎಲ್ಲಾ ಆಲ್ಪಂಗಳನ್ನು ನಿರ್ಮಿಸಿದ್ದಾರೆ. ಇದಕ್ಕೆ ಸಾಕ್ಷಿ ಎಂದರೆ ಬರಲಿರುವ ಚಾಕಲೇಟ್ ಗರ್ಲ್‌ನ ಚಿತ್ರೀಕರಣ. ಅತ್ಯಂತ ದುಬಾರಿ ಕಾರ್ ಆದ ಲ್ಯಾಂಬೋರ್‌ಗಿನಿ ಪೋಸ್ಟರ್‌ಗಳಲ್ಲಿ ರಾರಾಜಿಸುತ್ತಿದೆ. ಆದರೆ ಇದು ದಿನೇಶ್‌ರವರ ಒಂದು ಮಾತಿನ ವಿಶ್ವಾಸದ ಮೇಲೆ, ಖೋಡೇಸ್ ಕಂಪನಿಯವರು ಚಿತ್ರೀಕರಣಕ್ಕಾಗಿ ಪ್ರತಿಫಲಾಪೇಕ್ಷೆ ಇಲ್ಲದೆ ಒಂದು ದಿನದ ಮಟ್ಟಿಗೆ ನೀಡಿದ ಕಾರು. ಹೀಗೆ ಜೇಬಿನಲ್ಲಿ ಹಣವಿಲ್ಲದಿದ್ದರೇನಂತೆ ಮಾಡುವ ಮನಸ್ಸಿದ್ದರೆ ಎಲ್ಲವೂ ಸಾಧ್ಯ ಎನ್ನುವುದನ್ನು ನಿರೂಪಿಸಿದ್ದಾರೆ ದಿನೇಶ್.
ಅನ್ನದಾತನಿಗಾಗಿ ಸದಾ ಮಿಡಿಯುವ ಮನ
ತನ್ನ ತಂದೆ ಅಂದೆಂದೋ ಮಾಡಿದ ತಪ್ಪಿಗೆ ತನ್ನದಲ್ಲದ ತಪ್ಪಿಗಾಗಿ ಯಾವ ಅನ್ನದಾತನೂ ಕಣ್ಣೀರು ಸುರಿಸುವುದು ಬೇಡವೆಂದು ತನ್ನ ಹುಟ್ಟೂರಿನಲ್ಲಿದ್ದ ಹುಟ್ಟೂರಿನ ಕೊನೆಯ ಕೊಂಡಿಯಾಗಿದ್ದ ಜಮೀನನ್ನು ತನಗೆ ಬೇಡವೆಂದು ಬರೆದು ಕೊಟ್ಟ ದಿನೇಶ್‌ಗೆ ಸದಾ ಅನ್ನದಾತರ ಬಗ್ಗೆ ಅದೇನೋ ಕಾಳಜಿ. ಫಲಪುಪ್ಪ ಪ್ರದರ್ಶನ ಮತ್ತು ದ್ರಾಕ್ಷಿ ಮೇಳಗಳಿಂದ ರೈತರ ಬವಣೆಯನ್ನು ಹತ್ತಿರದಿಂದ ಅರಿತಿದ್ದ ದಿನೇಶ್ ಈಗ ಅನ್ನದಾತನನ್ನು ಪ್ರತಿಯೊಬ್ಬರೂ ಸ್ಮರಿಸುವಂತಹ ದೇಶವೇ ಇವರತ್ತ ತಿರುಗಿ ನೋಡಿ ಪ್ರತಿಯೊಬ್ಬ ಅನ್ನದಾ ತನೂ ಇವರಿಗೆ ಋಣಿ ಎನ್ನುವ ಕಾಲ ದೂರವಿಲ್ಲ.
ರೈತರನ್ನು ಸ್ಮರಿಸಲೆಂದೇ ಹೊಸ ಯೋಜನೆಯೊಂದನ್ನು ರೂಪಿಸಿದ್ದಾರೆ. ಖಾಸಗಿ ಕಂಪನಿಯೊಂದರ ಈ ನಡೆ ಭಾರ ತಲ್ಲೇ ಪ್ರಥಮ. ಇದು ಯಶಸ್ವಿಯಾಗಿ ಕೇಂದ್ರ ಸರ್ಕಾರ ಇವರ ಕೆಲಸವನ್ನು ಗುರುತಿಸುವುದರಲ್ಲಿ ಅನುಮಾನವೇ ಇಲ್ಲ.
ದಿನೇಶ್ ಪಯಣದ ಬಗ್ಗೆ ಮಾತನಾಡುತ್ತಾ “ಬೆಂಗಳೂರಿಗೆ ದಾರಿ ತೋರಿದ ಚಿಕ್ಕಪ್ಪ ರಾಮಣ್ಣ, ಜೊತೆ ನಿಂತ ಬಂಧುಗಳಾದ ಮಂಜ ಮತ್ತು ಉಮೇಶ್, ನನ್ನಣ್ಣ ಮಾದೇಶ, ಆಸರೆ ಇಲ್ಲದೆ ನನ್ನಾಸರೆಗೆ ಬಂದ ತಂದೆ ತಾಯಿಗಳಿಗೆ ಆಶ್ರಯ ನೀಡಲು ನೆರವಾದ ಡಿಸಿಸಿ ಬ್ಯಾಂಕ್ ನೌಕರರಾದ ಭಾವ ಕೆ.ಶ್ರೀನಿವಾಸ್, ಅನ್ನಕ್ಕೆ ದಾರಿ ತೋರಿದ ಇಂದು ಮೇಡಂ, ರವಿ ಅಣ್ಣ, ಚಿತ್ತಾರದಿಂದ ದಿನಿ ಸಿನಿವರೆಗೆ ನನ್ನ ಹಿಂದೆ ನಿಂತಿರುವ ಹಲವು ಕಾಣದ ಕೈಗಳಿಗೆ ನಾನು ಸದಾ ಚಿರಋಣಿ.’ ಮುಂದೊಂದು ದಿನ ಶಿವಮೊಗ್ಗದ ರೈತರಿಗಾಗಿ, ಜನರಿಗಾಗಿ ಏನಾರೂ ಮಾಡಿಯೇ ಮಾಡುತ್ತೇನೆ” ಎನ್ನುತ್ತಲೇ ಹುಟ್ಟೂರನ್ನೂ ಸ್ಮರಿಸುತ್ತಾ ಮಾತು ಮುಗಿಸಿದರು.
ಬೆಂಗಳೂರಿನ ಪ್ರತಿಷ್ಠಿತ ಟಿ ಜಂಕ್ಷನ್‌ನಲ್ಲಿ ಸ್ಟಾರ್‌ಗಳು ಹೋರ್ಡಿಂಗ್ ನೋಡಿ ಸಂತಸ ಪಡುತ್ತಿದ್ದ ಹುಡುಗನ ಸಂಸ್ಥೆಯ ಲೋಗೋಗಳು ಇಂದು ಅದೇ ಹೋರ್ಡಿಂಗ್ ಗಳಲ್ಲಿ ರಾರಾಜಿಸುತ್ತಿರುವುದೇ ಇವರ ಗೆಲುವಿಗೆ ಸಾಕ್ಷಿ. ಸದಾ ಇತರರ ಜೋಳಿಗೆ ತುಂಬಿಸುತ್ತಾ, ಹಣಕ್ಕಿಂತ ಹೆಸರಿಗೆ ಮಹತ್ವ ಕೊಟ್ಟು ಬೆಳೆಯುತ್ತಿರುವ ದಿನೇಶ್ ಇನ್ನಾ ದರೂ ಒಂದಷ್ಟು ಹಣ ಕಾಣುವಂತಾಗಲಿ, ಕೀರ್ತಿಯ ಜೊತೆ ಇವರ ಆರ್ಥಿಕ ಸ್ಥಿತಿಯಲ್ಲೂ ಬೆಳವಣಿಗೆ ಕಾಣಲಿ ಎಂಬುದೇ ನಮ್ಮ ಹಾರೈಕೆ.