ನ.೧೯ ರಂದು ಲಿಂಗಾಯತ ಧರ್ಮದ ರಾಷ್ಟ್ರೀಯ ಸಮಾವೇಶ

ಶಿವಮೊಗ್ಗ : ಲಿಂಗಾಯತ ಧರ್ಮದ ಸಾಂವಿಧಾನಿಕ ಮಾನ್ಯತೆಗೆ ಆಗ್ರಹಿಸಿ ಲಿಂಗಾಯತ ಧರ್ಮ ಮಹಾಸಭಾ ಹಾಗೂ ರಾಷ್ಟ್ರೀಯ ಬಸವದಳ ಇವರ ಸಂಯುಕ್ತಾಶ್ರಯದಲ್ಲಿ ನ.೧೯ರ ಭಾನು ವಾರ ಬೆಳಗ್ಗೆ ೧೦.೩೦ಕ್ಕೆ ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ‘ಲಿಂಗಾಯತ ಧರ್ಮದ ರಾಷ್ಟ್ರೀಯ ಸಮಾವೇಶ’ ಹಮ್ಮಿಕೊಳ್ಳ ಲಾಗಿದೆ ಎಂದು ಲಿಂಗಾಯತ ಧರ್ಮ ಮಹಾಸಭಾದ ರಾಷ್ಟ್ರೀಯ ಸಂಘಟಕರು ಹಾಗೂ ಕೂಡಲಸಂಗಮದ ಬಸವ ಧರ್ಮ ಪೀಠದ ಆಚಾರ್ಯರಾದ ದಯಾನಂದ ಸ್ವಾಮೀಜಿ ಹೇಳಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು, ವಿಧಾನಸಭೆಯ ಚುನಾವ ಣೆಗೂ ಮುನ್ನ ರಾಜ್ಯ ಸರ್ಕಾರ ಲಿಂಗಾ ಯತ ಧರ್ಮದ ಸಾಂವಿಧಾನಿಕ ಮಾನ್ಯ ತೆಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದರು.
ಮಹಾಸಭಾದ ಗೌರವಾಧ್ಯಕ್ಷರು ಹಾಗೂ ಬಸವಧರ್ಮ ಮಹಾ ಜಗದ್ಗುರು ಪೀಠದ ಅಧ್ಯಕ್ಷರಾದ ಮಾತೆ ಮಹದೇವಿ ಯವರ ನೇತೃತ್ವದಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ನಾಡಿನ ಅನೇಕ ಪೂಜ್ಯ ಮಠ- ಪೀಠಾಧೀಶರು, ಧರ್ಮಗುರು ಗಳು, ಪ್ರಗತಿಪರ ಚಿಂತಕರು, ಸಾಹಿತಿಗಳು ಮತ್ತು ಸಂಶೋಧಕರು ಭಾಗವಹಿಸಲಿದ್ದು, ಕರ್ನಾಟಕ ಹಾಗೂ ದೇಶದ ವಿವಿಧ ಭಾಗ ಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಲಿಂಗಾ ಯತ ಧರ್ಮಿಯರು ಮತ್ತು ಬಸವ ತತ್ವಾಭಿ ಮಾನಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ಲಿಂಗಾಯತವು ಒಂದು ಮತ- ಪಂಥವಲ್ಲ. ಇದು ಸ್ವತಂತ್ರ ಹಾಗೂ ಪರಿಪೂರ್ಣ ಧರ್ಮ. ೧೨ನೇ ಶತ ಮಾನದಲ್ಲಿ ವಿಶ್ವಗುರು ಬಸವಣ್ಣನ ವರಿಂದ ಸಂಸ್ಥಾಪಿತವಾದ ಲಿಂಗಾಯತ ಧರ್ಮದ ಅನುಯಾಯಿಗಳು ದೇಶದ ವಿವಿಧ ರಾಜ್ಯಗಳಲ್ಲಿ ನೆಲೆಸಿದ್ದಾರೆ. ಭಾರತೀಯ ಜನ್ಯ ಧರ್ಮಗಳಲ್ಲಿ ಒಂದಾದ ಕನ್ನಡ ಭಾಷೆಯನ್ನೇ ಧರ್ಮದ ಮೂಲ ಭಾಷೆಯನ್ನಾಗಿ ಮಾಡಿಕೊಂಡಿ ರುವ ಈ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಬೇಕೆಂದು ಹಲವು ದಶಕಗಳಿಂದ ಹೋರಾಟ ಮಾಡಿಕೊಂಡು ಪ್ರತಿಭಟನೆ, ಸಮಾವೇಶ ಗಳನ್ನು ನಡೆಸಿ ಹಲವಾರು ಬಾರಿ ಆಯಾ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿಗಳನ್ನು ಸಲ್ಲಿಸುತ್ತಾ ಬಂದಿದ್ದರೂ ಸಹ ಈ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ಆರೋಪಿಸಿದರು.
ಭಾರತ ಸಂವಿಧಾನವೇ ಸಿಖ್, ಜೈನ್, ಬೌದ್ಧ ಧರ್ಮಗಳನ್ನು ‘ಹಿಂದೂ ಧಾರ್ಮಿಕ ಸಂಸ್ಥೆ’ಗಳೆಂದು ಪರಿಗಣಿಸಿರುವುದರಿಂದ ಲಿಂಗಾಯತ ಧರ್ಮವನ್ನು ಸಿಖ್, ಜೈನ್, ಬೌದ್ಧದೊಡನೆ ಸೇರ್ಪಡೆ ಮಾಡುವು ದರಿಂದ ಹಿಂದುತ್ವಕ್ಕೆ ಯಾವುದೇ ಧಕ್ಕೆಯುಂಟಾಗುವುದಿಲ್ಲ ಎಂಬುದನ್ನು ಅರ್ಥೈಸಿಕೊಂಡು ದೇಶದ ಎಲ್ಲಾ ಹಿಂದೂಪರ ಮತ್ತು ಇನ್ನಿತರ ಎಲ್ಲಾ ಸಂಘಟನೆಗಳು, ರಾಜಕೀಯ ಪಕ್ಷಗಳು, ಧರ್ಮಗುರುಗಳು ನಮ್ಮ ಹೋರಾಟಕ್ಕೆ ಬೆಂಬಲ ಕೊಟ್ಟು ಪರಸ್ಪರ ಧಾರ್ಮಿಕ ಸಹಭಾಗಿತ್ವವನ್ನು ಮೆರೆಯಬೇಕು ಎಂದರು.
ಭಾರತ ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎನ್ನುವಂತೆ ಬೇಧಭಾವ ಮಾಡದೆ ಸಿಖ್, ಜೈನ್, ಬೌದ್ಧ ಧರ್ಮಗಳಿಗೆ ಸಾಂವಿಧಾನಿಕ ಮಾನ್ಯತೆ ಕೊಟ್ಟಂತೆ ಲಿಂಗಾಯತ ಧರ್ಮಕ್ಕೂ ಕೊಡಬೇಕೆಂದು ಆಗ್ರಹಿಸಿದರು.
ಸಮಾವೇಶದಲ್ಲಿ ಲಿಂಗಾಯತ ಧರ್ಮ ಮಹಾಸಭೆಯ ೨೨ನೇ ವಾರ್ಷಿಕೋತ್ಸವ ಸಮಾರಂಭ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಹಾಸಭೆಯ ಜಿಲ್ಲಾಧ್ಯಕ್ಷ ರಾಮಪ್ಪ, ಕಾರ್ಯದರ್ಶಿ ಯೋಗೀಶ್, ಸದಸ್ಯರಾದ ಗಂಗಣ್ಣ, ಶಾಂತಮ್ಮ, ಶಿವಲಿಂಗಪ್ಪ, ಹಿರಣ್ಣಯ್ಯ ಇನ್ನಿತರರು ಉಪಸ್ಥಿತರಿದ್ದರು.