ಶಿವಮೊಗ್ಗ, : ರಾಜ್ಯದ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಸಾಧ್ಯವಾಗುವಂತೆ ಪಡಿತರ ಅಂಗಡಿ ಪೋರ್ಟಬಿಲಿಟಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಯು.ಟಿ. ಖಾದರ್ ಹೇಳಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನು ಮುಂದೆ ನಿಗದಿತ ಪಡಿತರ ಅಂಗಡಿ ಯಲ್ಲೇ ಪಡಿತರ ಧಾನ್ಯ ಪಡೆಯ ಬೇಕೆಂದಿಲ್ಲ. ತಮಗೆ ಅನುಕೂಲಕರ ವಾದ ಪಡಿತರ ಅಂಗಡಿಗೆ ಪಡಿತರ ಕಾರ್ಡ್ ವರ್ಗಾಯಿಸಲು ಸಾಧ್ಯ ವಾಗುವಂತೆ ಪೋರ್ಟಬಿಲಿಟಿ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಇದು ದೇಶದಲ್ಲೇ ಬಹುಶಃ ಪ್ರಥಮ ವಾಗಿದ್ದು, ಇದರಿಂದ ಉತ್ತಮ ಸೇವೆ ನೀಡುವ ಪಡಿತರ ಅಂಗಡಿಗಳನ್ನು ಆಯ್ಕೆ ಮಾಡಲು ಗ್ರಾಹಕರಿಗೆ ಅವಕಾಶವಾಗಲಿದೆ ಎಂದರು.
ಪಡಿತರ ಅಂಗಡಿಗಳ ಮಧ್ಯೆಯೇ ಉತ್ತಮ ಸ್ಪರ್ಧೆಗೂ ಇದು ಕಾರಣ ವಾಗಲಿದೆ. ಗ್ರಾಹಕರ ಹೆಚ್ಚಳ ದಿಂದಾಗಿ ಬೇಕಾಗುವ ಪಡಿತರ ಧಾನ್ಯ ಗಳನ್ನು ಹೆಚ್ಚುವರಿಯಾಗಿ ವಿತರಿಸಲು ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ ಎಂದರು.
ಮಾಹಿತಿ ನೀಡಿದವರಿಗೆ ಬಹು ಮಾನ: ಅನರ್ಹ ವ್ಯಕ್ತಿಗಳು ಬಿಪಿಎಲ್ ಕಾರ್ಡ್ ಪಡೆದಿರುವ ಬಗ್ಗೆ ಮಾಹಿತಿ ಯನ್ನು ನೀಡಿದರೆ, ಮಾಹಿತಿದಾರರಿಗೆ ಪ್ರತಿ ಮಾಹಿತಿಗೆ ೪೦೦ರೂ. ನಗದು ಬಹುಮಾನವಾಗಿ ನೀಡಲಾಗು ವುದು. ಮಾಹಿತಿ ನೀಡುವವರ ವಿವರವನ್ನು ಸಂಪೂರ್ಣ ಗೌಪ್ಯವಾಗಿ ರಿಸಲಾಗುವುದು. ಇದಕ್ಕಾಗಿ ಸಾಫ್ಟ್ ವೇರ್ ಸಿದ್ಧಪಡಿಸಲಾಗುತ್ತಿದೆ. ಇದೇ ರೀತಿ ಕಾಳಸಂತೆಯಲ್ಲಿ ಪಡಿತರ ಧಾನ್ಯ ಮಾರಾಟ ಅಥವಾ ಅಕ್ರಮ ದಾಸ್ತಾನು ಕುರಿತು ಮಾಹಿತಿ ನೀಡಿದರೆ ಅಂತವರಿಗೆ ಒಟ್ಟು ದಾಸ್ತಾನಿನ ಶೇ.೨೦ರಷ್ಟು ಪಾಲನ್ನು ನೀಡಲಾ ಗುವುದು. ಪಡಿತರ ಅಕ್ರಮಗಳನ್ನು ತಡೆಯಲು ಜನರ ಸಹಭಾಗಿತ್ವ ಅತಿ ಮುಖ್ಯವಾಗಿದೆ ಎಂದು ತಿಳಿಸಿದರು.
ತಕ್ಷಣ ಪಡಿತರ ವಿತರಣೆ: ಪಡಿತರ ಚೀಟಿ ಪಡೆದು ಬಯೋಮೆಟ್ರಿಕ್ ವಿವರಗಳನ್ನು ದಾಖಲಿಸಿದ ತಕ್ಷಣ ಪಡಿತರ ಧಾನ್ಯವನ್ನು ವಿತರಿಸಲು ಈಗಾಗಲೇ ಸೂಚನೆಗಳನ್ನು ನೀಡಲಾಗಿದೆ. ಬಯೋಮೆಟ್ರಿಕ್ ಜಾರಿ ಬಳಿಕ ಸೋರಿಕೆಯನ್ನು ಬಹುತೇಕ ತಡೆಯಲಾಗಿದ್ದು, ಆಧಾರ್ ಜೋಡಣೆಯಿಂದಾಗಿ ಎಂಟುವರೆ ಲಕ್ಷ ಬೋಗಸ್ ಕಾರ್ಡ್‌ಗಳನ್ನು ರದ್ದುಪಡಿಸಲು ಸಾಧ್ಯವಾಗಿದೆ ಎಂದು ಹೇಳಿದರು.
ಅನಿಲ ಭಾಗ್ಯ ಯೋಜನೆ: ಜಿಲ್ಲೆಯಲ್ಲಿ ಮುಖ್ಯಮಂತ್ರಿಗಳ ಅನಿಲಭಾಗ್ಯ ಯೋಜನೆಯಡಿ ಒಟ್ಟು ೧೭೯೯೪ ಅರ್ಹ ಫಲಾನುಭವಿಗಳನ್ನು ಗುರುತಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಿಲ್ಲೆಯಲ್ಲಿ ಸೀಮೆಎಣ್ಣೆ ಪಡೆಯಲು ೯೦೩೯೦ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿಗಳನ್ನು ನೋಂದಣಿ ಮಾಡಲಾಗಿದೆ ಎಂದು ಹೇಳಿದರು.
ಪ್ರಕರಣಗಳ ವಿವರ: ಜಿಲ್ಲೆಯಲ್ಲಿ ಪ್ರಸ್ತುತ ಸಾಲಿನಲ್ಲಿ ಅಗತ್ಯ ವಸ್ತುಗಳ ಕಾಯ್ದೆಯಡಿ ೧೦ದಾಳಿಗಳನ್ನು ಮಾಡಿ ೫.೬೬ಲಕ್ಷ ರೂ. ಮೌಲ್ಯದ ಪಡಿತರ ಸಾಮಾಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಉಪಸ್ಥಿತರಿದ್ದರು.