ಶಿವಮೊಗ್ಗ: ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿ ಮುಖ್ಯಮಂತ್ರಿ ಆಟ ನಡೆದಿಲ್ಲ, ಅವರ ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ಆಗಿಲ್ಲ, ಸಿದ್ದ ರಾಮಯ್ಯ ರಾಜಕೀಯ ಜೀವನದ ಅಂತ್ಯವಾಗುವ ಕಾಲ ಬಂದಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ನಿರ್ನಾಮ ಆಗುತ್ತದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ, ಶಿವಮೊಗ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಭವಿಷ್ಯ ನುಡಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಟಿಕೆಟ್ ಹಂಚಿಕೆ ಪ್ರಕ್ರಿಯೆಯಿಂದ ಕಾಂಗ್ರೆಸ್‌ನಲ್ಲಿ ಎಷ್ಟು ಗುಂಪುಗಳಿವೆ ಎಂದು ಎಲ್ಲರಿಗೂ ತಿಳಿದಂತಾಗಿದೆ. ಚಾಮುಂಡೇಶ್ವರಿ ಮತ್ತು ಬಾದಾಮಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಮುಖ್ಯಮಂತ್ರಿಗಳಿಗೆ ಪಕ್ಷ ಅವಕಾಶ ನೀಡದಿರುವುದು ಸಿದ್ದರಾಮಯ್ಯರಿಗೆ ಆದ ಮುಖಭಂಗ ಎಂದು ವಿಶ್ಲೇಷಿ ಸಿದರು.
ಕಾಂಗ್ರೆಸ್‌ನಲ್ಲಿ ನಾಯಕರಿಲ್ಲ ಎಂದು ಸಿದ್ದರಾಮಯ್ಯರನ್ನು ಪಕ್ಷಕ್ಕೆ ಕರೆತಂದು ಮಖ್ಯಮಂತ್ರಿ ಮಾಡಿ ದ್ದಾರೆ. ಈಗ ಅವರ ಹಿತೈಷಿಗಳೇ ಅವರ ಬೆನ್ನಿಗೆ ಚಾಕು ಹಾಕುವ ಪರಿಸ್ಥಿತಿ ಬಂದಿದೆ ಎಂದ ಅವರು, ಇಂದು ಬಿಜೆಪಿಯ ೨ನೇ ಟಿಕೆಟ್ ಪಟ್ಟಿ ಬಿಡುಗಡೆ ಯಾಗಲಿದ್ದು, ಈ ಬಾರಿ ಬಿಜೆಪಿ ಬಹು ಮತ ಪಡೆದು ಯಡಿ ಯೂರಪ್ಪ ಮುಖ್ಯ ಮಂತ್ರಿ ಆಗಲಿ ದ್ದಾರೆ. ಕರ್ನಾಟಕ ದೇಶದ ಕಾಂಗ್ರೆಸ್ ಮುಕ್ತವಾದ ೨೨ನೇ ರಾಜ್ಯವಾಗಲಿದೆ ಎಂದರು.
ಜಿಲ್ಲೆಯ ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲೂ ಗೊಂದಲ ಇದೆ ಎಂದ ಅವರು, ಶಿವಮೊಗ್ಗ ಕ್ಷೇತ್ರದಲ್ಲಿ ೧೬ ಮಂದಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿದ್ದರು, ಈಗ ಅಂತಿಮ ವಾಗಿ ಹಾಲಿ ಶಾಸಕರಿಗೆ ಟಿಕೆಟ್ ಸಿಕ್ಕಿದೆ. ಸಾಗರದಲ್ಲಿ ಕಾಗೋಡು ಚುನಾವಣೆಗೆ ಪಕ್ಷವೇ ಹಣ ನೀಡ ಬೇಕು ಎನ್ನುತ್ತಿದ್ದಾರೆ, ಗ್ರಾಮಾಂತರ ದಲ್ಲಿ ಬಂಡಾಯದ ಸ್ಥಿತಿ ಇದೆ, ಸೊರಬ ದಲ್ಲಿ ಬಿಜೆಪಿಯಲ್ಲಿ ಇದ್ದವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ ಎಂದರು.
ಶಿವಮೊಗ್ಗ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಘೋಷಿಸಿದ ಕಾಮಗಾರಿಗಳು ಯಾವುವೂ ಅನುಷ್ಠಾನಕ್ಕೆ ಬಂದಿಲ್ಲ, ಅವರು ಸಮಾವೇಶದಲ್ಲಿ ಬರೀ ಬಿಜೆಪಿ ನಾಯಕರನ್ನು ಟೀಕಿಸಿ ಹೋಗಿದ್ದಾರೆ, ಅಭಿವೃದ್ಧಿ ಅವರಿಂದ ಸಾಧ್ಯವಾಗಿಲ್ಲ. ಈ ಚುನಾವಣೆಯಲ್ಲಿ ನನಗೆ ಪ್ರತಿ ಸ್ಪರ್ಧಿಯೇ ಇಲ್ಲ, ಹೆಚ್ಚು ಅಂತರದಿಂದ ಗೆಲ್ಲುತ್ತೇನೆ ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಟೆಂಪಲ್ ರನ್: ಏ.೧೭ರ ನಾಳೆ ಬೆಳಿಗ್ಗೆ ೭ ಗಂಟೆಯಿಂದ ನಗರದ ೩೫ ವಾರ್ಡ್‌ಗಳಲ್ಲಿ ತಲಾ ಒಂದೊಂದು ದೇವಾಲಯ ಭೇಟಿ ನೀಡುವ ಕಾರ್ಯಕ್ರಮ ಪ್ರಾರಂಭವಾಗು ವುದು. ಎರಡು ದಿನದ ಈ ಕಾರ್ಯ ಕ್ರಮದ ನಂತರ ಏ.೧೯ರ ಬೆಳಿಗ್ಗೆ ೧೧.೩೦ಕ್ಕೆ ನಾಮಪತ್ರ ಸಲ್ಲಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ನೂರಾರು ಜನ ಬಿಜೆಪಿ ಪಕ್ಷ ಸೇರ್ಪಡೆಗೊಂಡರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್. ರುದ್ರೇಗೌಡ, ಪ್ರಮುಖರಾದ ಚನ್ನಬಸಪ್ಪ, ಡಿ.ಎಸ್. ಅರುಣ್, ದೇವದಾಸ್ ಎನ್. ನಾಯಕ್, ಕೆ.ಜಿ. ಕುಮಾರ ಸ್ವಾಮಿ, ಸುಭಾಷ್, eನೇಶ್ವರ್, ಪಂಚಾಕ್ಷರಿ, ಮಧುಸೂದನ್, ಶೆಣೈ ಮತ್ತಿತರರಿದ್ದರು.