Wednesday, January 22, 2025
Google search engine
Homeಇ-ಪತ್ರಿಕೆಶಿವಮೊಗ್ಗ: ನಾಳೆಯಿಂದ ಎರಡು ದಿನ ನೀರು ಬರಲ್ಲ

ಶಿವಮೊಗ್ಗ: ನಾಳೆಯಿಂದ ಎರಡು ದಿನ ನೀರು ಬರಲ್ಲ

ಶಿವಮೊಗ್ಗ: ನಾಳೆಯಿಂದ (ಜೂ.30) ಎರಡು ದಿನ ನಗರದಲ್ಲಿ ನೀರು ಬರುವುದಿಲ್ಲವೆಂದು ಜಲಮಂಡಳಿಯ ಪ್ರಕಟಣೆ ತಿಳಿಸಿದೆ.

ಮೆಸ್ಕಾಂ ಇಲಾಖೆಯಿಂದ ಕೃಷ್ಣರಾಜೇಂದ್ರ ಜಲಶುದ್ದೀಕರಣ ಘಟಕಕ್ಕೆ ವಿದ್ಯುತ್ ಸರಬರಾಜಾಗುವ 110/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದ ದುರಸ್ಥಿ ಮತ್ತು ನಿರ್ವಹಣೆ ನಡೆಸಲಾಗುತ್ತಿರುವುದು ಇದಕ್ಕೆ ಕಾರಣವೆಂದು ಅದು ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಜೂ.30 ರಂದು ಕೃಷ್ಣರಾಜೇಂದ್ರ ಜಲಶುದ್ದೀಕರಣ ಘಟಕದಲ್ಲಿ ವಿದ್ಯುತ್ ಪೂರೈಕೆಯನ್ನು ನಿಲುಗಡೆ ಮಾಡಲಾಗುತ್ತಿದೆ. ಇದರ ಪರಿಣಾಮವಾಗಿ ಜೂ.30 ಮತ್ತು ಜು.1 ರಂದು ಶಿವಮೊಗ್ಗ ನಗರದಲ್ಲಿ ದೈನಂದಿನ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಈ ಕಾರಣಕ್ಕೆ ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸಲು ಕೋರಿದೆ.

RELATED ARTICLES
- Advertisment -
Google search engine

Most Popular

Recent Comments