ಭದ್ರಾವತಿ: ವಿಐಎಸ್‌ಎಲ್ ನಗರಾಢಳಿತದವತಿಯಿಂದ ಸ್ವಚ್ಚತಾ ಕಾರ್ಯಕ್ಕೆ ನಿಯೋಜಿಸಿಕೊಂಡಿದ್ದ ಸಿಬ್ಬಂದಿಗಳನ್ನು ಶೌಚಾಲಯದ ಗುಂಡಿಯನ್ನು ಸ್ವಚ್ಚಗೊಳಿಸಲು ಯಂತ್ರ ಬಳಸದೆ ಸಿಬ್ಬಂದಿಗಳನ್ನು ಇಳಿಸಿದ್ದನ್ನು ವಿರೋಧಿಸಿ ಡಿಎಸ್‌ಎಸ್ ಕಾರ್ಯಕರ್ತರುಗಳು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರಕರಣದ ವಿವಿರ:
ವಿಐಎಸ್‌ಎಲ್ ನಗರಾಢಳಿತ ವ್ಯಾಪ್ತಿಯ ವಸತಿ ಗೃಹಗಳ ಶೌಚಾಲಯಗಳ ಗುಂಡಿ ಮತ್ತು ಚರಂಡಿಯನ್ನು ಸ್ವಚ್ಚ ಮಾಡಲು ಗುತ್ತಿಗೆ ಆಧಾರದ ಜನರನ್ನು ಮೇಲೆ ನೇಮಕ ಮಾಡಿಕೊಂಡಿದ್ದರು. ಸರ್ಕಾರದ ನಿಯಮಗಳನ್ನು ಪಾಲಿಸಿ ಅವರುಗಳು ಸ್ವಚ್ಚತಾ ಕಾರ್ಯವನ್ನು ಕಾರ್ಯ ನಿರ್ವಹಿಸಬೇಕಿತ್ತು. ಆದರೆ ನಗರಾಢಳಿತ ಕಚೇರಿಯ ಪ್ರಧಾನ ವ್ಯವಸ್ಥಾಪಕ ಮೋಹನ್ ಶೆಟ್ಟಿ ಎಂಬುವವರು ನ್ಯೂ ಕಾಲೋನಿಯ ಬಳಿ ಇರುವ ವಸತಿ ಗೃಹವೊಂದರ ಶೌಚಾಲಯದ ಗುಂಡಿ ಕಟ್ಟಿಕೊಂಡು ಕೊಳಚೆ ನೀರು ಸರಾಗವಾಗಿ ಹರಿದು ಹೋಗಲು ತೊಂದರೆ ಆಗಿತ್ತು .
ಈ ಬಗ್ಗೆ ಸ್ವಚ್ಚಗೊಳಿಸಲು ನಗರಾಢಳಿತ ಕಚೇರಿಯವರು ಯಂತ್ರದ ಮೂಲಕ ಸ್ವಚ್ಚ ಮಾಡಬೇಕಿತ್ತು. ಆದರೆ ಈ ಕಾರ್ಯಕ್ಕೆ ಗುತ್ತಿಗೆ ಕಾರ್ಮಿಕರಾದ ಸುಬ್ರಮಣಿ, ಕುಮಾರ್, ಮಹದೇವ ಎಂಬುವವರನ್ನು ನಿಯೋಜಿಸಿದ್ದರು. ಇದರ ವಿರುಧ್ದ ಯಂತ್ರದ ಬಳಕೆ ಮಾಡಿ ಸ್ವಚ್ಚಗೊಳಿಸದೆ ಮಾನವ ಬಳಕೆ ಮಾಡಿದ ಕಾರಣ ಆಕ್ರೋಶಗೊಂಡ ದಲಿತ ಸಂಘಟನೆಗಳು ಗುರುವಾರ ಬೆಳಿಗ್ಗೆ ದಿಢೀರನೆ ವಿಐಎಸ್‌ಎಲ್ ಆಡಳಿತ ಕಚೇರಿ ಎದುರು ಧರಣಿ ಅಧಿಕಾರಿಗಳ ಕರ್ತವ್ಯ ಲೋಪದ ಕ್ರಮವನ್ನು ಖಂಡಿಸಿ ಪ್ರತಿಭಟಿಸಿದರು.
ಈ ಬಗ್ಗೆ ಅಧಿಕಾರಿ ತಾವು ಮಾಡಿದ ಕಾರ್ಯದ ಬಗ್ಗೆ ಸೂಕ್ತ ಸಮಜಾಯಿಷಿ ನೀಡದ ಕಾರಣ ಧರಣಿ ನಿರತರು ನಗರಸಭೆ ಪರಿಸರ ಅಭಿಯಂತರ ಹೆಚ್.ಪ್ರಭಾಕರ ಮೂಲಕ ನ್ಯೂಟೌನ್ ಪೊಲೀಸ್ ಠಾಣೆಗೆ ತೆರಳಿ ಸಂಭಂಧಿಸಿ ಅಧಿಕಾರಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂಧರ್ಭದಲ್ಲಿ ಉಪಸ್ಥಿತರಿದ್ದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಗೋಪಾಲಪ್ಪ, ಕಚೇರಿ ಅದೀಕ್ಷಕಿ ಕೆ.ಎಸ್.ಕವಿತಾ ಕಾರ್ಖಾನೆ ಅಧಿಕಾರಿಗಳ ನಡೆಯನ್ನು ತಪ್ಪು ಎಂದು ಅಭಿಪ್ರಾಯಿಸಿದರು. ಡಿಎಸ್‌ಎಸ್ ನ ಸತ್ಯ ಭದ್ರಾವತಿ, ಕಾರ್ಣೀಕ್ ರಾಜ್, ರಂಗನಾಥ್, ಮಣಿ, ಪ್ರಸನ್ನ, ಗೋವಿಂದ, ಶಾಂತಮ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.