ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ೩ನೇ ಅವಧಿಯ ಕೇಂದ್ರ ಬಿಜೆಪಿ ಸರ್ಕಾರ ಅಭಿವೃದ್ಧಿ ಹೊಂದಿದ ಭಾರತಕ್ಕೆ ಸಂಕಲ್ಪ ಬಜೆಟ್ ಮಂಡಿಸಿದ್ದು, ಇದು ಸುಭದ್ರಾ, ಸ್ಪಷ್ಟ ಕಲ್ಪನೆಯ ಬಜೆಟ್ ಆಗಿದೆ ಎಂದು ಬಿಜೆಪಿ ರಾಜ್ಯ ಪ್ರಕೋಷ್ಟಗಳ ಸಂಚಾಲಕರಾದ ಎಸ್.ದತ್ತಾತ್ರಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚುನಾವಣೆಯ ಮೊದಲೇ ಬಿಜೆಪಿ ಸಂಕಲ್ಪಪತ್ರ ಬಿಡುಗಡೆ ಮಾಡಿತ್ತು. ವಿಕಸಿತ ಭಾರತ-ಅಭಿವೃದ್ಧಿ ಹೊಂದಿದ ದೇಶ ಮಾಡುತ್ತೇವೆ ಎನ್ನಲಾಗಿತ್ತು. ಸಂಕಲ್ಪ ಪತ್ರದಲ್ಲಿ ಪ್ರಸ್ತಾವಿಸಿದ ಶೇ.೬೦ರಷ್ಟನ್ನು ಮೊನ್ನೆಯ ಬಜೆಟ್‌ನಲ್ಲಿ ಅಳವಡಿಸಲಾಗಿದೆ ಎಂದರು.
ನವಪಥಗಳ ಮೂಲಕ ವಿಕಸಿತ ಭಾರತ ತರುವಂತಹ ವಿಶ್ವದಲ್ಲೇ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವಂತಹ ಬಜೆಟ್ ಇದಾಗಿದ್ದು, ಅಭಿವೃದ್ಧಿ ಹೊಂದಿದ ಭಾರತಕ್ಕೆ ಸಂಕಲ್ಪ ಬಜೆಟ್ ಇದಾಗಿದೆ ಎಂದರು.
ರಾಜ್ಯಕ್ಕೂ ಕೂಡ ಬಜೆಟ್‌ನಲ್ಲಿ ೭೨ ಹೊಸ ಯೋಜನೆಗಳ ಲಾಭ ಸಿಗಲಿದೆ. ಆದರೆ ಸಂಪೂರ್ಣವಾಗಿ ಬಜೆಟ್‌ನ್ನು ಅಧ್ಯಯನ ಮಾಡದೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆರೋಪ ಹೊರುಸುತ್ತಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ವಿಳಂಬಕ್ಕೆ ಕೂಡ ಇಲ್ಲಿನ ಅಧಿಕಾರಿಗಳು ಸರಿಯಾದ ತಾಂತ್ರಿಕ ಪ್ರಸ್ತಾವನೆ ಮಾಡದೇ ಇರುವುದು ಎಂದರು.
ಈ ಸಂದರ್ಭದಲ್ಲಿ ಪ್ರಮುಖರದ ಭವಾನಿರಾವ್ ಮೋರೆ, ಋಷಿಕೇಶ್ ಪೈ, ಭರತ್ ಶೇಖರ್, ರಮೇಶ್ ಗೌಡ, ಚಂದ್ರಶೇಖರ್, ಅಣ್ಣಪ್ಪ ಮತ್ತಿತರರು ಇದ್ದರು.