ಶಿವಮೊಗ್ಗ: ಹವಾಮಾನ ವೈಪರಿತ್ಯ ಹಿನ್ನೆಲೆ ಗೃಹ ಸಚಿವ ಪರಮೇಶ್ವರ್ ಪ್ರಯಾಣ ಮಾಡುತ್ತಿದ್ದ ಇಂಡಿಗೋ ವಿಮಾನ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗದೆ ಬೆಂಗಳೂರಿಗೆ ಹಿಂತಿರುಗಿದೆ. ಇದೇ ವಿಮಾನದಲ್ಲಿ ಆಗಮಿಸಿದ್ದ ಗೃಹ ಸಚಿವ ಜಿ.ಪರಮೇಶ್ವರ್ ಬೆಂಗಳೂರಿಗೆ ಮರಳುವಂತಾಗಿದೆ.
ಸೊರಬದಲ್ಲಿ ನೂತನ ಪೊಲೀಸ್ ಠಾಣೆ ಉದ್ಘಾಟನೆ ಕಾರ್ಯಕ್ರಮಕ್ಕಾಗಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ವಿಮಾನದಲ್ಲಿ ಆಗಮಿಸಿದ್ದರು. ನಂತರ ಶಿವಮೊಗ್ಗದಿಂದ ಸೊರಬಕ್ಕೆ ಪರಮೇಶ್ವರ್ ಹೋಗಬೇಕಿತ್ತು.
ಸೊರಬ ಹಾಗೂ ತೀರ್ಥಹಳ್ಳಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪೊಲೀಸ್ ಠಾಣೆ ಉದ್ಘಾಟನೆ ಕಾರ್ಯಕ್ರಮಕ್ಕೆ ವಿಮಾನದಲ್ಲಿ ಬರುತ್ತಿದ್ದರು. ಈ ಸಂದರ್ಭದಲ್ಲಿ ವಿಮಾನ ಲ್ಯಾಂಡ್ ಆಗದೇ ಬೆಂಗಳೂರಿಗೆ ಹಿಂದಿರುಗಿದೆ.
ಬೆಂಗಳೂರಿನಿಂದ ಬರುತ್ತಿದ್ದ ಇಂಡಿಗೋ ವಿಮಾನವು ಹಿಂದಿರುಗಿದ ಕಾರಣ ಗೃಹ ಸಚಿವರ ಜಿಲ್ಲಾ ಪ್ರವಾಸ ರದ್ದಾಗಿದೆ.
ಮಳೆ, ಮೋಡ ಕವಿದ ವಾತಾವರಣದಿಂದ ರನ್ ವೇ ವಿಸಿಬಲಿಟಿ ಇಲ್ಲದೆ ಈ ಸಮಸ್ಯೆ ಉದ್ಭವಿಸಿದೆ.