Monday, January 13, 2025
Google search engine
Homeಇ-ಪತ್ರಿಕೆಶಿವಮೊಗ್ಗ: ಪತ್ರಕರ್ತರ ಸಂಘದಿಂದ ಸಾವಿರ ಸಸಿ ನೆಡುವ ಕಾರ್ಯಕ್ರಮಕ್ಕೆ ಸೂಡ ಅಧ್ಯಕ್ಷ ಸುಂದರೇಶ್‌ ಚಾಲನೆ

ಶಿವಮೊಗ್ಗ: ಪತ್ರಕರ್ತರ ಸಂಘದಿಂದ ಸಾವಿರ ಸಸಿ ನೆಡುವ ಕಾರ್ಯಕ್ರಮಕ್ಕೆ ಸೂಡ ಅಧ್ಯಕ್ಷ ಸುಂದರೇಶ್‌ ಚಾಲನೆ

ಶಿವಮೊಗ್ಗ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಶಿವಮೊಗ್ಗ ಪ್ರೆಸ್ ಟ್ರಸ್ಟ್, ಜಿಲ್ಲಾಡಳಿತ ಮತ್ತು ಸೂಡಾ ಇವರ ಸಂಯುಕ್ತಾಶ್ರಯದಲ್ಲಿ ಸೋಮಿನಕೊಪ್ಪದ ನ್ಯಾಯಾಂಗ ಬಡಾವಣೆಯಲ್ಲಿ ಒಂದು ಸಾವಿರ ಸಸಿ ನಡುವ ಕಾರ್ಯಕ್ರಮಕ್ಕೆ ಸೂಡ ಅಧ್ಯಕ್ಷ ಹೆಚ್ ಎಸ್ ಸುಂದರೇಶ್ ಚಾಲನೆ ನೀಡಿದರು.

ಸಭಾಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪತ್ರಕರ್ತರಲ್ಲಿ ಎರಡು ವರ್ಗವಿದೆ ಒಂದು ನಕಾರಾತ್ಮಕ ಮತ್ತೊಂದು ಸಕರಾತ್ಮಕ ಸುದ್ದಿ ಮಾಡುವವರಿದ್ದಾರೆ.

ಇವರೆಲ್ಲರೂ ಸುದ್ದಿ ಮಾಡುವ ಮೂಲಕ ನೊಂದವರ ಪರವಿದ್ದಾರೆ. ನಾನು ಅಧ್ಯಕ್ಷ ನಾಗಿ ಬಂದ ನಂತರ ಐದು ಸಾವಿರ ನಿವೇಶನ ಮಾಡುವ ಗುರಿ ಹೊಂದಿದ್ದೇನೆ. ಆದರೆ ರೈತರಿಗೆ ಮಾರುಕಟ್ಟೆಯ ದರದಲ್ಲಿಪರಿಹಾರ ನೀಡಲಾಗುತ್ತಿಲ್ಲ. ಹಾಗಾಗಿ ನಿವೇಶನ ಮಾಡುವುದೇ ಕಷ್ಟವಾಗಿದೆ ಎಂದರು.

ಗೋಪಿಶೆಟ್ಟಿಕೊಪ್ಪದಲ್ಲಿ ಡಿನೋಟಿಫೈ ಮಾಡುವ ಹುನ್ಬಾರ ನಡೆದಿದೆ. ಅದನ್ನ ಸೂಡ ತಡೆಹಿಡಿದು ಸರ್ಕಸರಕ್ಕೆಡಿನೋಟಿ ಫೈ ಮಾಡದಂತೆ ಪತ್ರವರೆಯಾಗಿದೆ. ಸೂಡ ನಿವೇಶನ ಹಂಚಿಕೆಯಲ್ಲಿಯೇ ಪತ್ರಕರ್ತರಿಗೆ ಕಡಿಮೆ ಪರ್ಸೆಂಟೇಜ್ ನಲ್ಲಿ ಹಂಚಲಾಗುವುದು ಎಂದರು.

ಸೂಡಾ ಆಯುಕ್ತ ವಿಶ್ವನಾಥ್ ಮುದ್ದಜ್ಜಿ, ನ್ಯಾಯಾಂಗ ಇಲಾಖೆ ನೌಕರರ ಸಂಘದ ಅಧ್ಯಕ್ಷ ನರಸಿಂಹಮೂರ್ತಿ ಕಾರ್ಯದರ್ಶಿ ಪಾರ್ವತಮ್ಮ, ಶಿವಮೊಗ್ಗ ಟ್ರಸ್ಟ್  ಕಾರ್ಯದರ್ಶಿ ನಾಗರಾಜ್ ನೆರಿಗೆ, ಹಿರಿಯ ಪತ್ರಕರ್ತರಾದ ಗೋಪಾಲ ಯಡಗೆರೆ, ಶ್ರೀಕಾಂತ್ ಕಾಮತ್, ಮಾರ್ತಾಧಿಕಾರಿ ಮಾರುತಿ, ಸಂಘದ ಉಪಾಧ್ಯಕ್ಷರಾದ ವೈದ್ಯನಾಥ್, ಹಾಲಸ್ವಾಮಿ, ನಗರ ಕಾರ್ಯದರ್ಶಿ ಕೆ.ಆರ್.ಸೋಮನಾಥ್ ಉಪಸ್ಥಿತರಿದ್ದರು.  

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷರಾದ ಕೆ.ವಿ.ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಸಂಘದ ಜಿಲ್ಲಾ ಕಾರ್ಯದರ್ಶಿ ವಿ.ಟಿ.ಅರುಣ್ ಸ್ವಾಗತಿಸಿದರು. ಉಪಾಧ್ಯಕ್ಷ ದೀಪಕ್ ಸಾಗರ್ ನಿರೂಪಿಸಿದರು.

ವೇದಿಕೆ ಕಾರ್ಯಕ್ರಮದ ನಂತರ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

RELATED ARTICLES
- Advertisment -
Google search engine

Most Popular

Recent Comments