ಶಿವಮೊಗ್ಗ: ಸ್ಯಾಂಡಲ್‌ವುಡ್‌ನಲ್ಲಿ ಈಗ ಮತ್ತೊಂದು ಜೋಡಿ ಮದುವೆಗೆ ಸಿದ್ದವಾಗಿದೆ. ‘ಕಾಟೇರ’ ನಿರ್ದೇಶಕ ತರುಣ್ ಸುಧೀರ್ ಜೊತೆ ‘ಕಾಟೇರ’ ನಿರ್ದೇಶಕ ತರುಣ್ ಸುಧೀರ್ ಜೊತೆ ರಾಬರ್ಟ್ ನಟಿ ಸೋನಲ್ ಮದುವೆಗೆ ರೆಡಿಯಾಗಿದ್ದಾರೆ.
ಎರಡು ಕುಟುಂಬದ ಒಪ್ಪಿಗೆ ಮೇರೆಗೆ ಈಗ ತರುಣ್ ಮತ್ತು ಸೋನಲ್ ಮದುವೆಗೆ ಸಿದ್ದವಾಗಿದ್ದಾರೆ. ಮುಂದಿನ ತಿಂಗಳಿಗೆ ಮದುವೆ ದಿನಾಂಕವನ್ನು ನಿಗದಿಮಾಡಲಾಗಿತ್ತು. ಕಾರಣಾಂತರಗಳಿಂದ ಮದುವೆ ಮುಂದೂಡಲಾಗಿದೆ ಎಂದು ವರದಿಯಾಗಿದೆ.
ಚೌಕ, ರಾಬರ್ಟ್, ಕಾಟೇರ ಸಿನಿಮಾಗಳ ಯಶಸ್ಸಿನ ನಂತರ ತರುಣ್ ತಮ್ಮ ಮುಂದಿನ ಸಿನೆಮಾದ ಕುರಿತು ಸಿದ್ದತೆ ನಡೆಸಿದ್ದಾರೆ. ಎಂಎಲ್‌ಎ, ಮದುವೆ ದಿಬ್ಬಣ, ರಾಬರ್ಟ್, ಗರಡಿ, ಶುಗರ್ ಫ್ಯಾಕ್ಟರಿ ಮುಂತಾದ ಚಿತ್ರಗಳಲ್ಲಿ ಸೋನಲ್ ನಟಿಸಿದ್ದಾರೆ.