ಹರಿಹರ: ರಾಜ್ಯ ಸರ್ಕಾರ ಇಂಧನ ಬೆಲೆಗಳ ಏರಿಕೆ ಮಾಡಿರುವುದನ್ನು ವಿರೋಧಿಸಿ ಶಾಸಕ ಬಿ.ಪಿ.ಹರೀಶ್ ನೇತೃತ್ವದಲ್ಲಿ ಬಿಜೆಪಿಯಿಂದ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.
ನಗರದ ರಾಣಿ ಚೆನ್ನಮ್ಮ ವೃತ್ತದಲ್ಲಿ ಶನಿವಾರ ಶಾಸಕರ ನೇತೃತ್ವದಲ್ಲಿ ಬಿಜೆಪಿಯ ಹಲವು ಜಿಲ್ಲಾ ಮುಖಂಡರು ಸೇರಿದಂತೆ ಸ್ಥಳೀಯ ಮುಖಂಡರೊಂದಿಗೆ ಜಮಾಯಿಸಿ ಕೆಲಬತ್ತು ರಸ್ತೆ ತಡೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುವುದರ ಮೂಲಕ ಬೆಲೆಏರಿಕೆ ವಿರೋಧಿಸಿ ಪ್ರತಿಭಟನೆ ನಡೆಸಿದರು.
ಇದೇ ವೇಳೆ ಶಾಸಕ ಬಿಪಿ ಹರೀಶ್ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ರೈತರಿಗೆ ಹಾಗೂ ಜನಸಾಮಾನ್ಯರಿಗೆ ಅಗತ್ಯವಾಗಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಿರುವುದು ರಾಜ್ಯದ ಜನತೆಯ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೂಡಲೇ ದರವನ್ನು ಹಿಂಪಡೆಯಬೇಕು. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಉಚಿತ ಯೋಜನೆಗಳಿಗಾಗಿ ರಾಜ್ಯ ಸರ್ಕಾರವು ಹಲವಾರು ಯೋಜನೆಗಳ ಅನುದಾನವನ್ನು ವರ್ಗಾವಣೆ ಮಾಡಿ ಇನ್ಯಾವುದೋ ಯೋಜನೆಗಳಿಗೆ ಬಳಕೆ ಮಾಡಲಾಗುತ್ತಿದೆ. ಪರಿಶಿಷ್ಟ ಜಾತಿ ಅಲ್ಪಸಂಖ್ಯಾತರು ಪರಿಶಿಷ್ಟ ವರ್ಗಗಳ ಅನುದಾನವನ್ನು ಇತರೆ ಬೇರೆ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳುವುದು ರಾಜ್ಯ ಸರ್ಕಾರಕ್ಕೆ ಸಾಮಾನ್ಯವಾಗಿ ಹೋಗಿದೆ. ಇದನ್ನು ನಾವು ಖಂಡಿಸುತ್ತಿರುವುದಾಗಿ ತಿಳಿಸಿದರು.
ಈ ಸಮಯದಲ್ಲಿ ಬಿಜೆಪಿ ಮುಖಂಡ ಚಂದ್ರಶೇಖರ ಪೂಜಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಣ್ಣೇಶ್ ಐರಣಿ, ಮಾಜಿ ಜಿಲ್ಲಾ ಉಪಾಧ್ಯಕ್ಷ ಬಾತಿ ಚಂದ್ರಶೇಖರ್, ನಗರ ಘಟಕದ ಅಧ್ಯಕ್ಷ ಅಜಿತ್ ಸಾವಂತ್, ಪ್ರಧಾನ ಕಾರ್ಯದರ್ಶಿ ತುಳಜಪ್ಪ ಭೂತೆ, ವೀರೇಶ ಆದಾಪೂರ್, ನಗರಸಭೆ ಸದಸ್ಯ ಆಟೋ ಹನುಮಂತಪ್ಪ, ಮುಖಂಡರಾದ ವಾಸು ಚಂದಾಪೂರ, ಸಂತೋಷ ಗುಡಿಮನಿ, ರಾಜೇಶ್ ವರ್ಣೇಕರ್, ಹಳ್ಳದಕೇರಿ ಗಿರೀಶ್,ರವಿ, ಕಾರ್ತಿಕ್, ಸನಾವುಲ್ಲಾ,ಆಟೋ ನಾಗರಾಜ್,ಶಾಂತರಾಜ್, ನಗರಸಭಾ ಮಾಜಿ ಸದಸ್ಯ ಸುರೇಶ್ ತೇರದಾಳ, ವೈ.ಬಿ.ಪ್ರಭಾಕರ್, ನಂದಿಗಾವಿ ರಮೇಶ್,ರಾಜು ಖಿರೋಜಿ, ಗೋಪಿನಾಥ್,ಫೋಟೋ ಸಂತೋಷ್, ಬೆಣ್ಣೆ ಸಿದ್ದಪ್ಪ.ಪ್ರಶಾಂತ್ ಎಲ್ಐಸಿ, ಮಾರುತಿ ಶೆಟ್ಟಿ, ಐರಣಿ ನಾಗರಾಜ್, ಜಡಿಯಪ್ಪ.ಕಾರ್ತಿಕ್ ಟಿ.ಎಮ್.ಅಕ್ಷಯ್ ಸೇರಿದಂತೆ ಭಾರತೀಯ ಜನತಾ ಪಕ್ಷದ ವಿವಿಧ ಮುಖಂಡರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.