Monday, January 13, 2025
Google search engine
HomeUncategorizedಪುಲ್ವಾಮಾ ದಾಳಿಯ ನಿಖರ ಸತ್ಯವನ್ನು ದೇಶದ ಜನತೆಗೆ ನೀಡಿ ಕೇಂದ್ರ ಸರ್ಕಾರಕ್ಕೆ ಯುವ ಕಾಂಗ್ರೆಸ್...

ಪುಲ್ವಾಮಾ ದಾಳಿಯ ನಿಖರ ಸತ್ಯವನ್ನು ದೇಶದ ಜನತೆಗೆ ನೀಡಿ ಕೇಂದ್ರ ಸರ್ಕಾರಕ್ಕೆ ಯುವ ಕಾಂಗ್ರೆಸ್ ಆಗ್ರಹ*

ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದಮಂಗಳವಾರ ಸೈನಿಕ ಪಾರ್ಕ್ ನಲ್ಲಿ ಸೈನಿಕರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ ಮುಂಬತ್ತಿ ಹಚ್ಚಿ. ಪುಲ್ವಾಮದಲ್ಲಿ ಹುತಾತ್ಮರಾದ ಕರ್ತವ್ಯ ನಿರತ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ 40 ಜನ ಹುತಾತ್ಮ ಯೋಧರಿಗೆ ಗೌರವಾರ್ಪಣ ಪ್ರಣಾಮಗಳನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಎನ್ ರಮೇಶ್ ರವರು ಯುದ್ದವಿಲ್ಲದೆ 40 ಕ್ಕೂ ಹೆಚ್ಚು ಸೈನಿಕರು ಬಾಂಬ್ ದಾಳಿಗೆ ಒಳಗಾಗಿ ಹುತಾತ್ಮರಾಗಿ ಮೂರು ವರ್ಷ ಕಳೆದರೂ ಇಂದಿಗೂ ಪುಲ್ವಾಮಾ ದಾಳಿಯ ಕುರಿತು ನಿಖರವಾದ ಸತ್ಯ ಹೊರ ಬಂದಿಲ್ಲ ಹಾಗೂ ಮಡಿದ ಸೈನಿಕರ ಕುಟುಂಬಗಳಿಗೆ ಸೂಕ್ತ ನ್ಯಾಯ ಸಿಕ್ಕಿಲ್ಲ ಆ ಕುಟುಂಬಗಳು ಈಗಲೂ ಕಣ್ಣೀರಿನಲ್ಲಿ ಬದುಕು ಸಾಗಿಸುತ್ತಿವೆ ಆದರೆ ಇದನ್ನೆ ಬಳಸಿಕೊಂಡು ಚುನಾವಣೆ ಗೆದ್ದವರು ಇಂದು ದೇಶವನ್ನು ಮೊತ್ತೊಂದಿಷ್ಟು ದಿವಾಳಿ ಮಾಡಲು ಹೊರಟಿದ್ದಾರೆ. ಎಂದರು*

*ನಂತರ ಮಾತನಾಡಿದ ಜಿಲ್ಲಾ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಕೆ ರಂಗನಾಥ್ ರವರು ಅತ್ಯಂತ ಸೂಕ್ಷ್ಮವಾದ ಮತ್ತು ಸಾಕಷ್ಟು ಭದ್ರತೆ ಇರುವ ಪ್ರದೇಶದಲ್ಲಿ 350Kg RDX ಬಾಂಬ್ ಹೊತ್ತ ಕಾರು ಹೇಗೆ ಬಂತು ಎನ್ನುವ ಅನುಮಾನಕ್ಕೆ ಇಂದಿಗೂ ಸ್ಪಷ್ಟತೆ ಸಿಕ್ಕಿಲ್ಲ? ಬರೀ ಸಂತಾಪ ಸೂಚಿಸಿದರೆ ಸಾಲದು, ವೀರ ಯೋಧರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಯುವಕರು ಹೋರಾಟಕ್ಕಿಳಿದು ದೇಶದಲ್ಲಿ ಅಧಿಕಾರ ನಡೆಸುತ್ತಿರುವ ಸರ್ಕಾರವನ್ನು ನ್ಯಾಯ ಕೇಳಬೇಕೆಂದು ಕರೆ ನೀಡಿದರು.

*ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ ಪ್ರವೀಣ್ ಕುಮಾರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್‍.ಪಿ ಗಿರೀಶ್, ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ನ ಎಸ್ ಕುಮಾರೇಶ್, ರಾಜ್ಯ ಕಾರ್ಯದರ್ಶಿ ಆರ್ ಕಿರಣ್, ,ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಎಂ ರಾಹುಲ್ , ರಾಕೇಶ್ , ಇರ್ಫಾನ್,ಯುವ ಕಾಂಗ್ರೆಸ್ ನಗರ ಉಪಾಧ್ಯಕ್ಷ ಕೆ.ಎಲ್ ಪವನ್, ಪ್ರಮುಖರಾದ ತಂಗರಾಜ್, ಮಸ್ತಾನ್, ಮೋಹನ್ ಸೋಮನಕೊಪ್ಪ ,ಎನೋಶ್, ಅಹದ್ ಸೋಮಿನಕೊಪ್ಪ, ವಿನಯ್ ಮೆಂಡಿಸ್, ಇನ್ಶಲ್, ಅನ್ವರ್ ಯುವ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.

RELATED ARTICLES
- Advertisment -
Google search engine

Most Popular

Recent Comments