ಬೆಂಗಳೂರು: ಪಂಚೆಯುಟ್ಟು ಬಂದಿದ್ದ ರೈತನಿಗೆ ಪ್ರವೇಶ ನಿರಾಕರಿಸಿ ಅವಮಾನಿಸಿದ್ದಕ್ಕೆ ಜಿಟಿ ಮಾಲ್ ಆಡಳಿತ ಮಂಡಳಿ ಕ್ಷಮೆಯಾಚಿಸಿದೆ.
ಬೆಂಗಳೂರಿನ ಜಿಟಿ ಮಾಲ್‌ಗೆ 60 ವರ್ಷ ವಯಸ್ಸಿನ ಫಕೀರಪ್ಪ ಎಂಬ ರೈತರು ಸಾಂಪ್ರದಾಯಿಕ ಧೋತಿ ಮತ್ತು ಶರ್ಟ್ ಧರಿಸಿದ ಬಂದಿದ್ದರು ಎಂಬ ಕಾರಣಕ್ಕೆ ಒಳಗೆ ಬಿಡಲಿಲ್ಲ. ನಿನ್ನೆ ಅವರು ತಮ್ಮ ಮಗ ಮತ್ತು ಇಡೀ ಕುಟುಂಬದೊಂದಿಗೆ ಕಲ್ಕಿ ಸಿನಿಮಾ ವೀಕ್ಷಣೆಗೆ ಬಂದಿದ್ದರು. ರೈತ ಮತ್ತು ಅವರ ಮಗ ಮಂಗಳವಾರ ಚಲನಚಿತ್ರವನ್ನು ವೀಕ್ಷಿಸಲು ಮಾಲ್‌ಗೆ ಹೋಗಿದ್ದಾರೆ, ಆದರೆ ಭದ್ರತಾ ಸಿಬ್ಬಂದಿ ಅವರ ಪ್ರವೇಶಕ್ಕೆ ಸೂಕ್ತವಲ್ಲ ಎಂದು ಪರಿಗಣಿಸಿದ್ದಾರೆ.
ನಿನ್ನೆ ವ್ಯಕ್ತಿಯೊಬ್ಬರು ಪಂಚೆಯುಟ್ಟು ಬಂದಿದ್ದರು. ಪಂಚೆಯನ್ನು ಮೊಣಕಾಲಿನವರೆಗೆ ಧರಿಸಿದ್ದರು. ಆಗ ಕೆಳಗಿನ ಫ್ಲೋರ್‌ನಲ್ಲಿ ಬರ್ತ್‌ಡೇ ಪಾರ್ಟಿ ನಡೆಯುತ್ತಿತ್ತು. ಈ ವಿಚಾರವನ್ನು ಮ್ಯಾನೇಜ್‌ಮೆಂಟ್ ಗಮನಕ್ಕೆ ತಂದಿದ್ದೆವು ಎಂದಿದ್ದಾರೆ.
ಸಂಜೆ ಮತ್ತೆ ರೈತನೊಬ್ಬ ಪಂಚೆಯುಟ್ಟು ಬಂದಿದ್ದರು. ಈ ಸಮಯದಲ್ಲಿ ನಾವು ತಡೆದು, ಮ್ಯಾನೇಜ್‌ಮೆಂಟ್ ಗಮನಕ್ಕೆ ತಂದಿದ್ದೇವೆ.
ರೈತನಿಗೆ ಪ್ರವೇಶ ನಿರಾಕರಿಸಿ ಅವಮಾನಿಸಿದ್ದಕ್ಕೆ ಮಾಲ್ ವಿರುದ್ಧ ಜನಾಕ್ರೋಶ ವ್ಯಕ್ತವಾಗಿತ್ತು. ರೈತಪರ ಹಾಗೂ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಮಾಲ್ ಮುಂದೆ ಪ್ರತಿಭಟನೆ ನಡೆಸಿದರು.
ನಿನ್ನೆ ರೈತ ಫಕೀರಪ್ಪಗೆ ಪ್ರವೇಶ ನಿರಾಕರಿಸಿ ಜಿಟಿ ಮಾಲ್‌ನಲ್ಲಿ ಅವಮಾನಿಸಲಾಗಿತ್ತು. ಇಂದು ಅದೇ ಮಾಲ್ ಆಡಳಿತ ಮಂಡಳಿಯ ಉಸ್ತುವಾರಿ ಸುರೇಶ್ ಅವರಿಂದ ರೈತ ಫಕೀರಪ್ಪರನ್ನು ಸನ್ಮಾನಿಸಲಾಯಿತು.