ಆಹಾರದ ಗುಣಮಟ್ಟ ಪರಿಶೀಲನೆ, ಜನರ ಆರೋಗ್ಯ ಕೆಡಿಸುವ ಕಲರ್ ಪ್ಯಾಕೆಟ್ ಬಳಸದಂತೆ ವಾರ್ನಿಂಗ್
ಶಿವಮೊಗ್ಗ: ನಗರದಲ್ಲಿನ ಫುಡ್ ಕೋರ್ಟ್ ನಲ್ಲಿ ಅಂಗಡಿಗಳಲ್ಲಿ ಗ್ರಾಹಕರಿಗೆ ನೀಡುವ ಆಹಾರದ ಬಗ್ಗೆ ಸಾರ್ವಜನಿಕರಿಂದ ಈಗೀಗ ಹೆಚ್ಚಾಗಿ ದೂರುಗಳು ಬರುತ್ತಿರುವುದರ ನಡುವೆಯೇ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಅಧಿಕಾರಿಗಳ ತಂಡವು, ನಾನ್ ವೆಜ್ ಫುಡ್ ಕೋರ್ಡ್ ಅಂಗಳಕ್ಕೆ ದಾಳಿ ನಡೆಸಿ ಅಲ್ಲಿನ ಅಂಗಡಿಗಳ ಆಹಾರದ ಗುಣಮಟ್ಟ ಪರಿಶೀಲನೆ ನಡೆಸಿದೆ.
ಅಧಿಕಾರಿಗಳು ದಾಳಿ ನಡೆಸಿದ ವೇಳೆ ಆಹಾರಕ್ಕೆ ಬೆರೆಸುವ ಕಲರ್ ಪ್ಯಾಕೆಟ್ ದೊರೆತಿದೆ. ಅಲ್ಲಿನ ಸಿಬ್ಬಂದಿಗಳ ಸ್ವಚ್ಛತೆ ಕಾಣದೆ ಇರುವುದು, ವೈದ್ಯಕೀಯ ತಪಾಸಣೆ ಇಲ್ಲದಿರುವುದು ಎಲ್ಲವೂ ಅಧಿಕಾರಿಗಳ ಗಮನಕ್ಕೆ ಬಂದಿತ್ತಲ್ಲದೆ, ಕಲಬೆರೆಕೆ ಪದಾರ್ಥ ತಯಾರಿಕೆ ಸಂಬಂಧ 15 ತಿನಿಸು ಅಂಗಡಿಗಳಿಗೆ ನೋಟೀಸ್ ನೀಡಿದ ಘಟನೆ ನಡೆದಿದೆ.
ಆರೋಗ್ಯಕ್ಕೆ ಮಾರಕವಾಗುವ ಕಲಬೆರೆಕೆ ಬಣ್ಣವನ್ನು ಹಾಕಲಾಗುತ್ತಿದೆ ಎಂದು ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಅಧಿಕಾರಿಗಳ ತಂಡವು ಅಲ್ಲಿಗೆ ದಾಳಿ ನಡೆಸಿತ್ತು. ಸುಮಾರು 15 ಅಂಗಡಿಗಳಿಗೆ ನೋಟೀಸ್ ನೀಡಲಾಗಿದೆ.