ಶಿವಮೊಗ್ಗ: ಪ್ರಯಾಣಿಕರ ಬೇಡಿಕೆ ಮೇರೆಗೆ ಶಿವಮೊಗ್ಗ-ಚೆನೈ ನಡುವಿನ ಟ್ರೈನ್ ನಾಳೆಯಿಂದ (ಶನಿವಾರ)ಪ್ರಾರಂಭವಾಗಲಿದ್ದು, ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಅಭಿಂದನೆ ಸಲ್ಲಿಸುತ್ತೇನೆ ಎಂದು ಸಂಸದ ಬಿ.ವೈ. ರಾಘವೇಂದ್ರ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಶಿವಮೊಗ್ಗ ಜಿಲ್ಲೆಗೆ ಈಗಾಗಲೇ ಹಲವಾರು ನೂತನ ರೈಲುಗಳ ಸೇವೆಯನ್ನು ಒದಗಿಸಲಾಗಿದ್ದು, ಇದರ ಜೊತೆಗೆ ವಾರಕ್ಕೊಮ್ಮೆ ಇದೇ ಶನಿವಾರದಿಂದ ಶಿವಮೊಗ್ಗದಿಂದ ಚೆನೈಗೆ ಎಕ್ಸ್ ಪ್ರೆಸ್ ರೈಲಿನ ಸೇವೆಯು ಪ್ರಾರಂಭಗೊಳ್ಳುತ್ತಿದೆ. ಸಂಜೆ 5.15ಕ್ಕೆ ಸದರಿ ಟ್ರೈನ್ ಗೆ ಚಾಲನೆ ನೀಡಲಾಗುತ್ತದೆ. ಸಂಜೆ 4.15ರಿಂದ ಕಾರ್ಯಕ್ರಮ ಪ್ರಾರಂಭಗೊಳ್ಳುತ್ತದೆ. ದಯಮಾಡಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮ ಯಶಸ್ವಿಗೊಳಿಸಲು ಕೋರುತ್ತೇನೆ ಎಂದು ಹೇಳಿದ್ದಾರೆ.
ನಾಳೆ ಸಂಜೆ 5.15ಕ್ಕೆ ಶಿವಮೊಗ್ಗ ಬಿಡುವ ಈ ರೈಲು ಭದ್ರಾವತಿ, ತರೀಕೆರೆ, ಬೀರೂರು, ಕಡೂರು, ಅರಸಿಕೆರೆ, ತಿಪಟೂರು, ತುಮಕೂರು, ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು, ಕೆ.ಆರ್.ಪುರಂ, ವೈಟ್ ಫೀಲ್ಡ್, ಬಂಗಾರಪೇಟೆ, ಕುಪ್ಪಂ, ಜೋಲಾರಪೇಟೆ, ಕಾಟಪಾಡಿ, ಸೋಲಿಂಗರ್, ಅರಕೋಣಂ, ಪೆರಂಬೂರು ಮಾರ್ಗವಾಗಿ ಭಾನುವಾರ ಬೆಳಿಗ್ಗೆ 4.55ಕ್ಕೆ ಚೆನೈ ತಲುಪುತ್ತದೆ ಹಾಗೂ ಭಾನುವಾರ ರಾತ್ರಿ 11.30ಕ್ಕೆ ಚೆನೈ ಬಿಡುವ ಈ ರೈಲು ಮಾರನೇ ದಿನ ಸೋಮವಾರ ಮಧ್ಯಾಹ್ನ 12.20ಕ್ಕೆ ಶಿವಮೊಗ್ಗ ತಲುಪುತ್ತದೆ ಎಂದು ಮಾಹಿತಿ ನೀಡಿದ್ದಾರೆ.