ಹೊಸನಗರ: ನಗರ ಹೋಬಳಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಚಕ್ರಾ ಜಲಾಶಯ ಭರ್ತಿಯಾಗಿ ಮೈದುಂಬಿಕೊಂಡಿದೆ. ಡ್ಯಾಂನಿಂದ ಭಾರೀ ಪ್ರಮಾಣದ ಓವರ್ ಫ್ಲೋ ಆಗುತ್ತಿದ್ದು, ನೀರಿನ ಹರಿವಿನ ದೃಶ್ಯ ನೋಡಿಗರ ಕಣ್ಮನ ಸೆಳೆಯುತ್ತಿದೆ.
579ಮೀ ಗರಿಷ್ಠ ಮಟ್ಟದ ಜಲಾಶಯ ಸಂಪೂರ್ಣ ತುಂಬಿದೆ. ಲಿಂಗನಮಕ್ಕಿಗೆ ನೀರು ಹರಿಸಲಾಗುತ್ತಿದ್ದರು ಕೂಡ ಹೆಚ್ಚಿನ ಒಳಹರಿವು ಇರುವ ಕಾರಣ ಓವರ್ ಫ್ಲೋ ಆಗುತ್ತಿದೆ. ಹೆಚ್ಚುವರಿ ಒಳಹರಿವಿನಿಂದಾಗಿ ಸುಮಾರು 300 ಅಡಿ ಕೆಳಗೆ ನೀರು ಧುಮುಕುತ್ತಿದ್ದು, ಇದು ವೀಕ್ಷಕರ ಮೈ ರೋಮಾಂಚನ ಗೊಳಿಸುತ್ತಿದೆ.
ಎಡಬಿಡದೇ ಸುರಿಯುತ್ತಿರುವ ಮಳೆ, ವನ್ಯಸಿರಿಯನ್ನು ಆಕ್ರಮಿಸಿಕೊಂಡಿರುವ ಮೋಡಗಳು, ಸುತ್ತಲೂ ಕಂಡುಬರುವ ಜಲರಾಶಿ ನಡುವೆ ಇಡೀ ಚಕ್ರಾ ಜಲಾಶಯದ ನೋಟ ಚಿತ್ತಾಕರ್ಷಕವಾಗಿ ಮೋಡಿ ಮಾಡುತ್ತಿದೆ.
ಚಕ್ರಾ ಜಲಾಶಯ ಓವರ್ ಫ್ಲೋ ಆಗುತ್ತಿರುವ ಮಾಹಿತಿ ತಿಳಿಯುತ್ತಿದ್ದಂತೆ ಪ್ರವಾಸಿಗರು ಹರಿದು ಬರಲಾರಂಭಿಸಿದ್ದಾರೆ.
………………………………
ಚಕ್ರಾ ಸಾವೇಹಕ್ಲು ಜಲಾಶಯಕ್ಕೆ ಹೋಗಲು ಪಾಸ್ ಬೇಕು. ಮಾಸ್ತಿಕಟ್ಟೆ ಕೆಪಿಸಿ ಕಚೇರಿಯಲ್ಲಿ ಪಾಸ್ ನೀಡಲಾಗುತ್ತಿದೆ.