ಪತ್ರಿಕಾಗೋಷ್ಟಿಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಮಹಾಲಿಂಗಶಾಸ್ತ್ರಿ ಮಾಹಿತಿ
ಶಿವಮೊಗ್ಗ : ರಾಷ್ಟ್ರಭಕ್ತರ ಬಳಗದಿಂದ 1500 ಜನರ ಕಾಶಿ, ಅಯೋಧ್ಯೆ ಯಾತ್ರೆಕಾಶಿಯಾತ್ರೆ ಮತ್ತು ಅಯೋಧ್ಯ ಯಾತ್ರೆಯನ್ನು ಏರ್ಪಡಿಸಲಾಗಿದ್ದು, ನ.23 ರ ಬೆಳಗ್ಗೆ 6.00 ಗಂಟೆಗೆ ಶಿವಮೊಗ್ಗದಿಂದ ವಿಶೇಷ ರೈಲು ಹೊರಡಲಿದೆ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ರಾಷ್ಟ್ರಭಕ್ತರ ಬಳಗದ ಮುಖಂಡರಾದ ಮಹಾಲಿಂಗಶಾಸ್ತ್ರಿ ತಿಳಿಸಿದರು.
ಮಂಗಳವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ನ.23 ರ ಬೆಳಿಗ್ಗೆ 6.15 ಕ್ಕೆ ಶಿವಮೊಗ್ಗ ರೈಲ್ವೆ ನಿಲ್ದಾಣದಿಂದ ಹೊರಡಲಿರುವ ವಿಶೇಷವಾದ ರೈಲಿಗೆ ಬೆಕ್ಕಿನಕಲ್ಮಠ ಸ್ವಾಮಿಗಳು, ಬಸವ ಮರುಳಸಿದ್ದ ಸ್ವಾಮಿಗಳು, ಸಾಯಿನಾಥ್ ಸ್ವಾಮಿಜಿಗಳು ಧ್ವಜ ತೋರಿಸುವ ಮೂಲಕ ಚಾಲನೆ ನೀಡಲಿದ್ದಾರೆ. ಒಟ್ಟು 1500 ಜನರು ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದು, 24 ಭೋಗಿಗಳಲ್ಲಿ ಸಂಚರಿಸಲಿದ್ದೇವೆ ಎಂದರು.
ನ.23 ರಿಂದ ಶಿವಮೊಗ್ಗದಿಂದ ಯಾತ್ರೆ ಹೊರಡಲಿದ್ದು, 48 ಗಂಟೆ ಪ್ರಯಾಣ ನಡೆಸಿ, ನ.25 ರ ಬೆಳಗ್ಗೆ 10.00 ಗಂಟೆಗೆ ಅಯೋಧ್ಯ ತಲುಪಲಿದ್ದೇವೆ. ನ.26 ಕ್ಕೆ ಕಾಶಿ ತಲುಪಲಿದ್ದು, ಕಾಶಿ ಜಗದ್ಗುರುಗಳು ಯಾತ್ರಾರ್ಥಿಗಳಿಗೋಸ್ಕರ ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದರು.
ಕಾಶಿ ಜಗದ್ಗುರು ನೇತೃತ್ವದಲ್ಲಿ ಮಣಿಕಂಟ ಘಾಟು ತುಪಲಿದ್ದೇವೆ. ಧ್ಯಾನ ಭಜನೆ ಸೇರಿದಂತೆ ಎರಡು ದಿನಗಳ ಕಾಲ ಕಾಶಿಯಲ್ಲಿ ತಂಗಲಿದ್ದೇವೆ. ಕಾಶಿ ವಿಶ್ವನಾಥ, ವಿಶಾಲಾಕ್ಷಿ ದರ್ಶನ ಮಾಡಿ, ನ.27 ರಂದು ಅಲ್ಲಿಂದ ಹೊರಟು ನ.29 ರ ರಾತ್ರಿ ಶಿವಮೊಗ್ಗ ತಲುಪಲಿದ್ದೇವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಎಂ.ಶಂಕರ್, ಬಾಲು, ಮಾಂಡೇನಕೊಪ್ಪ ಗಂಗಾಧರ್, ಮೋಹನ್, ಈ.ವಿಶ್ವಾಸ್, ಶಿವಾಜಿ ಸೇರಿದಂಯತೆ ಇನ್ನಿತರರು ಉಪಸ್ಥಿತರಿದ್ದರು.
ಒಟ್ಟಾರೆ ಯಾತ್ರೆಗೆ ರೂ.7,500 ಶುಲ್ಕವಿದ್ದು, ಯಾತ್ರೆ ಸಮಯದ ಇತ್ಯಾದಿ ಖರ್ಚುಗಳನ್ನು ರಾಷ್ಟ್ರ ಭಕ್ತ ಬಳಗದ ವತಿಯಿಂದ ಭರಿಸಲಾಗುತ್ತಿದೆ. ವಿಶೇಷ ರೈಲನ್ನು ಹೊರತುಪಡಿಸಿ ಯಾತ್ರಾ ಸಲುವಾಗಿಯೇ 300 ಆಟೋಗಳು ಹಾಗೂ 100 ಜೀಪ್‍ಗಳ ವ್ಯವಸ್ಥೆ ಮಾಡಲಾಗಿದೆ ಎಂದರು.