ಕನ್ನಡ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ರಾಜಪ್ಪ ಮಾಸ್ತರ್ ಅಭಿಮತ
ಸೊರಬ : ಕನ್ನಡ ನಾಡು, ನುಡಿಗೆ ಇರುವ ಇತಿಹಾಸವನ್ನು ಅರಿಯಲು ಇದೊಂದು ಉತ್ತಮ ಕಾರ್ಯವಾಗಿದೆ. ರಥವು ತಾಲೂಕಿಗೆ ಆಗಮಿಸಿರುವುದು ಅತ್ಯಂತ ಸಂತಸದ ವಿಷಯವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ರಾಜಪ್ಪ ಮಾಸ್ತರ್ ತಿಳಿಸಿದರು.
ಕರ್ನಾಟಕದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಕನ್ನಡಿಗರು ಸಾಧಿಸಿದ್ದಾರೆ. ಬಹುಸಂಸ್ಕøತಿಯ ನಾಡಿನಲ್ಲಿ ಹಿಂದಿ ಹೇರಿಕೆ ಸಲ್ಲದು. ಕನ್ನಡಕ್ಕೆ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿದ್ದು, ಶಾಸ್ತ್ರೀಯ ಭಾμÁ ಸ್ಥಾನಮಾನವು ಲಭಿಸಿದೆ. ಸರ್ಕಾರಗಳು ಕನ್ನಡಿಗರಿಗೆ ಉದ್ಯೋಗದಲ್ಲಿ ಮೊದಲ ಪ್ರಾಶಸ್ತ್ಯ ನೀಡಬೇಕು ಎಂದರು.
ಕರ್ನಾಟಕವೆಂದು ರಾಜ್ಯಕ್ಕೆ ನಾಮಕರಣಗೊಂಡು ಐವತ್ತು ವರ್ಷಗಳ ಹಿನ್ನೆಲೆ ಕರ್ನಾಟಕ ಸುವರ್ಣ ಸಂಭ್ರಮ ರಥವನ್ನು ಪಟ್ಟಣದ ಪುರಸಭೆ ಮುಂಭಾಗದ ವೃತ್ತದಲ್ಲಿ ತಾಲೂಕು ಆಡಳಿತ, ಪುರಸಭೆ, ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಸಾಹಿತ್ಯ ಸಾಂಸ್ಕøತಿಕ ವೇದಿಕೆ, ಕನ್ನಡ ಜಾನಪದ ಪರಿಷತ್ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳಿಂದ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಇದಕ್ಕೂ ಮೊದಲು ತಾಲೂಕಿನ ಗಡಿಭಾಗವಾದ ಛತ್ರದಹಳ್ಳಿಗೆ ರಥವು ಆಗಮಿಸುತ್ತಿದ್ದಂತೆ ತಹಶೀಲ್ದಾರ್ ಮಂಜುಳಾ ಹೆಗಡಾಳ್ ಮಾಲಾರ್ಪಣೆ ಮಾಡುವ ಮೂಲಕ ಸ್ವಾಗತಿಸಿದರು. ಪುರಸಭೆ ಮುಂಭಾಗದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಎಂ.ಡಿ.ಉಮೇಶ್ ನಾಡದೇವಿ ಭುವನೇಶ್ವರಿ ದೇವಿಗೆ ಪುμÁ್ಪರ್ಷನೆ ಮಾಡಿದರು. ಪುರಸಭೆ ಮುಂಭಾಗದ ವೃತ್ತದಿಂದ ಮುಖ್ಯರಸ್ತೆಯಲ್ಲಿ ರಥವು ಮೆರವಣಿಗೆಯಲ್ಲಿ ಗುಡ್ಡೆಕೊಪ್ಪದ ಶ್ರೀ ಸಿದ್ಧರಾಮೇಶ್ವರ ಯುವಕ ಸಂಘದ ಡೊಳ್ಳು ಕುಣಿತದೊಂದಿಗೆ ಸಂಚರಿಸಿತು.