ಶಿವಮೊಗ್ಗ : ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣವಾದ ನಂತರ ಸಣ್ಣ ಮತ್ತು ಮಧ್ಯಮವರ್ಗದ ಉದ್ದಿಮೆ ದಾರರಿಗೆ ಬ್ಯಾಂಕುಗಳ ಸಾಲ ಕೊಡಲು ಸತಾಯಿಸುತ್ತಿವೆ ಎಂದು ಫೆಡರೇಷನ್ ಆಫ್ ಕರ್ನಾಟಕ ಛೇಂಬರ‍್ಸ್ ಆಫ್ ಕಾಮರ್ಸ್ ಅಂಡ್ ಇಂಡಿಸ್ಟ್ರೀ ರಾಜ್ಯಾಧ್ಯಕ್ಷ ಕೆ.ರವಿ ತಿಳಿಸಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಹಗರಣವಾದ ನಂತರ ರಾಜ್ಯದ ಬಹುತೇಕ ರಾಷ್ಟ್ರೀಯ ಬ್ಯಾಂಕುಗಳು ಮತ್ತು ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರಿಗೆ ಸಾಲ ಕೊಡುತ್ತಿಲ್ಲ ಎಂದರು.
ಯಾವುದೇ ಕಾರಣಕ್ಕೂ ಈ ರೀತಿ ಬ್ಯಾಂಕುಗಳು ಮಾಡುವುದು ಸರಿಯಲ್ಲ. ಯಾವ ಉದ್ದಿಮೆದಾರರು ಉತ್ತಮ ಗುಣಮಟ್ಟದ ವ್ಯವಹಾರ ಇಟ್ಟುಕೊಂಡಿ ರುತ್ತಾರೋ ಅಂತವರಿಗೆ ಬ್ಯಾಂಕುಗಳು ತಡ ಮಾಡದೇ ಸಾಲ ಸೌಲಭ್ಯವನ್ನು ಒದಗಿಸಿಕೊಡಬೇಕು ಎಂದರು.
ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಮಹಿಳಾ ಉದ್ದಿಮೆಗಳಿಗೆ ೧ ಕೋಟಿ ರೂ. ಸಾಲವನ್ನು ಕೊಡಲು ಭಾರತೀಯ ಸ್ಟೇಟ್ ಬ್ಛ್ಯಾಂಕ್ ಉದ್ದೇಶಿ ಸಿದೆ. ಇನ್ನು ಮಹಿಳಾ ಉದ್ದಿಮೆದಾರರು ಸದುಪಯೋಗಪಡಿಸಿಕೊಳ್ಳಬೇಕೆಂದರು.
ಎಪಿಎಂಸಿಗಳಲ್ಲಿ ಬಾಡಿಗೆ ದರ ಹೆಚ್ಚಳ, ಟ್ರೇಡ್ ಲೈಸೆನ್ಸ್ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ನಮ್ಮ ಸಂಘಟನೆ ಈಗಾಗಲೇ ಸರ್ಕಾರದೊಂದಿಗೆ ಮಾತು ಕತೆ ಆರಂಭಿಸಿದೆ ಎಂದ ಅವರು, ಕನಿಷ್ಠ ವೇತನವನ್ನು ಸಾಮಾನ್ಯ ನೌಕರರಿಗೆ ೧೧ ಸಾವಿರ ಹಾಗೂ ಕೌಶಲ್ಯ ಹೊಂದಿದ ನೌಕರರಿಗೆ ೧೫ ಸಾವಿರ ನಿಗದಿ ಮಾಡಿದೆ. ಇದರಿಂದ ಸಣ್ಣ ಮತ್ತು ಮಧ್ಯಮ ವರ್ಗದ ಉದ್ದಿಮೆದಾರರಿಗೆ ತೀವ್ರ ತೊಂದರೆಯಾಗುತ್ತಿದೆ. ಆದ್ದರಿಂದ ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದರು.
ಜಿಎಸ್‌ಟಿ ವ್ಯವಸ್ಥೆ ಬಗ್ಗೆ ಈಗಾಗಲೇ ಅನೇಕ ಕಾರ್ಯಾಗಾರಗಳನ್ನು ಮಾಡಲಾ ಗಿದೆ. ದೊಡ್ಡ ಮಟ್ಟದ ಕಾರ್ಯಾ ಗಾರವನ್ನು ನಮ್ಮ ಸಂಘಟನೆ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಅಲ್ಲದೆ, ಮ್ಯಾಂಗೋ ಡೆವಲಪ್‌ಮೆಂಟ್ ಬೋರ್ಡ್ ಇದ್ದು, ಇದರ ಮೂಲಕ ಮಾವಿನ ಹಣ್ಣಿನ ಉದ್ಯಮವನ್ನು ಇಸ್ರೇಲ್ ನೆರವಿನೊಂದಿಗೆ ಮತ್ತಷ್ಟು ಅಭಿವೃದ್ಧಿಪಡಿಸಲು ಕೂಡಾ ಯೋಜನೆ ರೂಪಿಸಲಾಗಿದೆ ಎಂದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯಮತ್ತು ಕೈಗಾರಿಕಾ ಸಂಘ ಹಲವಾರು ಕೆಲಸಗಳನ್ನು ಮಾಡುವ ಮೂಲಕ ಕ್ರಿಯಾಶೀಲವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ರಾಜ್ಯದಲ್ಲಿಯೇ ಶಿವಮೊಗ್ಗ ಜಿಲ್ಲೆಯ ಸಂಘ ಅತ್ಯಂತ ಚಟುವಟಿಕೆಯಿಂದಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಶಂಕರಪ್ಪ, ಡಿ.ಎಸ್.ಅರುಣ್, ಪಿ.ರುದ್ರೇಶ್, ಎಫ್‌ಕೆಸಿಸಿಯ ವಾಸುದೇವ್, ಜನಾರ್ದನ್, ಯಶ್ವಂತ್‌ರಾಜ್ ಮೊದಲಾದವರಿದ್ದರು.