ಶಿವಮೊಗ್ಗ: ಶಾಲೆಯ ಮಕ್ಕಳು ರಾಜ್ಯ ಹೆದ್ದಾರಿ ರಸ್ತೆ ದಾಟಲು ಅಪಾಯಕಾರಿಯಾಗಿದ್ದು, ಈ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಶಿಕಾರಿಪುರ ತಾಲೂಕು ಕೇಂದ್ರದಿಂದ 14 ಕಿಲೋಮೀಟರ್ ದೂರದಲ್ಲಿ ಶಿವಮೊಗ್ಗಕ್ಕೆ ಸಾಗುವ ಹಾದಿಯಲ್ಲಿ ಎಂಸಿಆರ್‌ಪಿ ಕಾಲೋನಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ರಸ್ತೆ ಬದಿ ಇದೆ. ಇಲ್ಲಿ ರಾಜ್ಯ ಹೆದ್ದಾರಿ ಹಾದು ಹೋಗಿರುವುದರಿಂದ ರಸ್ತೆ ಇನ್ನೊಂದು ಬದಿಯಲ್ಲಿರುವ ಅಲೆಮಾರಿ ಜನವಸತಿ ಪ್ರದೇಶದ ಮಕ್ಕಳು ರಸ್ತೆ ದಾಟುವುದು ಅಪಾಯಕಾರಿಯಾಗಿದೆ. ಏಕೆಂದರೆ ವಾಹನಗಳ ವೇಗ ಮತ್ತು ದಟ್ಟಣೆ ಹೆಚ್ಚಾಗಿರುತ್ತದೆ.
ಎಂಸಿ ಆರ್ ಪಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ (ಈ ಶಾಲೆಯಲ್ಲಿ 42 ಮಕ್ಕಳಿದ್ದಾರೆ) ಈ ಮಾತೃ ಶಾಲೆ ಅದೀನದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಕ್ಕಿಪಿಕ್ಕಿ ಕ್ಯಾಂಪ್ ಅಲೆಮಾರಿ ಜನವಸತಿ ಪ್ರದೇಶದ ಮಕ್ಕಳಿಗೆ ಮೀಸಲಾಗಿ 2016 ರಿಂದಲೂ ಕರ್ತವ್ಯ ನಿರ್ವಹಿಸುತ್ತಿದೆ. ಈ ಶಾಲೆಯಲ್ಲಿ ಪ್ರಸ್ತುತ 20 ಮಕ್ಕಳಿದ್ದಾರೆ.
ಮಕ್ಕಳು ರಸ್ತೆಯನ್ನು ದಾಟಬೇಕಾಗಿರುವುದರಿಂದ ಅಪಘಾತಗಳು ಆಗುವ ಸಂಭವವಿದೆ. ಆದ್ದರಿಂದ ಈ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಶಾಲೆಯಿರುವಿಕೆಯ ಬಗ್ಗೆ ರಸ್ತೆಯಲ್ಲಿ ಸೂಚನೆಗಳನ್ನು ಅಳವಡಿಸಬೇಕು ಎಂದು ಆಗ್ರಹಿಸಲಾಗಿದೆ.