ಶಿವಮೊಗ್ಗ: ಜಿಲ್ಲೆಯ ಆನಂದಣ್ಣ ಯಂಗ್ ಬ್ರಿಗೇಡ್ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ವತಿಯಿಂದ ಹುಣಸೆ ಕಟ್ಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತವಾಗಿ ಟ್ರ್ಯಾಕ್ ಸೂಟ್ ಸಮವಸ್ತ್ರ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸುಮಾರು 150 ಮಕ್ಕಳಿಗೆ ಶನಿವಾರದಂದು ವಿಶೇಷ ರೀತಿಯಲ್ಲಿ ಸಮವಸ್ತ್ರವನ್ನ ವಿತರಿಸಲಾಯಿತು ಸರ್ಕಾರಿ ಶಾಲೆಯ ಮಕ್ಕಳು ಖಾಸಗಿ ಶಾಲೆಯ ಮಕ್ಕಳಿಗಿಂತ ಕಡಿಮೆ ಏನು ಇಲ್ಲ ಎಂಬ ಭಾವನೆಯನ್ನು ವ್ಯಕ್ತಪಡಿಸುವ ನಿಟ್ಟಿನಲ್ಲಿ ಮಕ್ಕಳ ಸಂತೋಷ ಎದ್ದು ಕಾಣುತ್ತಿತ್ತು. ಸಂತೋಷದಲ್ಲಿ ಭಾಗಿಯಾದ ಶಿಕ್ಷಕ ವೃಂದದ ಮನಃಸ್ಪೂರ್ವಕವಾಗಿ ಕರವೇ ಯುವ ಸೇನೆ ಹಾಗೂ ಆನಂದಣ್ಣ ಯಂಗ್ ಬ್ರಿಗೇಡ್ ಅಧ್ಯಕ್ಷರ ನೇತೃತ್ವದ ತಂಡವನ್ನ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಕರವೇ ಯುವ ಸೇನೆ ಹಾಗೂ ಆನಂದಣ್ಣ ಅಧ್ಯಕ್ಷ ಕಿರಣ್ ಕುಮಾರ್ ಹೆಚ್ಎಸ್ ಮಾತನಾಡಿ ನಾವು ಯಾವಾಗಲೂ ಕನ್ನಡ ಶಾಲೆಗಳ ಪರವಾಗಿದ್ದೇವೆ. ಯಾವಾಗಲೂ ಕನ್ನಡ ಶಾಲೆಗಳ ಉಳಿವಿಗಾಗಿ ಹೋರಾಟ ಮಾಡುವುದಾಗಿ ಸಹ ತಿಳಿಸಿದರು.
ಅತಿ ಹೆಚ್ಚು ಅಂಕ ಪಡೆದ ಹೊಸನಗರ ಅಂಬೇಡ್ಕರ್ ವಸತಿ ಶಾಲೆಯ ವಿದ್ಯಾರ್ಥಿ ಚಿನ್ಮಯ್ ಸಿ ಅವರನ್ನು ಕರವೇ ಯುವ ಸೇನೆಯಿಂದ ಸನ್ಮಾನಿಸಲಾಯಿತು. ಕರವೇ ಯುವಸೇನೆ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ಎಚ್ಎಸ್ ಜಿಲ್ಲಾ ಉಪಾಧ್ಯಕ್ಷ ವಿಜಯಕುಮಾರ್ ಖಜಾಂಚಿ ಗಣೇಶ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿನಯ್ ಕುಮಾರ್ ಜಿಲ್ಲಾ ಕಾರ್ಯದರ್ಶಿ ರಾಮು ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಎನ್. ಮಾಲತೇಶ್ ಕರ್ನಾಟಕ ರಾಜ್ಯ ಪತ್ರಿಕ ವಿತರಕರ ಒಕ್ಕೂಟ ಹಾಗೂ ಸಂಘಟನೆಯ ವಿವಿಧ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು