ಕೃಷಿ ಸಂಶೋಧಕರಿಗೆ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿ ಕರೆ
ಶಿವಮೊಗ್ಗ: ಮಲೆನಾಡಿನ ಕೃಷಿ ಮತ್ತು ತೋಟಗಾರಿಕೆ ಸಮಸ್ಯೆಗಳ ನಿವಾರಣೆ ಕುರಿತು ಹೆಚ್ಚಿನ ಸಂಶೋಧನೆಗಳು ನಡೆಯಬೇಕು ಹಾಗೂ ಕೃಷಿ ಕ್ಷೇತ್ರವನ್ನು ಸದೃಢಗೊಳಿಸಬೇಕಿದೆ ಎಂದು ಆನಂದಪುರ ಮುರುಘಾಮಠದ ಶ್ರೀ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿ ನುಡಿದರು.
ಶುಕ್ರವಾರ ನವುಲೆ ಕೃಷಿ ಕಾಲೇಜು ಆವರಣದಲ್ಲಿ ಪೌಷ್ಟಿಕ ಆಹಾರಕ್ಕಾಗಿ ವಿಕಸಿತ ಕೃಷಿ ಧ್ಯೇಯ ವಾಕ್ಯದೊಂದಿಗೆ ಆಯೋಜಿಸಲಾಗಿದ್ದ ಕೃಷಿ-ತೋಟಗಾರಿಕಡ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಹೆಚ್ಚು ಚರ್ಚೆ ಮತ್ತು ಜಿಜ್ಞಾಸೆಗೆ ಒಳಪಬೇಕಾದದ್ದು ಕೃಷಿ ಕ್ಷೇತ್ರ. ಅನ್ನಮಯ ಶರೀರಕ್ಕೆ ಅನ್ನ ಒದಗಿಸುವವನು ರೈತ. ರೈತ ಮತ್ತು ಕೃಷಿಗೆ ಅವಿನಾಭಾವ ಸಂಬಂಧವಿದೆ. ಎಲ್ಲ ಮಠ ಮಾನ್ಯಗಳು ಕೃಷಿ, ಗೋ ಸಂರಕ್ಷಣೆ, ಅನ್ನ ದಾಸಹೋಹ , ಕೃಷಿ ಕಾಯಕ ಮಾಡುತ್ತಾ ಬಂದಿವೆ. ಕೃಷಿಗೆ ಇಂದು ಹತ್ತು ಹಲವು ಸವಾಲುಗಳು ಎದುರಾಗಿದ್ದು ಸಂಕಷ್ಟಕ್ಕೆ ಕಾರಣ ಹಣದ ಹಪಹಪಿ ಆಗಿದೆ ಎಂದರು.
ಹಗಲಿರುಳು ಇನನ್ನೊಬ್ಬರಿಗಾಗಿ ಶ್ರಮಿಸುವವರಿದ್ದರೆ ಅದು ರೈತ. ಹೊಟ್ಟೆ ತುಂಬ ಅನ್ನ ನೀಡಿ ಸಂತೋಷಿಸÀವವನು ರೈತ. ಅವರಿಗೆ ಎಷ್ಟು ಋಣಿಯಾಗಿದ್ದರೂ ಕಡಿಮೆ. ಮಲೆನಾಡಿನ ಕೃಷಿ ಸಮಸ್ಯೆಗಳ ಕಡೆ ಸರ್ಕಾರ ವಿಶ್ವವಿದ್ಯಾಲಯಗಳು, ವಿಜ್ಞಾನಿಗಳು ಗಮನ ಹರಿಸಬೇಕು ಎಂದರು.
ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಕೃಷಿ ಸಂಶೋಧನೆ ಇನ್ನೂ ಸುಧಾರಣೆ ಆಗಬೇಕು. ವಿಶ್ವವಿದ್ಯಾಲಯದಲ್ಲಿ ಇನ್ನೂ ಕೆಲ ಸೌಲಭ್ಯ ಕೊರತೆ ಇದೆ. ವಿವಿ ಹಣಕಾಸಿನ ಕೊರತೆ ನೀಗಬೇಕು. ತಜ್ಞರ ನೇಮಕ ಆಗಬೇಕು ಎಂದರು.ಕೆ. ಶಿ.ನಾ.ಕೃ.ತೋ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಆರ್.ಸಿ.ಜಗದೀಶ್ ಪ್ರಾಸ್ತಾವಿಕವಾಗಿ ಮಾತನಾಡಿ,ಹೊಸ ಕೋರ್ಸುಗಳನ್ನು ಆರಂಭಿಸಿದ್ದು, ರಾಷ್ಟದಲ್ಲೇ ಮೊದಲ ಬಾರಿಗೆ ಯುವ ರೈತರಿಗೆ ಡ್ರೋನ್ ತರಬೇತಿ ಆರಂಭಿಸಲಾಗಿದೆ ಎಂದರು.
ರೈತ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ ರೈತ ಮಹಿಳೆ ಮತ್ತು ಶ್ರೇಷ್ಠ ರೈತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಹಾಗೂ ವಿವಿಧ ತಾಂತ್ರಿಕ ಕೈಪಿಡಿಗಳನ್ನು ಬಿಡುಗಡೆಗೊಳಿಸಲಾಯಿತು. ರಾಜ್ಯ ಭೋವಿ ನಿಗಮದ ಅಧ್ಯಕ್ಷ ರವಿಕುಮಾರ್‌ಮಾತನಾಡಿದರು. ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶಾರದಾ ಪೂರ್ಯನಾಯ್ಕ ಅಧ್ಯಕ್ಷತೆ ವಹಿಸಿದ್ದರು.
ಆಡಳಿತ ಮಂಡಳಿ ಸದಸ್ಯರಾದ ಬಿ.ಕೆ.ಕುಮಾರಸ್ವಾಮಿ ಕೃಷಿಕ ಸಮಾಜದ ಅಧ್ಯಕ್ಷ ನಾಗರಾಜ್, ಪಶು ಕಾಲೇಜ್ ಡೀನ್, ವೈ.ಹೆಚ್.ನಾಗರಾಜ್, ನಗರದ ಮಹಾದೇವಪ್ಪ ಅಧಿಕಾರಿಗಳು, ವಿವಿ ಆಡಳಿತ ಮಂಡಳಿ ಸದಸ್ಯರು ರೈತರು, ಉದ್ಯಮಿಗಳು, ವ್ಯಾಪಾರಸ್ಥರು ಪಾಲ್ಗೊಂಡಿದ್ದರು.