ಶಿವಮೊಗ್ಗ: ದಕ್ಷ ಹಾಗೂ ಪ್ರಾಮಾ ಣಿಕ ಅಧಿಕಾರಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಬೆಂಗಳೂರು ನಗರಾಭಿವೃದ್ದಿ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ನೀಡ ಬೇಕೆಂದು ಒತ್ತಾಯಿಸಿ ಇಂದು ಬಿಜೆಪಿ ವತಿಯಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯ ಪಾಲರಿಗೆ ಮನವಿ ಸಲ್ಲಸಲಾಯಿತು.
ಈ ಹಿಂದೆ ಗೃಹ ಸಚಿವರಾಗಿದ್ದ ಕೆ.ಜೆ. ಜಾರ್ಜ್ ವಿರುದ್ದ ಗಣಪತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಬಿಜೆಪಿ ಹೋರಾಟವನ್ನು ನಡೆಸಿದ ಪರಿಣಾಮ ಸಚಿವ ಜಾರ್ಜ್ ಅಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ಯನ್ನು ನೀಡಿದ್ದರು. ತದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಪುನಃ ಜಾರ್ಜ್‌ರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿದ್ದು, ಕೂಡಲೇ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಸಿ.ಎಂ.ಸಿದ್ದರಾಮಯ್ಯನವರ ನಡೆಯಿಂದಾಗಿ ರಾಜ್ಯದ ಜನತೆ ಹಾಗೂ ಗಣಪತಿ ಕುಟುಂಬ ವರ್ಗ ದವರಿಗೆ ನ್ಯಾಯ ಸಿಗಲಿಲ್ಲ. ಇದರಿಂದ ಅವರ ಕುಟುಂಬ ವರ್ಗ ಬೇಸರ ಗೊಂಡಿದೆ. ಅಲ್ಲದೇ ನ್ಯಾಯಾಲ ಯದ ಮೊರೆ ಹೋದ ಪರಿಣಾಮ ನ್ಯಾಯಾಲಯ ಇವರ ಮನವಿಯನ್ನು ಪುರಸ್ಕರಿಸಿ ಕೂಲಂಕುಶವಾಗಿ ಪರಿ ಶೀಲಿಸಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಳ ಪಡಿಸಬೇಕೆಂದು ಸುಪ್ರಿಂ ಕೋರ್ಟ್ ಆದೇಶಿಸಿದೆ. ಆದ್ದರಿಂದ ಜಾರ್ಜ್ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದರ ಜೊತೆಗೆ ಮುಖ್ಯ ಮಂತ್ರಿ ಗಳು ಜಾರ್ಜ್‌ರನ್ನು ಸಂಪುಟದಿಂದ ಕೈಬಿಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಆಯನೂರು ಮಂಜುನಾಥ್, ಡಿಎಸ್. ಅರುಣ್,ಚನ್ನಬಸಪ್ಪ, ಮಂಜುಳ, ಇನ್ನೂ ಮುಂತಾದವರು ಉಪಸ್ಥಿತ ರಿದ್ದರು.