ಶಿವಮೊಗ್ಗ : ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮೇ. ೨೧ರ ಸೋಮವಾರ ಬೆಳಿಗ್ಗೆ ಮೈಸೂರಿನ ಪ್ರಾದೇಶಿಕ ಕಛೇರಿಯಲ್ಲಿ ನಾನು ಮತ್ತು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಕ್ಯಾ|| ಗಣೇಶ್ ಕಾರ್ಣಿಕ್ ನಾಮಪತ್ರ ಸಲ್ಲಿಸಲಿದ್ದೇವೆ ಎಂದು ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯನೂರು ಮಂಜುನಾಥ್ ತಿಳಿಸಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಅಂದು ಅಪಾರ ಸಂಖ್ಯೆಯ ಬೆಂಬಲಿಗರು ಮತ್ತು ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಜನಪ್ರತಿನಿಧಿಗಳ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಇದೀಗ ತಾನೆ ವಿಧಾನಸಭಾ ಚುನಾ ವಣೆಯನ್ನು ಯಶಸ್ವಿಯಾಗಿ ನಮ್ಮ ಪಕ್ಷ ಮುಗಿಸಿದ್ದು, ಇದರ ಆಧಾರದ ಮೇಲೆ ವಿಧಾನಪರಿಷತ್‌ನ ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯನ್ನೂ ಕೂಡಾ ಅಚ್ಚು ಕಟ್ಟಾಗಿ ಎದುರಿಸುತ್ತಿದ್ದೇವೆ. ಈಗಾ ಗಲೇ ಕೆಳಹಂತದಿಂದ ಮತದಾರರನ್ನು ರಾಜಕೀಯವಾಗಿ ಸ್ಪರ್ಶಿಸಿ ಮತದಾನ ಕೇಂದ್ರಕ್ಕೆ ಮತ ಹಾಕಲು ಕರೆತರುವಂತಹ ಸಂಪರ್ಕವನ್ನು ನಮ್ಮ ಪಕ್ಷದ ಕಾರ್ಯಕರ್ತರು ಹೊಂದಿದ್ದಾರೆ ಎಂದರು.
ನೈರುತ್ಯ ಪದವೀಧರ ಕ್ಷೇತ್ರ ವ್ಯಾಪ್ತಿಯಲ್ಲಿ ೨೭ ಶಾಸಕರು ಬರುತ್ತಿದ್ದು, ಇದರಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಕೇವಲ ೩ ಕ್ಷೇತ್ರಗಳಲ್ಲಿ ಮಾತ್ರ ಸೋತಿದ್ದಾರೆ. ಉಳಿದ ೨೪ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗಳೇ ಜಯಭೇರಿ ಬಾರಿಸಿದ್ದಾರೆ. ಸೋತಿರುವಂತಹ ಮಂಗಳೂರು, ಶೃಂಗೇರಿ, ಉಳ್ಳಾಲದಂತಹ ಕ್ಷೇತ್ರ ಗಳಲ್ಲೂ ಸಹ ನಮ್ಮ ಕಾರ್ಯಕರ್ತರು ಮತದಾರರ ಸಂಪರ್ಕ ಉತ್ತಮ ವಾಗಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಈ ಬಾರಿಯೂ ಸಹ ನಮ್ಮ ಗೆಲುವು ಸುಲಭವಾಗಲಿದೆ ಎಂದರು.
ಕಳೆದ ಬಾರಿ ನಮ್ಮ ಪಕ್ಷದ ಅಭ್ಯರ್ಥಿ ಪರಿಷತ್ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಅವರು ಅತೀ ಹೆಚ್ಚು ಮತಗಳ ಅಂತರದಿಂದ ಜಯಶಾಲಿ ಯಾಗಿದ್ದಾರೆ. ಆದರೆ ಪ್ರತಿಸ್ಪರ್ಧಿ ಅಭ್ಯರ್ಥಿ ಎಸ್.ಪಿ.ದಿನೇಶ್ ಕೇವಲ ೪೦೦೦ ಮತಗಳ ಅಂತರದಿಂದ ಸೋತಿದ್ದೇನೆ ಎಂದು ಹೇಳುತ್ತಿದ್ದಾರೆ. ಈ ಕ್ಷೇತ್ರದಲ್ಲಿ ೪೦೦೦ ಮತಗಳ ಅಂತರ ಎಂದರೆ ಸಾಮಾನ್ಯ ಚುನಾ ವಣೆಯಲ್ಲಿ ೪೦,೦೦೦ ಮತಗಳ ಅಂತ ರವಾಗುತ್ತದೆ. ಆದರೂ ಸಹ ಪ್ರತಿಸ್ಪರ್ಧಿ ಈ ರೀತಿಯ ಹಸಿ ಸುಳ್ಳು ಹೇಳುವ ಮೂಲಕ ಚುನಾವಣೆ ಯನ್ನು ಎದುರಿ ಸುತ್ತಿದ್ದಾರೆ ಎಂದು ಆರೋಪಿಸಿದರು.
ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಕ್ಯಾ|| ಗಣೇಶ್ ಕಾರ್ಣಿಕ್ ಮತ್ತು ಪದವೀ ಧರ ಕ್ಷೇತ್ರದ ಅಭ್ಯರ್ಥಿಯಾದ ನಾನು, ಜೂ. ೮ರಂದು ನಡೆಯುವ ಚುನಾವಣೆಯಲ್ಲಿ ಜಯಭೇರಿ ಬಾರಿಸುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್. ದತ್ತಾತ್ರಿ, ಮಧುಸೂದನ್, ಹೆಚ್.ಸಿ. ಬಸವರಾಜಪ್ಪ, ಮಹೇಂದ್ರನಾಥ್, ಅನಿತಾ ರವಿಶಂಕರ್, ರತ್ನಾಕರ್ ಶೆಣೈ, ಅಣ್ಣಪ್ಪ ಮೊದಲಾ ದವರಿದ್ದರು.