ಬೆಂಗಳೂರು: ಈಗಾಗಲೇ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ಅತ್ಯಾಚಾರದ ಪ್ರಕರಣ ದಾಖಲಾಗಿದೆ.
ಸಿಐಡಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಈ ನಡುವೆ ಮಾಜಿ ಶಾಸಕ ಪ್ರೀತಂಗೌಡ ವಿರುದ್ದ ಪ್ರಕರಣವೊಂದು ದಾಖಲಾಗಿದ್ದು, ಪ್ರಜ್ವಲ್ ಗೆ ಸಂಬಂಧಿಸಿದ ಕಾಮಕೇಳಿಯ ವಿಡಿಯೋಗಳನ್ನು ಹಂಚಿದ ಆರೋಪ ಅವರ ಮೇಲಿದೆ.
ಐಪಿಸಿ ಸೆಕ್ಷನ್ 354, ಐಟಿ ಕಾಯ್ದೆ 66E ಅಡಿ ಕೇಸ್. ಪ್ರೀತಂಗೌಡ ಸೇರಿದಂತೆ ಇತರ ಇಬ್ಬರ ವಿರುದ್ದ FIR ದಾಖಲಿಸಲಾಗಿದೆ.