Friday, April 18, 2025
Google search engine
Homeಇ-ಪತ್ರಿಕೆವೀರಶೈವ -ಲಿಂಗಾಯಿತ ಮಹಾಸಭಾ ಚುನಾವಣೆ: ಆಯ್ಕೆ ಮಾಡಿದ ಮತದಾರರಿಗೆ ಅಭಿನಂದನೆ: ರುದ್ರಮುನಿ ಸಜ್ಜನ್

ವೀರಶೈವ -ಲಿಂಗಾಯಿತ ಮಹಾಸಭಾ ಚುನಾವಣೆ: ಆಯ್ಕೆ ಮಾಡಿದ ಮತದಾರರಿಗೆ ಅಭಿನಂದನೆ: ರುದ್ರಮುನಿ ಸಜ್ಜನ್

ಅಖಿಲ ಭಾರತ ವೀರಶೈವ -ಲಿಂಗಾಯಿತ ಮಹಾಸಭಾ

ಶಿವಮೊಗ್ಗ: ನೆನ್ನೆ ನಡೆದ ಅಖಿಲ ಭಾರತ ವೀರಶೈವ -ಲಿಂಗಾಯಿತ ಮಹಾಸಭಾದ ಚುನಾವಣೆಯಲ್ಲಿ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಮತದಾರರಿಗೆ ಅಭಿನಂದನೆಗಳು ಎಂದು ಮಹಾಸಭಾದ ನೂತನ ಜಿಲ್ಲಾಧ್ಯಕ್ಷ ರುದ್ರಮುನಿ ಸಜ್ಜನ್ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವೀರಶೈವ ಲಿಂಗಾಯಿತ ಮಹಾಸಭಾದ ಚುನಾವಣೆ ಯಶಸ್ವಿಯಾಗಿ ನಡೆದಿದೆ. ಇಲ್ಲಿ 3199 ಮತಗಳಿದ್ದವು. ಅದರಲ್ಲಿ 2247 ಮತಗಳು ಚಲಾವಣೆಯಾಗಿತ್ತು. ಅದರಲ್ಲೆ ನನಗೆ 1274 ಮತಗಳು ಬಂದಿದ್ದು, 327 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದೇನೆ. ಈ ಗೆಲುವಿಗೆ ಸಹಕಾರಿಯಾದ ಸಮಾಜದ ಬಾಂಧವರಿಗೆ, ಗಣ್ಯರಿಗೆ, ಮತದಾರರಿಗೆ ಅಭಿನಂದನೆಗಳು ಎಂದರು.

ಅದರಂತೆ ಸುಮಾರು  419ಮತಗಳ ಅಂತರದಿಂದ ತಾಲ್ಲೂಕು ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಸ್ವಾಮಿಯವರು ಗೆದ್ದಿದ್ದಾರೆ. ಜಿಲ್ಲಾಧ್ಯಕ್ಷ ಮತ್ತು ತಾಲ್ಲೂಕು ಅಧ್ಯಕ್ಷರುಗಳನ್ನು ಮತದಾರರೇ ನೇರವಾಗಿ ಆಯ್ಕೆ ಮಾಡುತ್ತಾರೆ. ಇತರ ಸಂಘ ಸಂಸ್ಥೆಗಳಂತೆ ನಿರ್ದೇಶಕರುಗಳು ಅಧ್ಯಕ್ಷರನ್ನು ಆಯ್ಕೆ ಮಾಡುವುದಿಲ್ಲ. ಇಲ್ಲಿ ಅಧ್ಯಕ್ಷರನ್ನೇ ಮತದಾರರ ಆಯ್ಕೆ ಮಾಡುತ್ತಾರೆ. 10 ಮಹಿಳೆಯರು ಹಾಗೂ 20 ಪುರುಷರು ಸೇರಿದಂತೆ 30 ಸದಸ್ಯರು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶೀಘ್ರದಲ್ಲಿಯೇ ಅತ್ಯುತ್ತಮ ಮತ್ತು ಹೊಸ ರೀತಿಯಲ್ಲಿ ಪದಗ್ರಹಣ ಸಮಾರಂಭ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಪ್ರಮುಖರಾದ ಆನಂದ ಮೂರ್ತಿ, ಕೆ.ಆರ್.ಸೋಮನಾಥ್, ರೇಣುಕಾರಾಧ್ಯ, ಅನಿತಾ ರವಿಶಂಕರ್, ಗೀತಾ ರವೀಂದ್ರ, ಆರ್.ಎಸ್. ಸ್ವಾಮಿ, ಜಯಶಂಕರ್ ಮುಂತಾದವರು ಇದ್ದರು.

RELATED ARTICLES
- Advertisment -
Google search engine

Most Popular

Recent Comments