ಹುಬ್ಬಳ್ಳಿ: ಇಲ್ಲಿ ಹಲವರು ದರೋಡೆ, ಕೊಲೆಯತ್ನ ಇತ್ಯಾದಿ ಪ್ರಕರಣಗಳ ಅಂತರ್ ರಾಜ್ಯ ಕಳ್ಳನನ್ನು ಬಂಧಿಸಲಾಗಿದೆ.
ಮುಂಬೈ ಮೂಲದ ಫರ್ಹಾನ್ ಶೇಖ್ ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ. ಈತನ ಮೇಲೆ ದೇಶದ ವಿವಿಧೆಡೆ ದರೋಡೆ ಹಾಗೂ ಕೊಲೆ ಯತ್ನದ ಪ್ರಕರಣಗಳ ದೂರು ದಾಖಲಾಗಿವೆ.
ನಿನ್ನೆ ರಾತ್ರಿ ಈತನನ್ನು ನಗರದ ಹೊರವಲಯದ ಗಾಮನಗಟ್ಟಿ ರಸ್ತೆಬಳಿಯ ತಾರಿಹಾಳ ಕ್ರಾಸ್ ಬಳಿ ಬಂಧಿಸಲು ಪೊಲೀಸರ ತೆರಳಿದಾಗ ಅವರ ಮೇಲೆ ಹಲ್ಲೆ ನಡೆಸಲು ಯತ್ನಿಸಿದನು. ಈ ಸಂದರ್ಭದಲ್ಲಿ ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆಂದು ಹೇಳಲಾಗಿದೆ.
ಗಾಯಾಳು ಆರೋಪಿಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.