Monday, January 13, 2025
Google search engine
Homeಇ-ಪತ್ರಿಕೆನಗರದಲ್ಲಿ ತುಕ್ಕು ಹಿಡಿಯುತ್ತಿರುವ ಯುದ್ಧ ಟ್ಯಾಂಕರ್‌: ಮಾಜಿ ಸೈನಿಕರ ಆಕ್ರೋಶ

ನಗರದಲ್ಲಿ ತುಕ್ಕು ಹಿಡಿಯುತ್ತಿರುವ ಯುದ್ಧ ಟ್ಯಾಂಕರ್‌: ಮಾಜಿ ಸೈನಿಕರ ಆಕ್ರೋಶ

ಶಿವಮೊಗ್ಗ: ಭಾರತೀಯ ಸೇನೆಯ ಪ್ರತಿಷ್ಠೆಯಾದ ಯುದ್ದವನ್ನು ಗೆದ್ದ ಯುದ್ಧ ಟ್ಯಾಂಕರ್‌ನ್ನು ಮಹಾನಗರ ಪಾಲಿಕೆ ವೈಭವದಿಂದ ವರ್ಷಗಳ ಹಿಂದೆ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಮೆರವಣಿಗೆಯಲ್ಲಿ ಬರಮಾಡಿಕೊಂಡಿತ್ತು.

ಆದರೆ ಅಂದು ಮೆರವಣಿಗೆಯಲ್ಲಿ ತಂದ ಟ್ಯಾಂಕರ್‌ನ್ನು ಎಂಆರ್‌ಎಸ್ ವೃತ್ತದ ಬಳಿ ಶೆಡ್ ನಿರ್ಮಿಸಿ ತಾತ್ಕಾಲಿಕವಾಗಿ ಇಟ್ಟಿದ್ದು, ಅದು ತನ್ನ ವೈಭವವನ್ನು ಕಳೆದುಕೊಂಡು ತುಕ್ಕು ಹಿಡಿಯುತ್ತಿದೆ. ಕುಡುಕರ ತಾಣವಾಗಿದೆ. ಸುತ್ತಲು ಕೆಸರಿನಿಂದ ಕೂಡಿದ ರಸ್ತೆಯಿದ್ದು, ಟ್ಯಾಂಕ್ ಮೇಲೆ ಕೆಸರು ಸಿಡಿಯುತ್ತಿದೆ.

ಇನ್ನೊಂದೆಡೆ ಸ್ಥಳೀಯ ಪರಿಸರವೆಲ್ಲ ಕಬ್ಬುನಾಥ ಬೀರುತ್ತಿದ್ದು, ಗೌರವದಿಂದ ತಂದ ಯುದ್ಧ ಟ್ಯಾಂಕ್‌ಗೆ ಈಗ ಅಗೌರವ ತೋರಿಸಲಾಗುತ್ತಿದೆ. ಕೂಡಲೇ ಮಹಾನಗರ ಪಾಲಿಕೆ ಸೂಕ್ತ ಜಾಗದಲ್ಲಿ ಯುದ್ಧ ಟ್ಯಾಂಕ್‌ನ್ನು ಸ್ಥಾಪಿಸಬೇಕು ಎಂದು ಮಾಜಿ ಸೈನಿಕರು ಹಾಗೂ ದೇಶಭಕ್ತ ನಾಗರಿಕರು ಆಗ್ರಹಿಸಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments