Thursday, January 16, 2025
Google search engine
Homeಇ-ಪತ್ರಿಕೆಯುವಜನಸ್ನೇಹಿ, ಮಧ್ಯಮ ವರ್ಗದ ಪರವಾದ ಕೇಂದ್ರ ಬಜೆಟ್:‌ ಶಾಸಕ ಎಸ್.‌ ಎನ್.‌ ಚನ್ನಬಸಪ್ಪ ಬಣ್ಣನೆ

ಯುವಜನಸ್ನೇಹಿ, ಮಧ್ಯಮ ವರ್ಗದ ಪರವಾದ ಕೇಂದ್ರ ಬಜೆಟ್:‌ ಶಾಸಕ ಎಸ್.‌ ಎನ್.‌ ಚನ್ನಬಸಪ್ಪ ಬಣ್ಣನೆ

ಶಿವಮೊಗ್ಗ: ಸತತ 3ನೆ ಬಾರಿಗೆ ಜನಾದೇಶ ಪಡೆದ  ನರೇಂದ್ರಮೋದಿ ಯವರ 3.0 ಸರ್ಕಾರದ  ಪೂರ್ಣ ಪ್ರಮಾಣದ ಪ್ರಥಮ ಬಜೆಟ್ ನಲ್ಲಿ ಕೇಂದ್ರ ಸರ್ಕಾರವು ಮಹಿಳಾ ಸಬಲೀಕರಣ, ಯುವಜನಸ್ನೇಹಿ, ನಾವೀನ್ಯತೆ ಪೂರಕವಾದ ಮತ್ತು ಮಧ್ಯಮ ವರ್ಗದ ಜನರ ಅನೂಕೂಲಕರವಾದ ಬಜೆಟ್ ಘೋಷಿಸಿದೆ ಎಂದು ಶಾಸಕ ಎಸ್.‌ ಎನ್.‌ ಚನ್ನಬಸಪ್ಪ ಬಣ್ಣಿಸಿದ್ದಾರೆ.

ಹೊಸ ತೆರಿಗೆ ಪದ್ಧತಿಯ ಪ್ರಕಾರ ತೆರಿಗೆ ವಿನಾಯಿತಿ, ಕುಟುಂಬ ಪಿಂಚಣಿ ಮೇಲಿನ ಮಿತಿ ಸರಳೀಕರಣ, ಸ್ಟಾರ್ಟ್ ಆಪ್ ಗಳಿಗೆ ಉತ್ತೇಜಿಸುವ ಸಲುವಾಗಿ ಏಂಜಲ್ ತೆರಿಗೆ ರದ್ದುಗೊಳಿಸುವ ನಿರ್ಧಾರ, ಕಂಪನಿ ತೆರಿಗೆಯನ್ನು ಕಡಿಮೆಗೊಳಿಸಿದ ನಿರ್ಧಾರ, ಪ್ರವಾಸೋದ್ಯಮ ಉತ್ತೇಜಿಸಲು ಕೈಗೊಂಡಿರುವ ವಿಷ್ಣುಪಾದ ಕಾರಿಡಾರ್ ಯೋಜನೆ ಅತ್ಯುತ್ತಮ ನಿರ್ಧಾರವಾಗಿದೆ ಎಂದಿದ್ದಾರೆ.

 ಇನ್ನು ರೈತರಿಗೆ ಹಾಗೂ ಕೃಷಿಗೆ ಉತ್ತೇಜನ ನೀಡುವ ಸಲುವಾಗಿ ಕೃಷಿ ಆಧಾರಿತ ಹೊಸ ಹೊಸ ಸಂಶೋಧನೆಗೆ ಉತ್ತೇಜಿಸಿರುವುದು ಸ್ವಾಗತಾರ್ಹ ಎಂದು ಶ್ಲಾಘಿಸಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments