Monday, January 13, 2025
Google search engine
Homeಇ-ಪತ್ರಿಕೆತೀರ್ಥಹಳ್ಳಿ: ಅಪ್ರಾಪ್ತ ಬಾಲಕನಿಂದ ದ್ವಿಚಕ್ರ ವಾಹನ ಚಾಲನೆ: ತಂದೆಗೆ 25 ಸಾವಿರ ರೂ. ದಂಡ

ತೀರ್ಥಹಳ್ಳಿ: ಅಪ್ರಾಪ್ತ ಬಾಲಕನಿಂದ ದ್ವಿಚಕ್ರ ವಾಹನ ಚಾಲನೆ: ತಂದೆಗೆ 25 ಸಾವಿರ ರೂ. ದಂಡ

ತೀರ್ಥಹಳ್ಳಿ: ಬಾಲಕನೊಬ್ಬನಿಗೆ ದ್ವಿ ಚಕ್ರ ವಾಹನ ಮಾಡುವಾಗ  ಪೊಲೀಸರಿಗೆ ಸಿಕ್ಕಿ ಬಿದ್ದು ಬಾಲಕನ ತಂದೆಯ ಮೇಲೆ ದೂರು ದಾಖಲು ಮಾಡಲಾಗಿದೆ.

 ಬುಧವಾರದಂದು  ತೀರ್ಥಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ  ಶಿವನಗೌಡ  ತೀರ್ಥಹಳ್ಳಿ ಟೌನ್ ದೊಡ್ಮನೆ ಕೇರಿಯ ಹತ್ತಿರ ವಾಹನ ತಪಾಸಣೆ ಮಾಡುವಾಗ ಬಾಲಕನೊಬ್ಬ ವಾಹನ ಚಾಲನಾ ಪರವಾನಿಗೆ ಇಲ್ಲದೆ ದ್ವಿ ಚಕ್ರ ವಾಹನವನ್ನು ಚಾಲನೆ ಮಾಡುವಾಗ ತಡೆಹಿಡಿದು ವಿಚಾರಣೆ ನಡೆಸುವಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

 ಬಾಲಕನ ಕುರಿತು ಸಂಪೂರ್ಣ ವಿಚಾರಿಸಲಾಗಿ ಆತ 17 ವರ್ಷದ ಅಪ್ರಾಪ್ತ ಎಂದು ತಿಳಿದು ಬಂದಿದೆ.  ಬಾಲಕನಿಗೆ ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡಿ  ವಾಹನವನ್ನು ಚಾಲನೆ ಮಾಡಲು ಅವಕಾಶ ನೀಡಿದ ವಾಹನದ ಮಾಲೀಕ ಮತ್ತು ಬಾಲಕನ ತಂದೆಯಾದ ತೀರ್ಥಹಳ್ಳಿ ಟೌನ್ ದೊಡ್ಮನೆಕೇರಿಯ  ಮೊಹಮ್ಮದ್ ಹಯಾನ್ (42) ಅವರ  ವಿರುದ್ಧ ತೀರ್ಥಹಳ್ಳಿ  ಪೊಲೀಸ್ ಠಾಣೆಯಲ್ಲಿ ಲಘು ಪ್ರಕರಣವನ್ನು ದಾಖಲಿಸಿದ್ದಾರೆ.

ಪ್ರಕರಣದ ಕುರಿತು ನ್ಯಾಯಾಲಯಕ್ಕೆ ದೋಷಾರೋಪಣಾ ವರದಿಯನ್ನು ಸಲ್ಲಿಸಿದ್ದು, ಶನಿವಾರದಂದು   ಪಿಸಿಜೆ ಮತ್ತು  ಜೆ.ಎಂ.ಎಫ್.ಸಿ ನ್ಯಾಯಾಲಯ ತೀರ್ಥಹಳ್ಳಿಯ ಮಾನ್ಯ ನ್ಯಾಯಾಧೀಶರು ದ್ವಿಚಕ್ರ  ವಾಹನದ ಮಾಲೀಕ ಬಾಲಕನ ತಂದೆ ಮೊಹಮ್ಮದ್ ಹಯಾನ್ ಗೆ ರೂ 25,000 ದಂಡ ವಿಧಿಸಿರುತ್ತಾರೆ.

RELATED ARTICLES
- Advertisment -
Google search engine

Most Popular

Recent Comments