ಶಿವಮೊಗ್ಗ: ಜಿಲ್ಲೆಯ ಗಡಿಭಾಗದಲ್ಲಿರುವ ಮಾರಿದ್ದಬ್ಬದಲ್ಲಿ ಭದ್ರಾ ಹಿನ್ನಿರಿನಲ್ಲಿ ತೆಪ್ಪ ಮುಳುಗಿ ಮೂವರು ಯುವಕರು ಶವವಾಗಿ ಪತ್ತೆಯಾಗಿದ್ದಾರೆ.
ಮೃತದೇಹಗಳನ್ನು ಮುಳುಗು ತಜ್ಞರಿಂದ ನೀರಿನಿಂದ ಹೊರತೆಗೆಯಲಾಗಿದೆ. ಮೃತದೇಹಗಳನ್ನು ಎನ್.ಆರ್.ಪುರ ತಾಲೂಕಿನ ಮುತ್ತಿನಕೊಪ್ಪ ಶವಗಾರಕ್ಕೆ ರವಾನಿಸಲಾಗಿದೆ.
ನಿನ್ನೆ ಸಂಜೆಯವರೆಗೂ ಇವರಿಗಾಗಿ ಶೋಧ ಕಾರ್ಯ ನಡೆಸಲಾಗಿತ್ತು. ಕತ್ತಲಾದ ನಂತರ ಶೋಧ ಕಾರ್ಯವನ್ನು ಮೊಟಕುಗೊಳಿಸಲಾಗಿತ್ತು. ಇಂದು ಶೋಧ ಕಾರ್ಯಾಚರಣೆಯನ್ನು ಮುಂದುವರೆಸಿ, ಅವರ ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ತೆಪ್ಪದಲ್ಲಿ ತೆರಳುವಾಗ ತೆಪ್ಪ ಮಗುಚಿ ಮೂವರು ನೀರು ಪಾಲಾಗಿದ್ದರು.
ಸಂತ್ರಸ್ತರನ್ನು ಆದೀಲ್, ಸಾಜೀದ್, ಅಫ್ಧಾಖಾನ್ ಎಂದು ಗುರುತಿಸಲಾಗಿದೆ . ಈ ಮೂವರು ಮೃತರು ಶಿವಮೊಗ್ಗದ ವಿದ್ಯಾನಗರದ ನಿವಾಸಿಗಳಾಗಿದ್ದಾರೆ.
ಈ ಕುರಿತು ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.