Saturday, January 18, 2025
Google search engine
Homeಇ-ಪತ್ರಿಕೆನಟ ದರ್ಶನ್‌ ಮೇಲೆ ಕಠಿಣ ಕ್ರಮ ಜರುಗಿಸಿ:  ಜಿಲ್ಲಾ ಜಂಗಮ ಸಮಾಜ ಆಗ್ರಹ

ನಟ ದರ್ಶನ್‌ ಮೇಲೆ ಕಠಿಣ ಕ್ರಮ ಜರುಗಿಸಿ:  ಜಿಲ್ಲಾ ಜಂಗಮ ಸಮಾಜ ಆಗ್ರಹ

ಶಿವಮೊಗ್ಗ : ಜಂಗಮ ಸಮಾಜದ ವೇದಮೂರ್ತಿ ರೇಣುಕಸ್ವಾಮಿ ಅವರ ಕೊಲೆಗೆ ಸಂಬಂಧಿಸಿದಂತೆ ನಟ  ದರ್ಶನ್ ಅವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶಿವಮೊಗ್ಗ ಜಿಲ್ಲಾ ಜಂಗಮ ಸಮಾಜ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

ರೇಣುಕಾಸ್ವಾಮಿಯವರು ದರ್ಶನ್ ಅಭಿಮಾನಿ ಬಳಗದ ಸದಸ್ಯರು ಆಗಿದ್ದರು. ರೇಣುಕಾ ಸ್ವಾಮಿಯವರನ್ನು ದರ್ಶನ್ ತನ್ನ ಅಭಿಮಾನಿಗಳ ಮುಖಾಂತರ ಬೆಂಗಳೂರಿಗೆ ಕರೆಸಿ ಚಿತ್ರಹಿಂಸೆ ನೀಡಿ ನರಳಿ ನರಳಿ ಸಾಯುವಂತೆ ಹಿಂಸೆ ನೀಡಿ ಅನೇಕ ಆಯುಧಗಳಿಂದ ಅವರ ದೇಹದ ಅಂಗಗಳು ಊನ ಆಗುವಂತೆ ಹೊಡೆದು ಸಾಯಿಸಿರುವುದು ರಾಕ್ಷಸ ಪ್ರವೃತ್ತಿಯಾಗಿದೆ. ಸಮಾಜಕ್ಕೆ ಚಲನಚಿತ್ರದ ಮೂಲಕ ನೀತಿಪಾತ್ರಗಳನ್ನು ನಿರ್ವಹಿಸಿ ಸಮಾಜಕ್ಕೆ ಮಾರ್ಗದರ್ಶನ ನೀಡುವ ಇಂತಹ ಗೋಮುಖ ವ್ಯಾಘ್ರತನದ ನಟರು ಮಾಡಿರುವ ಕೃತ್ಯಕ್ಕೆ ಕರ್ನಾಟಕದ ಎಲ್ಲಾ ಬೇಡ ಜಂಗಮ ಬಂಧುಗಳು ಖಂಡಿಸುತ್ತಾರೆ ಹಾಗೂ ಚಿತ್ರಹಿಂಸೆ ನೀಡಿರುವ ಇವರಿಗೆ ಮರಣದಂಡನೆ ನೀಡಬೇಕೆಂದು ಸಮಾಜ ಒತ್ತಾಯಿಸುತ್ತದೆ. ಅವರೊಡನೆ ಚಿತ್ರಹಿಂಸೆ ನೀಡಿ ಕೊಲೆಗೆ ಸಹಕರಿಸಿದ ಎಲ್ಲರಿಗೂ ಘೋರಶಿಕ್ಷೆ ವಿಧಿಸುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತಾ ಅವರ ಕೃತ್ಯವನ್ನು ಖಂಡಿಸುತ್ತೇವೆ. ಸರ್ಕಾರ ತಕ್ಷಣ ಕಠಿಣ ಕ್ರಮಗಳನ್ನು ಕೈಗೂಳ್ಳದಿದ್ದರೆ ಬೀದಿಗಿಳಿದು ಉಘ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಸೋಮನಾಥ ಕೆ.ಆರ್., ಉಪಾಧ್ಯಕ್ಷ ಟಿ.ಬಿ. ಸೋಮಶೇಖರಯ್ಯ, ಸುಜಯ ಪ್ರಸಾದ್, ಖಜಾಂಚಿ ಉಮೇಶ್ ಹಿರೇಮಠ, ಪರಮೇಶ್ವರಯ್ಯ ಟಿ.ಬಿ.ಮಲ್ಲಿಕಾರ್ಜುನಯ್ಯ, ವಿರಸಂಗಯ್ಯ, ತಾಲ್ಲೂಕು ಅಧ್ಯಕ್ಷ ಲೋಕೇಶ್ ದೂಡ್ಡಮಠ, ಕಾರ್ಯದರ್ಶಿ ಜಗದೀಶ್ವರಯ್ಯ ಮುದವಾಲ, ಖಜಾಂಚಿ ಬಸಯ್ಯ, ಮಹೆಶ್, ಆನಂದಯ್ಯ, ಮಹಿಳಾ ಘಟಕ ದ ಸಂಘಟನಾ ಕಾರ್ಯದರ್ಶಿ ರಶ್ಮಿ, ಆರತಿ, ಉಮಾ ದೇವಿ, ತೇಜಸ್ವಿನಿ, ಗಿರಿಜಮ್ಮ, ಗೀತಾ ಮತ್ತೂಡು, ವಿಜಯಾಂಬಿಕ, ಅನ್ನಪೂರ್ಣಮ್ಮ ಸೇರಿದಂತೆ ಎಲ್ಲಾ ಶಿವಮೊಗ್ಗ ಜಿಲ್ಲಾ ಬೇಡ ಜಂಗಮ ಸಮಾಜ, ತಾಲ್ಲೂಕು ಹಾಗೂ ಮಹಿಳಾ ಘಟಕ ಸದಸ್ಯರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments