ಶಿವಮೊಗ್ಗ : ಭಾರತೀಯ ಇತಿಹಾಸದಲ್ಲಿ ಯೋಗಕ್ಕೆ ಆರು ಸಾವಿರ ವರ್ಷಗಳ ಇತಿಹಾಸ ಇದೆ. ಹಿಂದೆ ಋಷಿ ಮುನಿಗಳು ಹಾಗೂ ತಪಸ್ವಿಗಳು ಯಾವುದೇ ಕಾಯಿಲೆ ಇಲ್ಲದೇ ಯೋಗದ ಮುಖಾಂತರ ಮಾತ್ರ ಗುಣಮಾಡಿಕೊಂಡು ನೂರಾರು ವರ್ಷಗಳ ಕಾಲ ಬದುಕುತ್ತಿದ್ದರು ಎಂದು ಖ್ಯಾತ ಮಕ್ಕಳ ತಜ್ನರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ ಸರ್ಜಿ ಹೇಳಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿವಮೊಗ್ಗ ಜಿಲ್ಲಾ ಸಂಸ್ಥೆ ಹಾಗೂ ಜಿಲ್ಲಾ ಆಯುμï ಇಲಾಖೆ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಸ್ಕೌಟ್ ಭವನದಲ್ಲಿ ಶನಿವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪೂರ್ವಭಾವಿ ಯೋಗೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಹೂಕುಂಡಕ್ಕೆ ನೀರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯೋಗಾಸನ ಬುದ್ದಿ, ಮನಸ್ಸು ಹಾಗೂ ಶರೀರವನ್ನು ಸಮತೋಲನದಲ್ಲಿ ಇಡಲು ಒಂದು ದಿವ್ಯ ಶಕ್ತಿಯನ್ನು ಹೊಂದಿದೆ, ಔಷಧಿಗಳು ಕೇವಲ ಶೇ.20 ರಷ್ಟು ದೇಹದಲ್ಲಿ ಕೆಲಸ ಮಾಡಿದರೆ ಯೋಗವು ಶೇ.100 ರಷ್ಟು ಕಾಯಿಲೆಯನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ, ಅಲ್ಲದೆ ಯೋಗದಿಂದ ಸುಪ್ತ ಮನಸ್ಸು ಮತ್ತು ಜಾಗೃತ ಮನಸ್ಸು ಹೆಚ್ಚು ಕ್ರಿಯಾಶೀಲವಾಗುತ್ತದೆ ಎಂದು ತಿಳಿಸಿದರು.
ಇದೇ ವೇಳೆ ಡಾ.ಧನಂಜಯ ಸರ್ಜಿ ಅವರನ್ನು ಗೌರವಿಸಲಾಯಿತು. ಸಭಾ ಕಾರ್ಯಕ್ರಮವನ್ನು ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಭಾರತಿ ಡಾಯಸ ನಿರ್ವಹಿಸಿದರು. ಜಿಲ್ಲಾ ಖಜಾಂಚಿ ಚೂಡಾಮಣಿ ಪವಾರ, ಜಂಟಿ ಕಾರ್ಯದರ್ಶಿ ವೈ.ಆರ್.ವಿರೇಶಪ್ಪ, ಡಾ. ಸುರೇಂದ್ರ, ಆಯುμï ಇಲಾಖೆಯ ಸಿಬ್ಬಂದಿ ವರ್ಗದವರು, ವಿಜಯಕುಮಾರ, ಹೆಚ್.ಶಿವಶಂಕರ, ಗೀತಾ ಚಿಕ್ಕಮಠ, ರಾಜೇಶ ಅವಲಕ್ಕಿ, ಕೃಷ್ಣಸ್ವಾಮಿ, ಮಲ್ಲಿಕಾರ್ಜುನ ಮತ್ತಿತರ ಹಿರಿಯರು ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜಿಲ್ಲಾ ಗೈಡ್ ಆಯುಕ್ತೆ ಶಕುಂತಲಾ ಚಂದ್ರಶೇಖರ್ ಸ್ವಾಗತಿಸಿ, ಡಾ. ಅನಿಲ್ ಕುಮಾರ ವಂದಿಸಿದರು.