ಶಿವಮೊಗ್ಗ: ಯಾವುದೇ ರೀತಿಯ ಉತ್ಪನ್ನಗಳ ಮಾರಾಟದ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಸಾಪ್ಪಾನಿಸ್ ಪೇಜಸ್ ಎಂಬ ಡಿಜಿಟಲ್ ಸ್ಟಾರ್ಟಪ್ ಮಾರ್ಕೆ ಟಿಂಗ್ ಸಂಸ್ಥೆಯನ್ನು ಆರಂಭಿಸಲಾಗಿದೆ ಎಂದು ಸಂಸ್ಥೆಯ ಹೆಚ್.ಆರ್. ಆಶಾ ತಿಳಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಪ್ಲಿಕೇಶನ್ ಮೂಲಕ ನಗರದ ಪ್ರತಿಯೊಂದು ಉದ್ಯಮ ಅಥವಾ ಸಂಸ್ಥೆಯ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಬಟ್ಟೆ, ಚಿನ್ನಾಭರಣ, ವಾಹನಗಳು, ಆಟೋಮೊಬೈಲ್, ಮದುವೆ ಮತ್ತು ವಿವಿಧ ಸಮಾರಂಭಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡ ಲಿದೆ ಎಂದರು.
ಅಂಗಡಿ ಇರುವ ಸ್ಥಳದೊಂದಿಗೆ, ಮೊಬೈಲ್ ನಂಬರ್ ಸಹ ದೊರೆಯಲಿದೆ. ಮೊದಲು ಅಂಗಡಿಗಳಿಗೆ ಹೋಗಿ ಮಾಹಿತಿ ಸಂಗ್ರಹಿಸಿ ವೆಬ್ ಪೋರ್ಟಲ್‌ನಲ್ಲಿ ಇದನ್ನು ಅಳವಡಿಸಲಾಗುತ್ತದೆ. ಜಸ್ಟ್ ಡಯಲ್‌ನಲ್ಲಿ ಮೊದಲು ಕಂಪನಿಗೆ ಹೋಗಿ ನಂತರ ಸಂಬಂಧಪಟ್ಟವರಿಗೆ ಕರೆ ಅಥವ ಸೇವೆ ಲಾಂಚಾಗುತ್ತದೆ. ಮೀಡಿಯೇರ್ಟಗೆ ಕಾಲ್ ಹೋಗುತ್ತದೆ. ಆದರೆ ಸಾಪ್ಪಾನಿಸ್ ಪೇಜಸ್ ಸಂಸ್ಥೆ ಗ್ರಾಹಕರು ಮತ್ತು ಮಾರಾಟಗಾರರ ನಡುವೆ ಸೇತುವೆಯಾಗಿ ಕೆಲಸ ಮಾಡಲಿದೆ. ಅಂಗಡಿ ಮಾಲೀಕರ ಬಳಿ ಮೊದಲು ಸಂಸ್ಥೆಯ ಪ್ರತಿನಿಗಳು ಹೋಗಿ ಮಾಹಿತಿ ನೀಡಲಿದ್ದಾರೆ. ಅಥವಾ ಗೂಗಲ್ ಫಾರಂನಲ್ಲಿ ಸಂಪರ್ಕಿಸಿ ಅಂಗಡಿ ಮಾಲೀಕರು ಮಾಹಿತಿ ನೀಡಬಹುದು. ಇದನ್ನ ಆ ಸಾಮಾಜಿಕ ಜಾಲತಾಣದಲ್ಲಿ ಇದನ್ನ ಮಾರುಕಟ್ಟೆ ಮಾಡಿಕೊಡಲಿದ್ದೇವೆ ಎಂದರು.
ಈ ಸಂಸ್ಥೆ ಸದ್ಯಕ್ಕೆ ಶಿವಮೊಗ್ಗದಲ್ಲಿ ಕಾರ್ಯ ನಿರ್ವಹಿಸಲಿದೆ. ಅಂಗಡಿಯವರಿಗೆ ಮೊದಲು ರಿಜಿಸ್ಟ್ರೇಷನ್ ಫ್ರೀ ಇರುತ್ತದೆ. ಒಂದು ವರ್ಷ ಅರ್ಧ ಪೇಜ್ ಉಚಿತ ಇದ್ದು, ನಂತರ ಅರ್ಧ ಪೇಜ್‌ಗೆ ದರ ನಿಗದಿಯಾಗಲಿದೆ. ನಗರದಲ್ಲಿ 35 ವಾರ್ಡ್ ನಲ್ಲಿ 80 ಸಾವಿರ ಅಂಗಡಿ ಮಳಿಗೆಗಳಿದ್ದು, ಇವುಗಳ ಮಾಹಿತಿ ಸಿಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಧೀರರಾಜ್, ಆದಿತ್ಯ, ಗಣೇಶ್, ಅಡ್ಡಿನ್ ನಿಖಿತಾ ಇದ್ದರು.