Friday, January 17, 2025
Google search engine
Homeಇ-ಪತ್ರಿಕೆಸವಳಂಗ ಬಳಿ ರಸ್ತೆ ಅಪಘಾತ: ಕ್ರೈಸ್ತ ಧರ್ಮಗುರು ಸ್ಥಳದಲ್ಲೇ ಸಾವು

ಸವಳಂಗ ಬಳಿ ರಸ್ತೆ ಅಪಘಾತ: ಕ್ರೈಸ್ತ ಧರ್ಮಗುರು ಸ್ಥಳದಲ್ಲೇ ಸಾವು

ಶಿವಮೊಗ್ಗ : ಇಲ್ಲಿನ ಸಮೀಪದ ಸವಳಂಗ ಸಮೀಪದ  ಚಿನ್ನಿಕಟ್ಟೆ ಬಳಿಯ ಹೆದ್ದಾರಿಯಲ್ಲಿ ಕಾರು ಮತ್ತು ರಸ್ತೆ ಸಾರಿಗೆ ಬಸ್ ನಡುವೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಕ್ರೈಸ್ತಧರ್ಮದ ಗುರುಗಳೊಬ್ಬರು ಸ್ಥಳದಲ್ಲಿಯೇ ಅಸುನೀಗಿದ ಘಟನೆ ನಡೆದಿದೆ.

ಮಂಗಳವಾರ ಸಂಜೆ ಸುಮಾರು 4 ಗಂಟೆಯ ವೇಳೆಗೆ ಹಾನಗಲ್ ನಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ರಸ್ತೆ ಸಾರಿಗೆ ಬಸ್ ಮತ್ತು ಶಿವಮೊಗ್ಗದಿಂದ ಹೊರಟಿದ್ದ ಸೆಲಿರಿಯೋ ವಾಹನಗಳ ನಡುವೆ ಡಿಕ್ಕಿ ಸಂಭವಿಸಿದೆ.

ಕಾರಿನಲ್ಲಿದ್ದ ಫಾದರ್ ಆಂಥೋಣಿ ಪೀಟರ್ ಸ್ಥಳದಲ್ಲಿಯೇ ಸಾವುಕಂಡಿದ್ದಾರೆ. ಅಪಘಾತಕ್ಕೆ ಕಾರಣ ತಿಳಿದು ಬರಬೇಕಿದೆ. ನ್ಯಾಮತಿ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಆಂಥೋಣಿ ಪೀಟರ್ ಅವರು ಶಿಕಾರಿಪುರ ಕಿರಿಯ ಪುಷ್ಪ ಸಂತ ತೆರೇಸರ ದೇವಾಲಯಕ್ಕೆ ಕಳೆದ ಒಂದು ವರ್ಷ ತಿಂಗಳ ಹಿಂದೆ  ಫಾದರ್ ಆಗಿ ಆಗಮಿಸಿದ್ದರು. 

RELATED ARTICLES
- Advertisment -
Google search engine

Most Popular

Recent Comments