Wednesday, January 22, 2025
Google search engine
Homeಇ-ಪತ್ರಿಕೆರೇಣುಕಾಸ್ವಾಮಿ ಕುಟುಂಬ ಭೇಟಿ ಮಾಡಿದ ಫಿಲಂ ಚೇಂಬರ್ : 5 ಲಕ್ಷ ರೂ. ಪರಿಹಾರ ಘೋಷಣೆ

ರೇಣುಕಾಸ್ವಾಮಿ ಕುಟುಂಬ ಭೇಟಿ ಮಾಡಿದ ಫಿಲಂ ಚೇಂಬರ್ : 5 ಲಕ್ಷ ರೂ. ಪರಿಹಾರ ಘೋಷಣೆ

ಚಿತ್ರದುರ್ಗ: ಯಾರು ತಪ್ಪು ಮಾಡಿದರು ಅದು ತಪ್ಪೇ ದೊಡ್ಡ ವ್ಯಕ್ತಿ, ಚಿಕ್ಕ ವ್ಯಕ್ತಿ ಎಂಬ ಪ್ರಶ್ನೆ ಇಲ್ಲ, ಕಾನೂನಿಗೆ ಯಾರು ದೊಡ್ಟವರಲ್ಲ, ನಾವು ಕುಟುಂಬಕ್ಕೆ ಸಾಂತ್ವನ ಹೇಳಲು ಬಂದಿದ್ದೇವೆ ಎಂದು ಫಿಲಂ ಚೇಂಬರ್ ಅಧ್ಯಕ್ಷ ಎನ್.ಎಂ.ಸುರೇಶ್ ಹೇಳಿದರು.

ಚಿತ್ರದುರ್ಗ ನಗರದ ರೇಣುಕಾಸ್ವಾಮಿ ಅವರ ಕುಟುಂಬಕ್ಕೆ ಧೈರ್ಯ ತುಂಬಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಲನಚಿತ್ರ ಮಂಡಳಿಯಿಂದ ದರ್ಶನ್ ಅವರನ್ನು ಬ್ಯಾನ್ ಮಾಡುವುದು ನಮ್ಮ ಕೈಯಲ್ಲಿ ಇಲ್ಲ, ಆದರು ಕಲಾವಿದರ ಸಂಘದ ಜೊತೆ ಮಾತನಾಡಿ ತಿರ್ಮಾನ ಕೈಗೊಳ್ಳುತ್ತೇವೆ. ಒಟ್ಟು ಐದು ಲಕ್ಷ ಪರಿಹಾರ ನೀಡುತ್ತೇವೆ. ಕುಟುಂಬಕ್ಕೆ ಯಾವುದಾದರೂ ಒಂದು ಶಾಶ್ವತ ಪರಿಹಾರ ಒದಗಿಸುತ್ತೇನೆ. ದರ್ಶನ್ ಅವರಿಂದ ಚಿತ್ರರಂಗದ ಚಲನಚಿತ್ರ ಮಂಡಳಿಯನ್ನು ದೂಷಣೆ ಮಾಡಬೇಡಿ ಎಂದು ತಿಳಿಸಿದರು.

ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಸಾರಾ ಗೋವಿಂದ್ ಮಾತನಾಡಿ, ಈ ನಾಡು ಜಲ ನೆಲದ ರಕ್ಷಣೆಗಾಗಿ ಹೋರಾಟ ಮಾಡಿದ್ದು ನನಗೆ ಸಂತೋಷ ತಂದಿದೆ. ನಾವೆಲ್ಲರೂ ಬಂದಿರುವುದು ರೇಣುಕಾಸ್ವಾಮಿ ಕುಟುಂಬಕ್ಕೆ ಧೈರ್ಯ ತುಂಬಿ ನಿಮ್ಮ ಜೊತೆ ನಾವಿದ್ದೇವೆ ಎಂಬ ಸಂದೇಶಕ್ಕೆ ಬಂದಿದ್ದೇವೆ. ಕಾನೂನಿಗಿಂತ ಯಾರು ದೊಡ್ಡವರಲ್ಲ, ಸರ್ಕಾರ ಮತ್ತು ಪೋಲಿಸ್ ಇಲಾಖೆ ಉತ್ತಮವಾಗಿ ತನಿಖೆ ನಡೆಸುತ್ತಿದೆ. ಯಾರ ಮುಲಾಜಿಗೆ ಒಳಗಾಗುವುದು ಬೇಡ, ಯಾರೋ ಮಾಡಿದ ತಪ್ಪಿಗೆ ಎಲ್ಲಾರೂ ಹೊಣೆಯಾಗುವುದು ಸಾಧ್ಯವಿಲ್ಲ. ರೇಣುಕಾಸ್ವಾಮಿ ಅವರ ಹೆಂಡತಿ ಮತ್ತು ತಾಯಿ ಇಬ್ಬರನ್ನು ನೋಡಿ ಮನ ಕುಲುಕುತ್ತಿದೆ ಎಂದರು.

ನಿರ್ಮಾಪಕ ಸಂಘದ ಅಧ್ಯಕ್ಷ ಬಾಣಕರ್ ಮಾತನಾಡಿ, ಶಾಮನೂರು ಶಿವಶಂಕರಪ್ಪ ಅವರ ಬಳಿ ಮಾತನಾಡಿ ರೇಣುಕಾಸ್ವಾಮಿ ಅವರ ಕುಟುಂಬಕ್ಕೆ ಸರ್ಕಾರಿ ಕೆಲಸವನ್ನು ಸಹ ಕೊಡಿಸುವ ಭರವಸೆ ನೀಡಿದ್ದಾರೆ. ಈ ಪ್ರಕರಣಕ್ಕೆ ಚಿತ್ರರಂಗ ಕ್ಷಮೆ ಕೇಳುತ್ತದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಎಸ್.ಎ.ಚಿನ್ನೇಗೌಡ, ಕೆ.ವಿ.ಚಂದ್ರಶೇಖರ್, ಜಿ.ವೆಂಕಟೇಶ್, ಬಾಮ ಗಿರೀಶ್, ರಾಮಕೃಷ್ಣ, ತುಶಾಲ್, ಸಿದ್ದರಾಜು, ಸುದರ್ಶನ್, ಕೆಂಪಣ್ಣ, ಜಯಸಿಂಹ ಮುಸರಿ, ಉಮೇಶ್ ಬಾಣಕರ್, ಕುಮಾರ್, ಬಿ.ಕಾಂತರಾಜ್ ಇದ್ದರು.

RELATED ARTICLES
- Advertisment -
Google search engine

Most Popular

Recent Comments