ಶಿವಮೊಗ್ಗ: ಸಹ್ಯಾದ್ರಿ ವಿಜ್ಞಾನ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ಪರಿಸರ ವಿಜ್ಞಾನ ವಿಭಾಗದ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಗಿಡಗಳನ್ನು ನೆಡುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ನಾಗರಾಜ್ ಪರಿಸರ ಅವರು ಮಾತನಾಡಿ ಪರಿಸರ ದಿನಾಚರಣೆಯ ಮಹತ್ವ ವನ್ನು ಮತ್ತು ನಮ್ಮೆಲ್ಲರ ಜವಾಬ್ದಾರಿ ಏನು ಎಂಬುದರ ಕುರಿತು ಮಾತನಾಡಿದರು. ಭೂಮಿ ಬರಡಾಗದಂತೆ, ಮರುಭೂಮಿಯಾಗದಂತೆ ನೋಡಿಕೊಂಡು ಹೆಚ್ಚು ಹೆಚ್ಚು ಗಿಡಮರಗಳನ್ನು ಬೆಳೆಸಿ ಬರ ಬರದ ಹಾಗೆ ಮಾಡಬೇಕಾಗಿದೆ ಎಂದು ಘೋಷ ವಾಕ್ಯದ ಕುರಿತು ತಿಳಿಸಿದರು.
ಸುಸ್ಥಿರ ಅಭಿವೃದ್ಧಿಯತ್ತ ಎಲ್ಲರ ಚಿತ್ತವಿದ್ದಾಗ ಮಾತ್ರ ಪರಿಸರ ಸಂರಕ್ಷಣೆಯಾಗುವುದು,ನಾವೆಲ್ಲಾ ಸರಳ ಜೀವನದ ಸೂತ್ರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಪರಿಸರ ಸ್ನೇಹಿ ಜೀವನ ನಡೆಸೋಣ ಎಂದು ಎಲ್ಲರಲ್ಲಿ ಕೇಳಿಕೊಂಡರು. ಪರಿಸರಕ್ಕೆ ಹಾನಿಯಾಗುವ ಯಾವುದೇ ಯೋಜನೆಗಳನ್ನು ಮಾಡಲು ನಾವುಗಳು ಬಿಡ ಬಾರದು ಎಂದು ತಿಳಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ.ರಾಜೇಶ್ವರಿ. ಎನ್ ರವರು ವಹಿಸಿ ನಮಗೆಲ್ಲರಿಗೂ ಜವಾಬ್ದಾರಿ ಇದೆ ನಾವೆಲ್ಲ ನಾವಿರುವ ಸ್ಥಳಗಳಲ್ಲಿ ಸ್ವಚ್ಛತೆಗೆ ಮಹತ್ವ ನೀಡಬೇಕಾಗಿದೆ. ನಾವು ಬದುಕುವ ಜೊತೆ ಎಲ್ಲ ಜೀವಜಂತುಗಳಿಗೂ ಬದುಕಲು ಹೆಚ್ಚು ಹೆಚ್ಚು ಗಿಡಮರಗಳನ್ನು ಬೆಳೆಸಿರೆಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶಿವಾನಂದ್ ಮೂಡ್ವಿ ಕ್ಲಸ್ಟರ್ ಹೆಡ್ ಆಪರೇಷನ್ ಶಿವಮೊಗ್ಗ ಹಾಗೂ ಕುಶಾಲಪ್ಪ ಭಾಗವಹಿಸಿದ್ದರು. ಡಾ. ನಾಗರಾಜ್.ಎನ್ ವಿದ್ಯಾರ್ಥಿ ಕ್ಷೇಮಾಧಿಕಾರಿಗಳು, ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಡಾ. ಹಾ.ಮ.ನಾಗಾರ್ಜುನ , ಅರುಣ್ ಕುಮಾರ್.ಎನ್. ಸಿ ಉಪಸ್ಥಿತರಿದ್ದರು.