Thursday, January 16, 2025
Google search engine
Homeಇ-ಪತ್ರಿಕೆರಾಜ್ಯಪರೋಪಕಾರಂನಿಂದ ಮುಂಗಾರು ಹಂಗಾಮಿನ ಹಸಿರೀಕರಣ ಆಂದೋಲನ:  ಶ್ರೀಧರ್ ಎನ್.ಎಂ.

ಪರೋಪಕಾರಂನಿಂದ ಮುಂಗಾರು ಹಂಗಾಮಿನ ಹಸಿರೀಕರಣ ಆಂದೋಲನ:  ಶ್ರೀಧರ್ ಎನ್.ಎಂ.

ಶಿವಮೊಗ್ಗ: ಸ್ಮಾಟ್ ಸಿಟಿ ಎಂದರೆ ಕೇವಲ ಸ್ಮಾರ್ಟ್ ಕಟ್ಟಡ, ಸ್ಮಾರ್ಟ್ ಲಾಜೆಸ್ಟಿಕ್, ಸ್ಮಾರ್ಟ್ ರಸ್ತೆ ಮತ್ತಿತರೆ ಭೌತಿಕ ಅಭಿವೃದ್ಧಿ ಅಷ್ಟೇ ಅಲ್ಲ. ನಗರದ ನಾಗರೀಕರ ಸಹಕಾರ ಮತ್ತು ಸಹಭಾಗಿತ್ವದಿಂದ ಸುಂದರ ಮಾಲಿನ್ಯ ಮುಕ್ತ ಪರಿಸರ ನಿರ್ಮಾಣದೊಂದಿಗೆ ಮಾನವ ಸಂಬಂಧ ವೃದ್ಧಿ, ಸೌಹರ್ದತೆಯ ಸಮಾಜದಿಂದ ಕೂಡಿದ್ದರೆ ಮಾತ್ರ ಸ್ಮಾರ್ಟ್ ಸಿಟಿಗೆ ಪರಿಪೂರ್ಣ ಅರ್ಥ ಬರುತ್ತದೆ ಎಂದು ಪರೋಪಕಾರಂನ ಮುಖ್ಯಸ್ಥ ಶ್ರೀಧರ್ ಎನ್.ಎಂ. ಅವರು ಹೇಳಿದರು.

ಪರೋಪಕಾರಂ ಕುಟುಂಬದ ವತಿಯಿಂದ  ಇಲ್ಲಿನ ಬಸವೇಶ್ವರ ನಗರದ ಶ್ರೀ ಮಹಾವೀರ ಸಾರ್ವಜನಿಕ ಉದ್ಯಾನವನದಲ್ಲಿ ೭೮೧ನೇ ಕಾರ್ಯಕ್ರಮದ ಭಾಗವಾಗಿ ಹಮ್ಮಿಕೊಂಡಿದ್ದ ೨೪ ಜೈನ ತೀಥಂಕರರ ಪವಿತ್ರ ವೃಕ್ಷಗಳ ಉದ್ಯಾನವನದಲ್ಲಿ ನೆಟ್ಟ ಗಿಡಗಳ ಆರೈಕೆ ಜೊತೆಗೆ ಹೊಸ ಗಿಡಗಳನ್ನು ನೆಡುವ ಕಾರ್ಯಕ್ರಮದ ನಂತರ ನಡೆದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ನಗರದ ಪಾರ್ಕ್‌ಗಳು ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಸಸಿ ನೆಡುವ ಹಸಿರೀಕರಣ ಆಂದೋಲನಕ್ಕೆ ಚಾಲನೆ ನೀಡಲಾಗಿದೆ. ಪ್ರತಿ ಭಾನುವಾರ ಮತ್ತು ಬುಧವಾರ ಸಸಿ ನೆಡುವ ಕಾರ್ಯಕ್ರಮದ ಮೂಲಕ ಪರೋಪಕಾರಂ ಕುಟುಂಬದ ಸದಸ್ಯರು ಹಾಗೂ ಸಾರ್ವಜನಿಕರನ್ನು ಒಂದೆಡೆ ಸೇರಿಸಿ ನಾಗರೀಕ ಸಂಬಂಧವನ್ನೂ ಬೆಸೆಯಲಾಗುವುದು ಎಂದು ತಿಳಿಸಿದರು.

ಈ ಹಿಂದೆ ಮಹಾವೀರ ಉದ್ಯಾನವನದಲ್ಲಿ ಪರೋಪಕಾರಂ ವತಿಯಿಂದ ನೆಟ್ಟ ಗಿಡಗಳನ್ನು ರಾಜಾ ಕಾಲುವೆ ದುರಸ್ತಿ ನೆಪದಲ್ಲಿ ಕಿತ್ತು ಹಾಕಲಾಯಿತು. ನಂತರ ಮತ್ತೆ ನೆಟ್ಟ ಗಿಡಗಳು ಧೂಮ ವ್ಯಸನಿಗಳು ಸೇದಿ ಬಿಸಾಡಿದ ಬೀಡಿ ಅಥವಾ ಸಿಗರೇಟಿನಿಂದ ಹೊತ್ತಿ ಕೊಂಡ ಬೆಂಕಿಗೆ ಸುಟ್ಟು ಹೋದವು. ಈಗ ಮತ್ತೆ ಛಲ ಬಿಡದ ತ್ರಿವಿಕ್ರಮನಂತೆ ಈ ಮುಂಗಾರಿನಲ್ಲಿ ಗಿಡ ನೆಡುವ ಕಾರ್ಯಕ್ರಮ ಪ್ರಾರಂಭಿಸಿದ್ದೇವೆ. ಪರಿಸರ ಪ್ರೇಮಿಗಳು ಹಾಗೂ ಉತ್ಸಾಹಿಗಳು ಈ ಹಸರೀಕರಣ ಕಾರ್ಯಕ್ರಮದಲ್ಲಿ ಭಾಗವಹಿಸಬಹುದೆಂದರು.

ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿ ಸತೀಶ್, ಅನಿಲ್ ಹೆಗ್ಡೆ, ಶ್ರೀಕಾಂತ್ ಆರ್., ಆಡಿಟರ್ ಕೃಷ್ಣಮೂರ್ತಿ, ಕಾರ್ಪೆಂಟರ್ ಕುಮಾರ್, ರಾಘವೇಂದ್ರ ಎನ್.ಎಂ., ಪಾಶ್ವನಾಥ್ ಬಿ., ಓಂ ಪ್ರಕಾಶ್, ಬಾಹುಬಲಿ, ಜಯಸ್ವಾಮಿ, ವಚನ ಜಗದೀಶ್, ರಾಘವೇಂದ್ರ ಪೈ, ಕಿರಣ್ ಆರ್., ವಿಜಯ್ ಕಾರ್ತಿಕ್, ವೈಷ್ಣವಿ, ವೈಶಾಖ, ಚರಿತಾ (ಚರ್ರಿ), ಶ್ರೀಯಾನ್  ಮತ್ತಿತರರು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular

Recent Comments